ಮುಂಬಯಿ : ದಿನದ ಉದ್ದಕ್ಕೂ ಏರಿಳಿತಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರು ಪೇಟೆ ಕೊನೇ ಕ್ಷಣ ಕಂಡು ಬಂದ ಭರಾಟೆಯ ಖರೀದಿಯ ಫಲವಾಗಿ ಇಂದು ಗುರುವಾರದ ವಹಿವಾಟನ್ನು 84.03 ಅಂಕಗಳ ಏರಿಕೆಯೊಂದಿಗೆ 31,730.49 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 33.50 ಅಂಕಗಳ ಮುನ್ನಡೆಯೊಂದಿಗೆ 9,917.90 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಆಶಾದಾಯಕವಾಗಿ ಕೊನೆಗೊಳಿಸಿದೆ.
ಇಂದು ತಿಂಗಳ ಕೊನೇ ಗುರುವಾರವಾಗಿರುವ ಕಾರಣ ಎಫ್ ಆ್ಯಂಡ್ ಓ ಚುಕ್ತಾ ಆಗಲಿದ್ದುದು ಏರುಪೇರಿನ ವಹಿವಾಟಿಗೆ ನೇರವಾಗಿ ಕಾರಣವಾಯಿತು.
ಹಾಗಿದ್ದರೂ ಇಂದಿನ ವಹಿವಾಟು ಹರಹು ಧನಾತ್ಮಕವಾಗಿತ್ತು. 1,509 ಶೇರುಗಳು ಮುನ್ನಡೆ ಕಂಡರೆ 1,062 ಶೇರುಗಳು ಹಿನ್ನಡೆಗೆ ಗುರಿಯಾದವು; 134 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಇಂದಿನ ಟಾಪ್ ಗೇನರ್‌ಗಳು : ಐಡಿಯಾ ಸೆಲ್ಯುಲರ್, ವಿಪ್ರೋ, ಬಜಾಜ್ ಆಟೋ, ಟಾಟಾ ಪವರ್, ರಿಲಯನ್ಸ್.
ಇಂದಿನ ಟಾಪ್ ಲೂಸರ್‌ಗಳು : ಭಾರ್ತಿ ಏರ್‌ಟೆಲ್, ಬಾಶ್, ಕೋಲ್ ಇಂಡಿಯಾ, ಅರಬಿಂದೋ ಫಾರ್ಮಾ, ಇನ್‌ಫೋಸಿಸ್.