Advertisement

ಆಳ್ವಾಸ್‌ ನುಡಿಸಿರಿಯಲ್ಲಿ ನಗೆಸಿರಿ!

04:25 PM Dec 08, 2017 | |

ಇತ್ತೀಚೆಗೆ ವ್ಯಂಗ್ಯಚಿತ್ರಗಳ ಬೆಳವಣಿಗೆಗೆ ಪೂರಕವಾಗಿ ಆಳ್ವಾಸ್‌ ನುಡಿಸಿರಿಯ ಪೂರ್ವಭಾವಿ ಯಾಗಿ “ವ್ಯಂಗ್ಯಚಿತ್ರಸಿರಿ’ ಎಂಬ ರಾಜ್ಯಮಟ್ಟದ ವ್ಯಂಗ್ಯಚಿತ್ರ ಶಿಬಿರ, ಪ್ರಶಸ್ತಿ ಪ್ರದಾನ ಮತ್ತು ಪ್ರದರ್ಶನ ನಡೆಯಿತು. 

Advertisement

ಎರಡು ದಿನಗಳ ವ್ಯಂಗ್ಯಚಿತ್ರ ಶಿಬಿರಕ್ಕೆ ರಾಜ್ಯದೆಲ್ಲೆಡೆಯಿಂದ 26 ಪ್ರಸಿದ್ಧ ವ್ಯಂಗ್ಯಚಿತ್ರಕಾರ ರನ್ನು ಕರೆಸಲಾಗಿತ್ತು. ಹಿರಿಯ-ಕಿರಿಯ, ವೃತ್ತಿಪರ-ಹವ್ಯಾಸಿ ವ್ಯಂಗ್ಯಚಿತ್ರಕಾರರ ಕೂಡುವಿಕೆ ಅಲ್ಲಿನ ವಿಶೇಷ ಲವಲವಿಕೆಗೆ ಕಾರಣ ಎಂದರೆ ಅತಿಶಯೋಕ್ತಿಯಾಗದು! ಅಲ್ಲದೆ ಒಬ್ಬೊಬ್ಬರ‌ ವಿಭಿನ್ನ ಶೈಲಿ- ತಂತ್ರಗಳನ್ನು ಪ್ರತ್ಯಕ್ಷವಾಗಿ ಕಾಣುವ ಸೌಭಾಗ್ಯ ಕೂಡ ಲಭಿಸಿತು!

ಪತ್ರಿಕೆಗಳಲ್ಲಿ ಪ್ರಕಟನೆಗೆ ಸೀಮಿತವಾಗಿದ್ದ ಪಾಕೆಟ್‌ ಕಾಟೂìನ್‌ಗಳನ್ನು ವ್ಯಂಗ್ಯಚಿತ್ರಕಾರರು ಒಂದೆಡೆ ಸೇರಿ ದೊಡ್ಡದಾಗಿ ಬರೆದಾಗ ಹೇಗಿರಬಹುದು ಅನ್ನುವ ವಿಚಾರ ಎಲ್ಲರಿಗೂ ಕುತೂಹಲಕಾರಿ. ಆದ್ದರಿಂದ ಎರಡು ದಿನಗಳ ಕಾರ್ಯಾಗಾರ ಹೇಗಿರಬೇಕು ಎನ್ನುವ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿತ್ತು. ಮೊದಲ ದಿನ “ಕನ್ನಡ ಪ್ರೀತಿ’ ಮತ್ತು “ಅಭಿವ್ಯಕ್ತಿ ಸ್ವಾತಂತ್ರ್ಯ’ ಎಂಬ ವಿಷಯಗಳ ಮೇಲೆ ವ್ಯಂಗ್ಯಚಿತ್ರಗಳನ್ನು, ಎರಡನೇ ದಿನ ಪ್ರಮುಖ ವ್ಯಕ್ತಿಗಳ ವ್ಯಂಗ್ಯ ಭಾವಚಿತ್ರಗಳನ್ನು ಬಣ್ಣದಲ್ಲಿ ರಚಿಸಲಾಯಿತು.

ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಪಳಗಿದ ಹಿರಿಯರಾದ ಬೆಂಗಳೂರಿನ ವಿ. ಜಿ. ನರೇಂದ್ರ, ಶಿವಮೊಗ್ಗದ ಮೇಗರವಳ್ಳಿ ಸುಬ್ರಹ್ಮಣ್ಯ, ದಾವಣಗೆರೆಯ ಎಚ್‌. ಬಿ. ಮಂಜುನಾಥ್‌, ಧಾರವಾಡದ ಅಶೋಕ್‌ ಜೋಶಿ, ಹೊಸನಗರದ ಏಕನಾಥ್‌ ಬೊಂಗಾಳೆ, ವೆಂಕಟ್‌ ಭಟ್‌ ಎಡನೀರು, ಸಂಕೇತ್‌ ಗುರುದತ್ತ ಮುಂತಾದವರ ಹುಮ್ಮಸ್ಸು ಯುವ ಕಲಾವಿದರಿಗೆ ಸ್ಫೂರ್ತಿ ತುಂಬುವಂತಿತ್ತು. ಮಣಿಪಾಲದ ಜೇಮ್ಸ್‌ ವಾಜ್‌ ಮತ್ತು ತೀರ್ಥಹಳ್ಳಿಯ ನಟರಾಜ್‌ ಅರಳಸುರುಳಿಯವರ ಕೈಚಳಕ ಚೆನ್ನಾಗಿ ನಗಿಸುವಂತಿತ್ತು. ಮಂಗಳೂರಿನ ಜಾನ್‌ ಚಂದ್ರನ್‌, ಉದಯ ವಿಟ್ಲ ಮತ್ತು ಶೈಲೇಶ್‌ ಉಜಿರೆ ಅವರ ಚಿತ್ರಗಳಲ್ಲಿ ತಮ್ಮದೇ ಎಂದಿನ ರೀತಿಯ ಪ್ರಬುದ್ಧ ವಿಡಂಬನೆಯಿತ್ತು. ಖ್ಯಾತ ವ್ಯಂಗ್ಯಚಿತ್ರಕಾರರಾದ ಬಿ. ಜಿ. ಗುಜ್ಜಾರಪ್ಪ, ರಾಮಧ್ಯಾನಿ, ಪ್ರಕಾಶ್‌ ಶೆಟ್ಟಿ ಮತ್ತು ಹರಿಶ್ಚಂದ್ರ ಶೆಟ್ಟಿ ತೋರಿದ ಆಕರ್ಷಕ ಶೈಲಿಯ ಝಲಕ್‌ ಬೆರಗುಗೊಳಿಸುವಂತಿತ್ತು. ರಘುಪತಿ ಶೃಂಗೇರಿ, ಯತೀಶ್‌ ಸಿದ್ಧಕಟ್ಟೆ, ಜಿ. ಎಂ. ಬೊಮ್ನಳ್ಳಿ, ದತ್ತಾತ್ರಿ ಎಂ. ಎನ್‌., ಗಂಗಾಧರ ಅಡ್ಡೇರಿ ಮುಂತಾದ ಯುವ ಉದಯೋನ್ಮುಖ ವ್ಯಂಗ್ಯಚಿತ್ರಕಾರರ ದಂಡೇ ಶಿಬಿರದಲ್ಲಿತ್ತು.  

ಸಿರಿ ಎಂದರೆ ಸಂಪತ್ತು! ಕನ್ನಡ ಭಾಷೆ, ನಾಡು, ನುಡಿ ಸಂಪತ್ತಿನ ಜತೆಗೆ ಸಾಹಿತ್ಯದ ಒಂದು ಅವಿಭಾಜ್ಯ ಅಂಗವಾಗಿರುವ ವ್ಯಂಗ್ಯಚಿತ್ರ ಕಲೆಯೂ ಸಂಪತ್ತು ಎಂಬ ಗೌರವ ಆಳ್ವಾಸ್‌ ವ್ಯಂಗ್ಯಚಿತ್ರಸಿರಿಯಲ್ಲಿ ಪ್ರಾಪ್ತವಾಗಿದೆ. ಅದರಲ್ಲಿ ಬೆಳಗುವ ಒಂದು ಮುತ್ತನ್ನು ವ್ಯಂಗ್ಯಚಿತ್ರಸಿರಿ ಪ್ರಶಸ್ತಿಗೂ ಆರಿಸಲಾಯಿತು. ಖ್ಯಾತ ವ್ಯಂಗ್ಯಚಿತ್ರಕಾರ ಪ್ರಕಾಶ್‌ ಶೆಟ್ಟಿ ಈ ಪ್ರಶಸ್ತಿಗೆ ಭಾಜನರಾದರು.  

Advertisement

ವಿ.ಆರ್‌. ಸಿ. ಶೇಖರ್‌, ಜಿ. ಎಸ್‌. ನಾಗನಾಥ್‌, ಜೀವನ್‌ ಶೆಟ್ಟಿ, ಬಾಬು ಜತ್ತಕರ್‌ ಅವರು ಡಾ| ಪದ್ಮನಾಭ ಶೆಣೈ ಹಾಗೂ ಆಳ್ವಾಸ್‌ ವಿಶುಯಲ್‌ ಆರ್ಟ್ಸ್ ವಿಭಾಗದ ಭಾಸ್ಕರ್‌, ಶರತ್‌ ಮತ್ತು ವಿದ್ಯಾರ್ಥಿ ವೃಂದದ ಸಲಹೆ, ಸಹಕಾರದೊಂದಿಗೆ ಶಿಬಿರವನ್ನು ಸಂಘಟಿಸಿದ್ದರು.

ವಿನ್ಯಾಸ್‌

Advertisement

Udayavani is now on Telegram. Click here to join our channel and stay updated with the latest news.

Next