Advertisement

ಪರ್ಸ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಜೆರಾಕ್ಸ್ ಅಂಗಡಿಯ ಲತಾ

08:33 PM Jul 30, 2021 | Team Udayavani |

ಹುಳಿಯಾರು : ಪ್ರಸ್ತುತ ಸನ್ನಿವೇಶದಲ್ಲಿ ಯಾವುದೇ ವಸ್ತು ನಮ್ಮಿಂದ 1 ಸೆಕೆಂಡ್ ಮಿಸ್ ಆದ್ರೆ ವಾಪಸ್ ಪಡೆಯಲು ಅಸಾಧ್ಯ…. ಬೇಕಾದರೆ ಯಾಮಾರಿಸುವವರೇ ಹೆಚ್ಚು. ಆದರೆ, ಇಲ್ಲೊಬ್ಬ ಜೆರಾಕ್ಸ್ ಅಂಗಡಿಯ ಮಾಲೀಕರು ಗ್ರಾಹಕನ ಪರ್ಸ್ ಹಿಂದಿರುಗಿಸಿ ಪ್ರಮಾಣಿಕತೆ ಮೆರೆದಿದ್ದಾರೆ.

Advertisement

ಹುಳಿಯಾರು ಪಟ್ಟಣದ ಪೊಲೀಸ್ ಠಾಣೆ ಎದುರು ಇರುವ ಖುಷಿ ಜೆರಾಕ್ಸ್ ಅಂಗಡಿಯ ಲತಾ ಅವರು ಹುಳಿಯಾರು ಹೋಬಳಿಯ ಕಲ್ಲೇನಹಳ್ಳಿ ಗ್ರಾಮದ ಗಿರೀಶ್ ಅವರ ದಾಖಲೆಗಳನ್ನು ಜೆರಾಕ್ಸ್ ಮಾಡಿಸುವ ವೇಳೆ ಬಿಟ್ಟು ಹೋಗಿದ್ದ ಪರ್ಸ್ ( ಹಣ, ಸೇರಿದಂತೆ ಅವರ ಬೆಲೆಬಾಳುವ ದಾಖಲೆಗಳು) ಅನ್ನು ಹಿಂದಿರುಗಿಸಿದ್ದಾರೆ.

ಈ ಭೂಮಿಯ ಮೇಲೆ ಸತ್ಯ, ನ್ಯಾಯ, ನಿಷ್ಠೆ ಏನಾದರೂ ಇನ್ನೂ ಉಳಿದಿದ್ದರೆ ಅದು ಇಂತಹವರಿಂದ ಮಾತ್ರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ….. ಶುಭವಾಗಲಿ….. ಪರರ ವಸ್ತು ಪಾಷಣ ಎಂಬುವವರ ಗುಂಪಿಗೆ ಸೇರ್ಪಡೆ ಆಗಿದ್ದಾರೆ…

Advertisement

Udayavani is now on Telegram. Click here to join our channel and stay updated with the latest news.

Next