Advertisement
ಯೂರೋಪ್, ಏಷ್ಯಾ, ದಕ್ಷಿಣ ಆಫ್ರಿಕಾಗಳಲ್ಲೂ ಈ ಗ್ರಹಣ ಕಾಣಿಸಲಿದೆ. ರಾಜ್ಯದಲ್ಲಿ ರಾತ್ರಿ 10.52ರ ನಂತರ ಗ್ರಹಣ ನೋಡಲು ಸಾಧ್ಯವಾಗಲಿದ್ದು, 11.50ಕ್ಕೆ ಗರಿಷ್ಠಮಟ್ಟದ ಗ್ರಹಣ ಸಂಭವಿಸಲಿದೆ. ಬರಿಗಣ್ಣಿನಿಂದಲೂ ಈ ಗ್ರಹಣವನ್ನು ವೀಕ್ಷಿಸಬಹುದು.
ಸೋಮವಾರ ರಾತ್ರಿ 10.52ಕ್ಕೆ ಭೂಮಿಯ ದಟ್ಟವಾದ ನೆರಳನ್ನು ಪ್ರವೇಶಿಸುವ ಚಂದ್ರ, 12.48ಕ್ಕೆ ನೆರಳಿನಿಂದ ಆಚೆಗೆ ಸರಿಯಲಿದೆ. ಅಂದು ರಾತ್ರಿ ಉಂಟಾಗಲಿರುವ ಪ್ರಾರ್ಶ್ವ ಚಂದ್ರಗ್ರಹಣ ವೀಕ್ಷಣೆಗೆ ತಾರಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ. ಮೋಡಗಳ ಅಡಚಣೆ ಇಲ್ಲವಾದರೆ, ಅತ್ಯಂತ ಸ್ಪಷ್ಟವಾಗಿ ಗ್ರಹಣವು ಕಣ್ಣಿಗೆ ಗೋಚರಿಸಲಿದೆ.
Related Articles
ಸಾಮಾನ್ಯವಾಗಿ ಚಂದ್ರ ಭೂಮಿಯನ್ನು ಪ್ರವೇಶಿಸುವಾಗ ದಟ್ಟ ನೆರಳಿನಲ್ಲಿ ಪೂರ್ಣವಾಗಿ ಅಥವಾ ಭಾಗಶಃ ಹಾದುಹೋಗುತ್ತದೆ. ಈ ಸಂದರ್ಭದಲ್ಲಿ ಗ್ರಹಣ ಉಂಟಾಗುತ್ತದೆ. ಚಂದ್ರಗ್ರಹಣದ ಬೆನ್ನಲ್ಲೇ ಆಗಸ್ಟ್ 21ರಂದು ಸೂರ್ಯಗ್ರಹಣ ಸಂಭವಿಸಲಿದೆ. ಆದರೆ, ಇದು ಭಾರತ ಸೇರಿದಂತೆ ಏಷ್ಯಾ ಮತ್ತು ಆಫ್ರಿಕಾದ ಕೆಲ ಭಾಗಗಳಲ್ಲಿ ಗೋಚರಿಸುವುದಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
Advertisement
-ಗ್ರಹಣ ಆರಂಭ 10.52-ಗರಿಷ್ಠ ಪ್ರಮಾಣದ ಗ್ರಹಣ 11.50
-ಗ್ರಹಣ ಪೂರ್ಣಗೊಳ್ಳುವುದು 12.48