Advertisement
ಗಮನಾರ್ಹ ಅಂಶವೆಂದರೆ, ತಾಲಿಬಾನ್ ನಾಯಕತ್ವಕ್ಕೆ ಕೂಡ ವಿದೇಶಗಳ ಉಗ್ರ ಸಂಘಟನೆಗಳು ಒಳ ಪ್ರವೇಶ ಮಾಡಿರುವ ಅರಿವು ಇದೆ. ಅಮೆರಿಕ, ಸೇನೆ ವಾಪಸ್ ಮಾಡುವ ಬಗ್ಗೆ ತಾಲಿಬಾನ್ ಜತೆಗೆ ಮಾಡಿಕೊಂಡ ಒಪ್ಪಂದದ ಅನ್ವಯ ಅಫ್ಘಾನಿಸ್ಥಾನವನ್ನು ಉಗ್ರ ಚಟುವ ಟಿಕೆಯ ಕೇಂದ್ರ ಸ್ಥಾನವನ್ನಾಗಿಸಲು ಬಿಡಬಾರದು ಎಂದು ಪ್ರಧಾನವಾಗಿ ಉಲ್ಲೇಖೀಸಲಾಗಿದೆ.
Related Articles
Advertisement
ಕಾರ್ಯಾಚರಣೆ ಮುಕ್ತಾಯ :
ಕಾಬೂಲ್‌ನಲ್ಲಿರುವ ರಾಜತಾಂತ್ರಿಕ ಸಿಬಂದಿಯನ್ನು ಸ್ವದೇಶಕ್ಕೆ ಕರೆತರಲಾಗಿದೆ. ಅಲ್ಲಿ ಭಾರತದ ರಾಯಭಾರ ಕಚೇರಿಯನ್ನು ಪೂರ್ಣವಾಗಿ ಮುಚ್ಚಲಾಗುವುದಿಲ್ಲ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಸೀಮಿತ ಸಿಬಂದಿ ಇರಿಸಿಕೊಂಡು ಕೆಲಸ ಮುಂದುವರಿಸಲಾಗುತ್ತದೆ ಎಂದಿದ್ದಾರೆ. ಕಷ್ಟದ ಪರಿಸ್ಥಿತಿಯ ಹೊರತಾಗಿಯೂ ಇಂಥ ಸಾಧನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಯುದ್ಧಗ್ರಸ್ತ ರಾಷ್ಟ್ರದ ಇತರ ನಗರಗಳಲ್ಲಿರುವ ಭಾರತೀಯ ನಾಗರಿಕರನ್ನು ಕರೆತರುತ್ತೇವೆ. ಈ ಬಗ್ಗೆ ಯಾರೂ ಅತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಸಚಿವರು ಬರೆದುಕೊಂಡಿದ್ದಾರೆ.
ಸತ್ತರೆ ಅದೇ ಸೇವೆ ಭಾರತಕ್ಕೆ ಬರಲ್ಲ :
ಅಫ್ಘಾನ್‌ನಿಂದ ಸ್ವದೇಶಕ್ಕೆ ಬರಲು ಭಾರತೀಯರು ಮುಂದಾಗಿದ್ದಾರೆ. ಆದರೆ ಕಾಬೂಲ್‌ನಲ್ಲಿರುವ ರತನ್‌ನಾಥ್ ದೇಗುಲದ ಅರ್ಚಕ ಪಂಡಿತ್ ರಾಜೇಶ್ ಕುಮಾರ್ ಮಾತ್ರ “ನಾನು ಭಾರತಕ್ಕೆ ಬರುವುದಿಲ್ಲ. ಸತ್ತು ಹೋದರೆ, ಅದು ನನ್ನ ಸೇವೆ’ ಎಂದು ಹೇಳಿದ್ದಾರೆ. 100ಕ್ಕೂ ಅಧಿಕ ವರ್ಷಗಳಿಂದ ನಮ್ಮ ಪೂರ್ವಜರು ಈ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ನಡೆಸಿಕೊಂಡು ಬಂದಿದ್ದಾರೆ. ಈಗ ನಾನು ಹೀಗೆ ಅರ್ಧಕ್ಕೆ ಬಿಟ್ಟು ಬರಲಾಗುವುದಿಲ್ಲ ಎಂದಿದ್ದಾರೆ. ಭಾರತಕ್ಕೆ ವಾಪಸ್ ಹೋಗೋಣ ಎಂದು ಹಲವರು ಒತ್ತಾಯಿಸುತ್ತಿದ್ದಾರೆ. ಪ್ರಯಾಣ ಮತ್ತು ಅಲ್ಲಿನ ವಸತಿ ವ್ಯವಸ್ಥೆಯನ್ನು ತಾವೇ ನೋಡಿಕೊಳ್ಳುವುದಾಗಿಯೂ ಹೇಳುತ್ತಿದ್ದಾರೆ. ಆದರೆ ಬರಲು ಸಿದ್ಧನಿಲ್ಲ ಎಂದು ರಾಜೇಶ್ ತಿಳಿಸಿದ್ದಾರೆ.
