Advertisement

ಸ್ಥಳೀಯರಿಗೂ ಲಷ್ಕರ್‌ ನೆರವು

09:15 AM Oct 17, 2018 | Team Udayavani |

ಹೊಸದಿಲ್ಲಿ/ಚಂಡೀಗಢ: ಹರಿಯಾಣದ ಪಲ್ವಾಲ್‌ ಜಿಲ್ಲೆಯ ಉತ್ತಾವರ್‌ ಗ್ರಾಮದಲ್ಲಿ ಮಸೀದಿ ನಿರ್ಮಾಣಕ್ಕೆ ಹಣಕಾಸಿನ ನೆರವು ನೀಡಿದ್ದಲ್ಲದೆ, ಮೇವಾತ್‌ ಪ್ರದೇಶದಲ್ಲಿ ಸ್ಥಳೀಯ ಬಡ ಕುಟುಂಬಗಳಿಗೆ ಉಗ್ರ ಸಂಘಟನೆ ಲಷ್ಕರ್‌-ಎ-ತಯ್ಯಬಾ ನಗದು ವಿತರಿಸಿದೆ. ಫ‌ಲಾ-ಇ- ಇನ್ಸಾಯತ್‌ (ಎಫ್ಐಎಫ್) ಎಂಬ ಸಂಘ ಟನೆಯಿಂದ ಹವಾಲಾ ಜಾಲದ ಮೂಲಕ ನಗದು ಪೂರೈಕೆಯಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಂಡು ಕೊಂಡಿದೆ. ಈ ಬಗ್ಗೆ “ದ ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ. ಈ ಮೂಲಕ ಸ್ಥಳೀಯ ಜನರ ಮನಸ್ಸು ಗೆಲ್ಲಲು ಮತ್ತು ಉತ್ತಮ ಅಭಿಪ್ರಾಯ ಮೂಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗಿದೆ ಎಂದು ತನಿಖಾ ಸಂಸ್ಥೆ ಕಂಡುಕೊಂಡಿದೆ.

Advertisement

ಸ್ಥಳೀಯವಾಗಿ ಬೇರೂರಲು ಎಫ್ಐಎಫ್ ಸಂಘಟನೆ ಮೂಲಕ ಲಷ್ಕರ್‌ ಮುಂದಾಗುತ್ತಿದೆ ಎಂದು ಊಹಿಸಲಾಗಿದೆ. ಅದಕ್ಕಾಗಿಯೇ ಮೇವಾತ್‌, ಪಲ್ವಾಲ್‌ ಪ್ರದೇಶಗಳಲ್ಲಿರುವ ಬಡ ಕುಟುಂಬಗಳ ಮದುವೆ ಮತ್ತು ಇತರ ಕಾರ್ಯಕ್ರಮಗಳಿಗೆ ಧನ ಸಹಾಯ ನೀಡಲಾಗಿತ್ತು. ಈ ಬೆಳವಣಿಗೆಗಳ ನಡುವೆ, ಉಗ್ರ ಸಂಘಟನೆ ಲಷ್ಕರ್‌ ನೆರವಿನಿಂದ ಮಸೀದಿ ನಿರ್ಮಿಸ ಲಾಗಿದೆ ಎಂಬ ಎನ್‌ಐಎ ಆರೋಪವನ್ನು ಉತ್ತಾವರ್‌ ಗ್ರಾಮದ ಜನರು ತಿರಸ್ಕರಿಸಿದ್ದಾರೆ. ಸ್ಥಳೀಯರೇ ಹಣ ಸಂಗ್ರಹಿಸಿ ಮಸೀದಿ ನಿರ್ಮಿಸಿದ್ದಾರೆ. ಉಗ್ರ ಸಂಘಟನೆಯಿಂದ ನೆರವು ಪಡೆಯಲಾಗಿಲ್ಲ. ಎಲ್ಲವೂ ಕಾನೂನು ಪ್ರಕಾರವಾಗಿಯೇ ನಡೆದಿದೆ ಎಂದು ಗ್ರಾಮದ ಮುಖ್ಯಸ್ಥ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next