Advertisement
ನಿಮ್ಮ ಪಾನ್ ಕಾರ್ಡ್‌ಗೆ ಆಧಾರ್ ನಂಬರ್ ಜೋಡಣೆ ಆಗಿದೆಯೇ ಇಲ್ಲವೆ ಎಂಬುದನ್ನು ತಿಳಿಯಲು ನೀವು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್ ಸಂದರ್ಶಿಸಿ ಅಲ್ಲಿ ನಿಮ್ಮ ಖಾತೆಗೆ ಲಾಗಿನ್ ಆಗಬೇಕು.
Related Articles
Advertisement
ಒಂದೊಮ್ಮೆ ನಿಮಗೆ ಈ ಪಾಪ್ ಅಪ್ ವಿಂಡೋ ಕಾಣಿಸಿಕೊಳ್ಳದಿದ್ದರೆ ಆಗ ನೀವು “ಪ್ರೊಫೈಲ್ ಸೆಟ್ಟಿಂಗ್’ ಕ್ಲಿಕ್ ಮಾಡಿ ಬಳಿಕ “ಲಿಂಗ್ ಆಧಾರ್’ ಕ್ಲಿಕ್ ಮಾಡಬೇಕು.
ನಿಮ್ಮ ಆಧಾರ್ ಕಾರ್ಡ್ ನಂಬರ್ ಕಾಣಿಸಿಕೊಂಡಾಗ ಅಲ್ಲಿ ಪ್ರತ್ಯಕ್ಷವಾಗುವ ಮಾಹಿತಿಗಳನ್ನು ನೀವು ಪರಿಶೀಲಿಸಬೇಕು.
ವಿವರಗಳು ತಾಳೆಯಾದರೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಟೈಪ್ ಮಾಡಬೇಕು ಮತ್ತು “ಲಿಂಕ್ ಆಧಾರ್’ ಬಟನ್ ಕ್ಲಿಕ್ ಮಾಡಬೇಕು.
ಆಗ ಒಂದೊಮ್ಮೆ ವಿವರಗಳು ತಾಳೆಯಾಗದಿದ್ದರೆ ಆಗ ಬಳಕೆದಾರನಿಗೆ ಅದು “ಆಧಾರ್ ಅಥವಾ ಪಾನ್‌ನಲ್ಲಿನ ಮಾಹಿತಿಗಳನ್ನು ತಿದ್ದುಪಡಿಮಾಡಿಕೊಳ್ಳಿ’ ಎಂದು ಸೂಚಿಸುತ್ತದೆ.
ಮಾಹಿತಿಗಳು ತಾಳೆಯಾದಲ್ಲಿ, “ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ಪಾನ್ ಕಾರ್ಡ್‌ಗೆ ಯಶಸ್ವಿಯಾಗಿ ಜೋಡಿಸಲಾಗಿದೆ’ ಎಂಬ ಮಾಹಿತಿ ಕಂಪ್ಯೂಟರ್ ಪರದೆಯಲ್ಲಿ ಕಾಣಿಸಿಕೊಳ್ಳುತ್ತದೆ.