Advertisement
ಜೂ. 24ರಂದು ಬೆಂಗಳೂರಿನಿಂದ ಶ್ರಮಿಕ ರೈಲು ಹೊರಡಲಿದೆ. ತಮ್ಮ ರಾಜ್ಯಕ್ಕೆ ತೆರಳು ಇಚ್ಛಿಸುವ ಹೊರ ರಾಜ್ಯದ ವಲಸೆ ಕಾರ್ಮಿಕರನ್ನು ಜಿಲ್ಲಾಡಳಿತದಿಂದ ಪ್ರಮಾಣಿಕೃತ ಮಾರ್ಗಸೂಚಿ ಅನುಸಾರ ಕಳಹಿಸಿಕೊಡಲಾಗುತ್ತದೆ. ಇದು ಕೊನೆಯ ಅವಕಾಶವಾಗಿದೆ. ಇನ್ನುಮುಂದೆ ತಮ್ಮ ರಾಜ್ಯಕ್ಕೆ ತೆರಳು ಕಾರ್ಮಿಕರು ಸ್ವಂತ ವ್ಯವಸ್ಥೆ ಮೂಲಕ ತೆರಳಬೇಕಾಗುತ್ತದೆ. ಜಿಲ್ಲೆಯಲ್ಲಿರುವ ಕಾರ್ಮಿಕರು ತಮ್ಮ ಸ್ವಂತ ರಾಜ್ಯಕ್ಕೆ ತೆರಳು ಇಚ್ಛಿಸಿದಲ್ಲಿ ಜೂ. 23ರ ಬೆಳಗ್ಗೆ 11ರೊಳಗಾಗಿ ಉಪವಿಭಾಗಾಧಿಕಾರಿಗಳ ಕಚೇರಿ, ಸವಣೂರು (08378-241646) ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿ ಹಾವೇರಿ (08375-232468) ಅಥವಾ ಅಪರ ಜಿಲ್ಲಾಧಿಕಾರಿಗಳ ಕಚೇರಿ (08375-249015), ಜಿಲ್ಲಾಡಳಿತ ಭವನ ಹಾವೇರಿ ಅಥವಾ ಜಿಲ್ಲಾ ಕೋವಿಡ್ ಸಹಾಯವಾಣಿ 08375-249102/249103/249104 ಇಲ್ಲಿ ನೋಂದಾಯಿಸಿಕೊಳ್ಳಲು ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಕೋರಿದ್ದಾರೆ. Advertisement
ವಲಸೆ ಕಾರ್ಮಿಕರು ಸ್ವಂತ ರಾಜ್ಯಕ್ಕೆ ತೆರಳಲು ಕೊನೆ ರೈಲು
05:47 PM Jun 23, 2020 | Suhan S |
Advertisement
Udayavani is now on Telegram. Click here to join our channel and stay updated with the latest news.