Advertisement

ಕನ್ನಡ ಉಳಿದರೆ ನಮಗೂ ಉಳಿಗಾಲ

03:46 PM Apr 07, 2017 | Team Udayavani |

ಕಲಬುರಗಿ: ಕನ್ನಡ ಉಳಿದರೆ ಮಾತ್ರ ನಾವು ಉಳಿತೇವೆ. ಸಂಪೂರ್ಣ ಆಡಳಿತ ಭಾಷೆ ಮತ್ತು ಉದ್ಯೋಗದ, ಅನ್ನದ ಭಾಷೆಯಾದಾಗಲೇ ನಾವು ಇನ್ನಷ್ಟು ಬೆಳೆಯಲು ಸಾಧ್ಯ ಎಂದು ಹಿರಿಯ ಹೋರಾಟಗಾರ ಹಾಗೂ ಹೈದ್ರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷಣ ದಸ್ತಿ ಹೇಳಿದರು. 

Advertisement

ನಗರದ ಕನ್ನಡ ಭವನದಲ್ಲಿ ಕಸಾಪ ಉತ್ತರ ವಲಯ ಗುರುವಾರ ಹಮ್ಮಿಕೊಂಡಿದ್ದ ಕನ್ನಡ ಭಾಷೆ ಮತ್ತು ಬದುಕು ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  ಕನ್ನಡ ಮಾತೃಭಾಷೆ ಜತೆಯಲ್ಲಿ ಅನ್ನ ಒದಗಿಸುವ ಉದ್ಯೋಗದ ಭಾಷೆಯೂ ಆಗಬೇಕು. ಆದರೆ, ಕರ್ನಾಟಕದಲ್ಲಿ ಅದಿನ್ನು ಆಗಿಲ್ಲ.

ಅದರಿಂದಾಗಿಯೇ ಇವತ್ತು ಕನ್ನಡ ಉಳಿಸುವ ಮಾತುಗಳು, ಕಟ್ಟುವ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಇದೆಲ್ಲವನ್ನು ಈ ನಾಡು ಪ್ರೀತಿಸುವ ಅಭಿಮಾನಿಗಳು ಅರ್ಥ ಮಾಡಿಕೊಂಡು ಅನ್ನದ ಭಾಷೆಯನ್ನಾಗಿ ಮಾಡಲು ಹೆಜ್ಜೆ ಇಡಬೇಕು ಎಂದು ಹೇಳಿದರು. ಕನ್ನಡ ಕಲಿತವರಿಗೆ ಉದ್ಯೋಗ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 

ನೇಮಕಾತಿಯಿಂದ ವಂಚಿತಗೊಳ್ಳುತ್ತಿದ್ದಾರೆ. ಆಂಗ್ಲ ಭಾಷಿಕರಿಗೆ ಉದ್ಯೋಗಗಳು ಹೇರಳವಾಗಿ ಸಿಗುತ್ತಿವೆ. ಕನ್ನಡದಲ್ಲಿ ಓದಿದವರಿಗೆ ಉದ್ಯೋಗ ಸಿಗಬೇಕು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕರೂ ಸಹ ಯಾವುದೇ ಉಪಯೋಗ ಆಗಿಲ್ಲ. ಕನ್ನಡ ಕಲಿತವರಿಗೆ ಉದ್ಯೋಗ ಸಿಗಬೇಕು ಎಂದು ಹೇಳಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಫಾದರ್‌ ಸಂತೋಷ ಮಾತನಾಡಿ, ನಮ್ಮ ಭಾಷೆಯನ್ನು ನಾವು ಪ್ರೀತಿಸಬೇಕು. ಯಾರು ತಮ್ಮ ಭಾಷೆಯನ್ನು ಪ್ರೀತಿಸುತ್ತಾರೋ ಅವರು ಅಭಿವೃದ್ಧಿ ಹೊಂದುತ್ತಾರೆ. ಪ್ರತಿಯೊಬ್ಬರೂ ಮಾತೃಭಾಷೆಯನ್ನು ಪ್ರೀತಿಸಬೇಕು. ಅದರಿಂದ ಒಂದು ಸಾಂಸ್ಕೃತಿಕ ತೇರು ಎಳೆಯಲು ಕಸಾಪ ಮುಂದಾಗಿರುವುದು ನಿಜಕ್ಕೂ ಸಂತೋಷದ ವಿಷಯ ಎಂದು ಹೇಳಿದರು.

Advertisement

ಕನ್ನಡ ಭಾಷೆ ಮತ್ತು ಬದುಕು ಕುರಿತು ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಪ. ಮಾನು ಸಗರ್‌, ಭಾಷಾವಾರು ಪ್ರಾಂತ ರಚನೆಯಾಗಿ 60 ವರ್ಷಗಳು ಕಳೆದರೂ ಸಹ ಕನ್ನಡ ಭಾಷೆ ಬೆಳವಣಿಗೆಗೆ ಇಲ್ಲಿಯವರೆಗಿನ ಸರ್ಕಾರಗಳು ಸಂಪೂರ್ಣ ನಿರ್ಲಕ್ಷಿಸಿವೆ. ಆಡಳಿತ ಭಾಷೆಯಾಗಿಯೂ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ.

ಪ್ರತಿ ಕಚೇರಿಗಳಲ್ಲಿ ಆಂಗ್ಲ ಭಾಷೆ ಬಳಕೆ ನಿರಂತರವಾಗಿ ನಡೆಯುತ್ತಿದೆ. ಕನ್ನಡ ಬಳಕೆ ಆಡಳಿತದಲ್ಲಿ ಆಗುತ್ತಿಲ್ಲ. ಇದರಿಂದ ಕನ್ನಡ ಭಾಷೆ ದಿನದಿಂದ ದಿನಕ್ಕೆ ತನ್ನ ವರ್ಚಸ್ಸು ಕಳೆದುಕೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಉತ್ತರ ವಲಯ ಅಧ್ಯಕ್ಷ ಲಿಂಗರಾಜ ಸಿರಗಾಪುರ, ಭಾಷೆ ಮೇಲೆ ನಮಗೆ ಪೀÅತಿ ಬೇಕು. ಅಂದಾಗಲೇ ಅದು ಉಳಿಯಲು ಸಾಧ್ಯ, ಇವತ್ತು ನೌಕರಿ ಕಾರಣಕ್ಕೆ ಇತರೆ ಭಾಷೆಗೆ ಮಣೆ ಹಾಕುವ ನಾವು ನಮ್ಮ ಭಾಷೆಯನ್ನು ಕಡೆಗಣಿಸುತ್ತಿದ್ದೇವೆ.

ಈ ನಿಟ್ಟಿನಲ್ಲಿ ಪರಿಷತ್ತು ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡು ಯುವಕರ ಮನಸ್ಸಿನಲ್ಲಿ ಭಾಷೆಯ ಪೀÅತಿ ಮೊಳಕೆ ಒಡೆಯುವಂತೆ ಮಾಡಲಾಗುವುದು ಎಂದು ಹೇಳಿದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಸಿ.ಎಸ್‌. ಮಾಲಿಪಾಟೀಲ, ಸಂತೋಷ ಭೈರಾಮಡಗಿ, ಆಕಾಶ ರಾಠೊಡ ಇದ್ದರು. ಅಶೋಕ ಕಮಲಾಪುರ ಸ್ವಾಗತಿಸಿದರು. ಜಿ.ಜಿ. ವಣಿಕ್ಯಾಳ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next