Advertisement

ನಕ್ಕು ನಗಿಸುವ ಚಿತ್ರ “ಅಪ್ಪೆ  ಟೀಚರ್‌’ 

06:45 AM Mar 26, 2018 | |

ಉಡುಪಿ: ತುಳು ಚಿತ್ರರಂಗಕ್ಕೂ ಹಾಸ್ಯಕ್ಕೂ ಎಲ್ಲಿಲ್ಲದ ನಂಟು. ಆದರೆ ಪ್ರೇಕ್ಷಕರಿಗೆ ಹಾಸ್ಯ ಚಿತ್ರಗಳು ಏಕತಾನತೆಗೆ ತಿರುಗುತ್ತಿವೆ ಎನ್ನುವಷ್ಟರಲ್ಲಿ ಅಪ್ಪೆ ಟೀಚರ್‌ ಬಂದಿದ್ದಾರೆ! 

Advertisement

ಹಾಸ್ಯವನ್ನೂ  ವಿಭಿನ್ನ ಶೈಲಿಯಲ್ಲಿ ಪ್ರೇಕ್ಷಕರಿಗೆ ಉಣಬಡಿಸಬಹುದು ಎಂದು ನಿರ್ದೇಶಕ ಕಿಶೋರ್‌ ಮೂಡಬಿದಿರೆ  “ಅಪ್ಪೆ ಟೀಚರ್‌’ ಚಿತ್ರದ ಮೂಲಕ ತೋರಿಸಿದ್ದಾರೆ. ಸಿನಿಮಾದ ಪ್ಲಸ್‌ ಪಾಯಿಂಟ್‌ ಕಲಾವಿದರು. ದೇವದಾಸ್‌ ಕಾಪಿಕಾಡ್‌, ನವೀನ್‌ ಡಿ. ಪಡೀಲ್‌, ಅರವಿಂದ್‌ ಬೋಳಾರ್‌, ಭೋಜರಾಜ್‌ ವಾಮಂಜೂರು, ಉಮೇಶ್‌ ಮಿರ್ಜಾ ಹೀಗೆ ತುಳು ಚಿತ್ರರಂಗದ ದಿಗ್ಗಜರೆಲ್ಲರನ್ನು ಒಂದೇ ಸ್ಕ್ರೀನಿನಲ್ಲಿ ನೋಡಬಹುದು. ಎಲ್ಲರ ಕಾಮಿಡಿ ಟೈಮಿಂಗ್‌ ಮತ್ತು ನಟನೆಗಳು ಪ್ರೇಕ್ಷಕರನ್ನು ಫ‌ುಲ್‌ ಆಗಿ ನಗಿಸುತ್ತವೆ. ಒಂದು ಕೋಟಿ ಬಜೆಟ್‌ನಲ್ಲಿ ಕೆ.ರತ್ನಾಕರ ಕಾಮತ್‌  ನಿರ್ಮಾಣ ಮಾಡಿರುವ ಸಿನೆಮಾದ ಮೇಕಿಂಗ್‌ ಹಾಗೂ ಅದ್ದೂರಿತನಕ್ಕೆ ಪರಭಾಷೆಯ ಸಿನೆಮಾಗಳು ನಾಚಿಕೊಳ್ಳಬೇಕು ಎಂದರೆ ತಪ್ಪಾಗಲಾರದು. 

ಉದಯ ಲೀಲಾರ ಕೆಮರಾ ಕೈಚಳಕ ಮತ್ತು ತುಳುನಾಡ ಸಂಗೀತ ಮಾತ್ರಿಕ ರವಿ ಬಸ್ರೂರ್‌ ಹಿನ್ನೆಲೆ ಸಂಗೀತ ಹಾಗೂ ಸಂಗೀತ ನಿರ್ದೇಶನ ಮಾಡಿರುವ ವನೀಲ್‌ ವೇಗಸ್‌ ಚಿತ್ರ ಅಂದವಾಗಿ ಮೂಡಿಬರಲು ಪ್ರಮುಖ ಪಾತ್ರ ವಹಿಸಿವೆ. ಸಿನಿಮಾದ ಸಕ್ಸಸ್‌ಗೆ ಪುಷ್ಠಿ ಕೊಡುವಂತೆ ರೀಮೇಕ್‌ ಹಕ್ಕು  ತಮಿಳು ಹಾಗೂ ಮರಾಟಿಗೆ ಬಹುದೊಡ್ಡ ಮೊತ್ತಕ್ಕೆ ಮಾರಾಟವಾಗುತ್ತಿವೆ ಎಂಬ ವ್ಯಾಲಿ ಸದ್ದಿಲ್ಲದೇ ಹೊರಗೆ ಬಿದ್ದಿದೆ.  

Advertisement

Udayavani is now on Telegram. Click here to join our channel and stay updated with the latest news.

Next