Advertisement
– ನಿರ್ದೇಶಕ ರವಿತೇಜ ಹೀಗೆ ತುಂಬ ಖುಷಿಯಲ್ಲೇ ಹೇಳುತ್ತಾ ಹೋದರು. ಅವರು ಹೇಳಿದ್ದು, ತಮ್ಮ ನಿರ್ದೇಶನದ “ಸಾಗುತ ದೂರ ದೂರ’ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ. “ಸಿನಿಮಾ ನೋಡಿದ ಪ್ರತಿಯೊಬ್ಬರೂ ಚಿತ್ರದ ಕಂಟೆಂಟ್ ಬಗ್ಗೆ ಮಾತಾಡುತ್ತಿದ್ದಾರೆ. ತಾಯಿ, ಮಗನ ಎಮೋಷನಲ್ ಕುರಿತು ಹೊಗಳುತ್ತಿದ್ದಾರೆ. ನನಗೆ ಚಿತ್ರ 50 ದಿನ, ಶತದಿನ ಹೋಗುವುದು ಬೇಡ. ಜನರಿಗೆ ತಲುಪಿದರೆ ಸಾಕು. ನಮ್ಮ ನಿರ್ಮಾಪಕರೂ ಸಹ, ಈ ಸಿನಿಮಾದಿಂದ ಹಣ ಬರದಿದ್ದರೂ ಪರವಾಗಿಲ್ಲ. ಕನ್ನಡಿಗರಿಗೆ ಚಿತ್ರ ರೀಚ್ ಆಗಬೇಕು. ಆಗ ನಾವು ಕಷ್ಟಪಟ್ಟಿದ್ದಕ್ಕೂ ಸಾರ್ಥಕವಾಗುತ್ತೆ ಅಂತ. ಹಾಗಾಗಿ, ಕನ್ನಡಿಗರು ದಯವಿಟ್ಟು, ಒಮ್ಮೆ ಈ ಚಿತ್ರ ನೋಡಿ. ಸಾಧ್ಯವಾದರೆ, ಬೇರೆಯವರಿಗೂ ನೋಡುವಂತೆ ಮನವಿ ಮಾಡಿ. ಇಂದು ಈ ಚಿತ್ರ ಗೆಲುವಿನ ಹಾದಿ ಹಿಡಿಯಲು ಕಾರಣ ಪತ್ರಿಕೆಗಳು ಹಾಗೂ ಟಿವಿ ಮಾಧ್ಯಮ. ಎಲ್ಲರೂ ಚಿತ್ರದ ಕಥೆ, ಗುಣಮಟ್ಟ ಕುರಿತು ಬರೆದಿದ್ದರಿಂದಲೇ ಇಂದು ಜನರು ಬಂದು ಸಿನಿಮಾ ನೋಡುತ್ತಿದ್ದಾರೆ. ಬೇರೆ ಯಾರ ಮಾತನ್ನೂ ಕೇಳದೆ, ಒಂದು ಸಲ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ’ ಎಂದು ಮನವಿ ಇಟ್ಟರು ರವಿತೇಜ.
ಉಷಾ ಭಂಡಾರಿ ಅವರಿಗೂ ಸಿನಿಮಾ ಮೇಲೆ ನಂಬಿಕೆ ಇತ್ತಂತೆ. ಅದೀಗ ನಿಜವಾಗಿದ್ದರಿಂದ, ಒಳ್ಳೆಯ ಸಿನಿಮಾದಲ್ಲಿ ನಾನಿದ್ದೇನೆ ಎಂಬ ತೃಪ್ತಿ ಅವರದು. “ಚಿತ್ರಮಂದಿರ ಸಮಸ್ಯೆ ತಲೆದೋರಿದೆ. ಚಿತ್ರರಂಗದ ಹಿರಿಯರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ಇಂತಹ ಒಳ್ಳೆಯ ಸಿನಿಮಾಗಳಿಗೂ ತೊಂದರೆ ಆಗುತ್ತೆ. ಬಿಡುಗಡೆ ಸಂಖ್ಯೆ ಹೆಚ್ಚಾದರೆ, ಯಾವ ಸಿನಿಮಾಗೂ ಒಳ್ಳೆಯದಾಗಲ್ಲ. ಇದಕ್ಕೊಂದು ನಿಯಮ ರೂಪಿಸುವ ಅಗತ್ಯವಿದೆ’ ಎಂಬುದು ಅವರ ಮಾತು. ನಟ ಮಹೇಶ್ ಸಿದ್ದು ವೇದಿಕೆಯಲ್ಲೇ ಭಾವುಕರಾದರು. ಕಾರಣ, ಇಷ್ಟು ವರ್ಷ ಕಷ್ಟಪಟ್ಟಿದ್ದಕ್ಕೂ ಸಾರ್ಥಕ ಆಗಿದೆ ಎಂಬುದು. ಸಿನಿಮಾ ಮೆಚ್ಚಿರುವ ಕನ್ನಡಿಗರು, ಮಹೇಶ್ ಸಿದ್ದು ಅವರ ನಟನೆಯನ್ನು ಒಪ್ಪಿದ್ದಾರೆ. ಬೆನ್ನು ತಟ್ಟಿದ್ದಾರೆ. ಹಾಗಾಗಿ, ಸ್ವಾಭಿಮಾನಿ ಕನ್ನಡಿಗರು ಒಳ್ಳೆಯ ಚಿತ್ರಕ್ಕೆ ಸದಾ ಬೆಂಬಲವಾಗಿರುತ್ತಾರೆ ಎಂಬುದು ಇಲ್ಲಿ ಸಾಬೀತಾಗಿದೆ ಎನ್ನುವ ಅವರು, ತಾಯಿ, ಮಗನ ಸೆಂಟಿಮೆಂಟ್ ಇಲ್ಲಿ ವಕೌìಟ್ ಆಗಿದೆ. ಚಿತ್ರ ಗೆಲುವಿನ ಸಂಭ್ರಮದಲ್ಲಿದೆ. ಆದರೂ, ಎಲ್ಲರಿಗೂ ಈ ಚಿತ್ರ ತಲುಪಬೇಕಷ್ಟೇ. ನಾನು ಫೈಟರ್ ಆಗಿದ್ದವನು. ಈ ಮೂಲಕ ಆ್ಯಕ್ಟರ್ ಅಂತಾನೂ ಸಾಬೀತಾಗಿದೆ. ಅದು ನಿಮ್ಮಿಂದ’ ಎಂದರು.
Related Articles
Advertisement