Advertisement

ವಾರಾಣಸಿಯಲ್ಲಿ ಫೈನಲ್ ಕದನ : ಸ್ವ ಕ್ಷೇತ್ರದಲ್ಲಿ 2 ದಿನ ಪ್ರಧಾನಿ ಮತಬೇಟೆ

06:21 PM Mar 03, 2022 | Team Udayavani |

ವಾರಾಣಸಿ : ಉತ್ತರಪ್ರದೇಶದಲ್ಲಿ ಗುರುವಾರ 6 ನೇ ಹಂತದ ಮತದಾನ ಮುಕ್ತಾಯವಾಗುತ್ತಿದ್ದು, ಕೊನೆಯ ಹಂತದ ಮತದಾನ ಮಾರ್ಚ್ 7  ರಂದು ನಡೆಯಲಿದ್ದು,ವಾರಾಣಸಿ ಮತ್ತು ಸುತ್ತಮುತ್ತಲಿನ ಚುನಾವಣಾ ಕದನದ ಮೇಲೆ ಎಲ್ಲರ ಕಣ್ಣುಗಳು ಕೇಂದ್ರೀಕೃತವಾಗಿದೆ.,ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ವಿರೋಧ ಪಕ್ಷಗಳ ಪ್ರಮುಖ ನಾಯಕರನ್ನು ಪ್ರಚಾರ ಕ್ಷೇತ್ರಕ್ಕೆ ಎಳೆದು ತಂದಿದೆ.

Advertisement

ಪ್ರಧಾನಿ ಮೋದಿ ಸ್ವಕ್ಷೇತ್ರದಲ್ಲಿ ಎರಡು ದಿನಗಳ ಕಾಲ ಭರ್ಜರಿ ಪ್ರಚಾರ ಕೈಗೊಳ್ಳಲಿದ್ದಾರೆ. 4 ಮತ್ತು 5 ರಂದು ವಾರಾಣಸಿ ಯಲ್ಲಿ ಭರ್ಜರಿ ರೋಡ್ ಶೋ ಮತ್ತು ಕಾರ್ಯಕರ್ತರೊಂದಿಗೆ ಪ್ರಧಾನಿ ಬೇರೆಯಲಿದ್ದಾರೆ.

ಪ್ರಧಾನಿ ವಾರಣಾಸಿಯ ವಿವಿಧ ಪ್ರದೇಶಗಳಲ್ಲಿ ರೋಡ್‌ಶೋ ನಡೆಸಲಿದ್ದಾರೆ ಮತ್ತು ಮಾರ್ಚ್ 5 ರಂದು ಜಿಲ್ಲೆಯ ಖಜೂರಿ ಗ್ರಾಮದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ಕಂಟೋನ್ಮೆಂಟ್, ವಾರಣಾಸಿ ಉತ್ತರ ಮತ್ತು ವಾರಣಾಸಿ ದಕ್ಷಿಣ ಮೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಯಲಿದೆ. ಕಾಶಿ ವಿಶ್ವನಾಥ ದೇವಸ್ಥಾನಕ್ಕೂ ಮೋದಿ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿಯ ವಾರಾಣಸಿ ಘಟಕದ ಅಧ್ಯಕ್ಷ ವಿದ್ಯಾಸಾಗರ್ ರೇ  ಮಾಹಿತಿ ನೀಡಿದ್ದಾರೆ.

ಗ್ರ್ಯಾಂಡ್ ಫಿನಾಲೆಯ ಕೇಂದ್ರಬಿಂದುವಾಗಿರುವ ಯಾತ್ರಿಕರ ನಗರಕ್ಕೆ ವಿರೋಧ ಪಕ್ಷಗಳ ಪ್ರಮುಖ ನಾಯಕರು ಕೂಡ ಆಗಮಿಸುತ್ತಿದ್ದಾರೆ.

ಮಮತಾ ಕಿಡಿ

Advertisement

ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರು ಗುರುವಾರ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಮಿತ್ರ ಪಕ್ಷ ಆರ್‌ಎಲ್‌ಡಿ ಜಯಂತ್ ಚೌಧರಿ ಅವರೊಂದಿಗೆ ಜಂಟಿ ರ್‍ಯಾಲಿ ನಡೆಸಿದ್ದಾರೆ.

ಉಕ್ರೇನ್ ನಲ್ಲಿ ಯುದ್ಧ ನಡೆಯುತ್ತಿದ್ದು, ಪ್ರಧಾನಿ ಮೋದಿ ಇಲ್ಲಿ ಸಭೆ ನಡೆಸುತ್ತಿದ್ದಾರೆ, ಏನು ಅಗತ್ಯ? ಪುಟಿನ್ ಜೊತೆ ಇಷ್ಟೊಂದು ಉತ್ತಮ ಬಾಂಧವ್ಯ ಹೊಂದಿದ್ದಲ್ಲಿ ಯುದ್ಧ ನಡೆಯುತ್ತದೆ ಎಂದು ಮೊದಲೇ ತಿಳಿದಿದ್ದರೆ ಭಾರತೀಯ ವಿದ್ಯಾರ್ಥಿಗಳನ್ನು ಏಕೆ ಕರೆತರಲಿಲ್ಲ ಎಂದು ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

ಇದು ಯುಪಿಯ ಭವಿಷ್ಯದ ಚುನಾವಣೆ. ಪ್ರಜಾಪ್ರಭುತ್ವ ಉಳಿಯುತ್ತದೋ ಇಲ್ಲವೋ ಎಂಬುದನ್ನು ನಿರ್ಧರಿಸುವ ಚುನಾವಣೆಯೂ ಹೌದು. ನಮ್ಮ ಸರ್ಕಾರ ಬಂದಾಗ, ಪೊಲೀಸ್ ನೇಮಕಾತಿಗಳ ಜೊತೆಗೆ, ನಾವು ಸೇನೆಗೆ ನೇಮಕಾತಿಗಳನ್ನು ಮಾಡುವುದನ್ನು ಖಚಿತಪಡಿಸಿಕೊಳ್ಳುತ್ತೇವೆ ಎಂದು ವಾರಣಾಸಿಯಲ್ಲಿ ನಡೆದ ರ್‍ಯಾಲಿಯಲ್ಲಿ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿಕೆ ನೀಡಿದ್ದಾರೆ.

ವಾರಣಾಸಿಯ ಜೊತೆಗೆ, ಅಜಂಗಢ ಮತ್ತು ವಿಂಧ್ಯಾಚಲ ಪ್ರದೇಶಗಳಲ್ಲಿ ಮಾರ್ಚ್ 7 ರಂದು 54 ಸ್ಥಾನಗಳಿಗೆ ಕೊನೆಯ ಸುತ್ತಿನ ಮತದಾನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next