ಮುಂಬೈ: ಯಾರ್ಕರ್ ಸ್ಪೆಷಲಿಸ್ಟ್, ಶ್ರೀಲಂಕಾದ ಮಾಜಿ ವೇಗದ ಬೌಲರ್ ಲಸಿತ್ ಮಾಲಿಂಗ ಅವರು ರಾಜಸ್ಥಾನ ರಾಯಲ್ಸ್ ಪಾಳಯ ಸೇರಿಕೊಂಡಿದ್ದಾರೆ. ಈ ಋತುವಿನ ಐಪಿಎಲ್ ಗೆ ವೇಗದ ಬೌಲಿಂಗ್ ಕೋಚ್ ಆಗಿ ಲಸಿತ್ ಮಾಲಿಂಗ ಅವರನ್ನು ರಾಜಸ್ಥಾನ ರಾಯಲ್ಸ್ ನೇಮಿಸಿದೆ.
ಲಸಿತ್ ಮಾಲಿಂಗ ಅವರು ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಪ್ರಮುಖ ಬೌಲರ್ ಆಗಿ ಆಡಿದ್ದರು. ಮುಂಬೈ ಇಂಡಿಯನ್ಸ್ ತಂಡದಲ್ಲಿ ಬೌಲಿಂಗ್ ಮೆಂಟರ್ ಆಗಿ ಕೂಡಾ ಅವರು ಸೇವೆ ಸಲ್ಲಿಸಿದ್ದರು. ಅಲ್ಲದೆ ಇತ್ತೀಚೆಗೆ ಶ್ರೀಲಂಕಾ ತಂಡದ ಆಸ್ಟ್ರೇಲಿಯಾ ಪ್ರವಾಸಕ್ಕೂ ಮಾಲಿಂಗ ಬೌಲಿಂಗ್ ಸ್ಟ್ರಾಟರ್ಜಿ ಕೋಚ್ ಆಗಿ ಕೆಲಸ ಮಾಡಿದ್ದರು.
ಲಸಿತ್ ಮಾಲಿಂಗ ಅವರ ನೇಮಕದ ಬಗ್ಗೆ ಮಾತನಾಡಿರುವ ತಂಡದ ನಿರ್ದೇಶಕ ಕುಮಾರ ಸಂಗಕ್ಕರ, “ನಮ್ಮ ತಂಡದಲ್ಲಿ ನಾವು ಕೆಲವು ಅತ್ಯುತ್ತಮ ವೇಗದ ಬೌಲರ್‌ಗಳನ್ನು ಹೊಂದಿದ್ದೇವೆ. ಅವರು ಲಸಿತ್ ನೊಂದಿಗೆ ಕೆಲಸ ಮಾಡಲು ಮತ್ತು ಕಲಿಯಲು ಮತ್ತು ಮತ್ತಷ್ಟು ತಮ್ಮ ಕೌಶಲವನ್ನು ಅಭಿವೃದ್ಧಿಪಡಿಸಲು ಅವಕಾಶವನ್ನು ಹೊಂದಿರುತ್ತಾರೆ” ಎಂದಿದ್ದಾರೆ.
ಇದನ್ನೂ ಓದಿ:2 ರಾಜ್ಯ ಗೆದ್ದ ಆಪ್ ರಾಷ್ಟ್ರೀಯ ಪಕ್ಷವಾಗುವುದೇ? ರಾಷ್ಟ್ರೀಯ ಪಕ್ಷದ ಮಾನ್ಯತೆಗೆ ಮಾನದಂಡವೇನು?
ರಾಜಸ್ಥಾನ ತಂಡದಲ್ಲಿ ಟ್ರೆಂಟ್ ಬೌಲ್ಟ್, ಪ್ರಸಿಧ್ ಕೃಷ್ಣ, ನವದೀಪ್ ಸೈನಿ, ಜಿಮ್ಮಿ ನೀಶಮ್ ರಂತಹ ವೇಗದ ಬೌಲರ್ ಗಳಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡವು ಈ ಬಾರೀ ತನ್ನ ಮೊದಲ ಪಂದ್ಯವನ್ನು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಈ ಪಂದ್ಯ ಮಾರ್ಚ್ 19ರಂದು ಪುಣೆಯ ಎಂಸಿಎ ಸ್ಟೇಡಿಯಂ ನಲ್ಲಿ ನಡೆಯಲಿದೆ.