ಮಲಯಾಳಿ ತಾಲಿಬಾನ್ ಇದ್ದಾರೆಯೇ? :
ತಾಲಿಬಾನ್ ಉಗ್ರರಲ್ಲಿ ಇಬ್ಬರು ಮಲಯಾಳ ಮಾತನಾಡುವವರು ಇದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ. ತಿರುವನಂತ ಪುರದ ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವೀಟ್‌ನಲ್ಲಿ ಸಂದೇಹ ವ್ಯಕ್ತಪಡಿಸಿದ್ದಾರೆ. ರಮೀಜ್ ಎಂಬಾತ ಮಾಡಿದ್ದ ವೀಡಿಯೋ ತರೂರ್ ರಿಟ್ವೀಟ್ ಮಾಡಿದ್ದರು. ವೀಡಿಯೋ ದಲ್ಲಿನ ಸಂಭಾಷಣೆ ಕೇಳಿದಾಗ ಅವರು ಮಲಯಾಳಿಗಳು ಇರಬಹುದು ಎನಿಸುತ್ತದೆ. ಒಬ್ಟಾತ ಸಂಸಾರಿಕ್ಕಟ್ಟೆ ಎಂದು ಹೇಳುವಂತೆ ಕೇಳುತ್ತಿದೆ. 8 ಸೆಕೆಂಡ್‌ಗಳ ವೀಡಿಯೋದಲ್ಲಿ ಮತ್ತೂಬ್ಬನಿಗೆ ಅದು ಅರ್ಥವಾಗುವಂತೆ ಇದೆ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ವೈರಲ್ ಆಗಿದ್ದು, ವಿವಾದಕ್ಕೂ ಕಾರಣವಾಗಿದೆ. ಉಗ್ರ ಸಂಘಟನೆ ಜತೆಗೆ ಮಲಯಾಳಿಗಳಿಗೆ ನಂಟು ಹುಡುಕಿದ್ದು ಸರಿಯಲ್ಲ ಎಂದು ಟ್ವಿಟರ್‌ನಲ್ಲಿ ಟೀಕೆ ವ್ಯಕ್ತವಾಗಿದೆ. ಈ ಬಗ್ಗೆ ರಮೀಜ್ ಎಂಬಾತ ಸ್ಪಷ್ಟನೆ ನೀಡಿ, ತಾಲಿಬಾನ್‌ನಲ್ಲಿ ಕೇರಳದವರು ಯಾರೂ ಇಲ್ಲ. ಅವರು ಬಲೋಚ್ ಮತ್ತು ಜಬೂಲ್ ಪ್ರಾಂತ್ಯದವರು ಎಂದಿದ್ದಾನೆ.
ನನ್ನ ನಿರ್ಧಾರಕ್ಕೆ ಬದ್ಧ: ಬೈಡೆನ್ :
“ನಾವು ಊಹಿಸಿದ್ದಕ್ಕಿಂತಲೂ ಕ್ಷಿಪ್ರವಾಗಿ ತಾಲಿಬಾನ್ ಇಡೀ ಅಫ್ಘಾನಿಸ್ಥಾನವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದು ನಿಜ. ಆದರೂ, ಯುದ್ಧಪೀಡಿತ ರಾಷ್ಟ್ರದಿಂದ ಅಮೆರಿಕದ ಸೇನಾಪಡೆಯನ್ನು ವಾಪಸ್ ಪಡೆಯುವ ನನ್ನ ನಿರ್ಧಾರಕ್ಕೆ ನಾನು ಈಗಲೂ ಬದ್ಧನಾಗಿ ದ್ದೇನೆ…’ ಹೀಗೆಂದು ಹೇಳಿರುವುದು ಅಮೆರಿಕ ಅಧ್ಯಕ್ಷ ಜೋ ಬೈಡೆನ್. ದೇಶ ವನ್ನುದ್ದೇಶಿಸಿ ಮಾತನಾಡಿದ ಅವರು ನಾನು ಯಾವತ್ತೂ ಅಮೆರಿಕನ್ನರ ಜತೆಯಿರುತ್ತೇನೆ. ಸುಖಾ ಸುಮ್ಮನೆ ನಮ್ಮ ಯೋಧರು ಅಲ್ಲಿ ಪ್ರಾಣಕಳೆದುಕೊಳ್ಳು ವುದನ್ನು ನಾನು ಇಷ್ಟಪಡುವುದಿಲ್ಲ. ಅಲ್ಲಿನ ಸೇನೆಯು ಕಿಂಚಿತ್ ಹೋರಾಟವೂ ನಡೆಸದೇ ಉಗ್ರರಿಗೆ ಶರಣಾಯಿತು. ರಾಜಕೀಯ ನಾಯಕರು ದೇಶಬಿಟ್ಟು ಓಡಿ ಹೋದರು. ಈಗಿನ ಸ್ಥಿತಿಗೆ ಅಫ್ಘಾನ್ ಸರಕಾರ ಮತ್ತು ಸೇನೆಯೇ ಕಾರಣ ಎಂದು ಬೈಡೆನ್ ಆರೋಪಿಸಿದರು. ಬೈಡೆನ್ ಹೇಳಿಕೆ ಬೆನ್ನಲ್ಲೇ ಕಾಬೂಲ್‌ನಿಂದ ಇತರ ದೇಶ ಗಳಿಗೆ ತೆರಳುವ ವಿಮಾನಗಳ ಸಂಚಾರ ಆರಂಭವಾಗಿದ್ದು, 129 ಮಂದಿ ಭಾರತೀಯ ರನ್ನು ಹೊತ್ತ ವಾಯುಪಡೆ ವಿಮಾನ ಗುಜರಾತ್‌ಗೆ ಆಗಮಿಸಿದೆ.
ಮರುಕಳಿಸಿದ ಸಾಯ್‌ಗಾನ್ ಸೋಲು :
ಸಂತ್ರಸ್ತ ಅಫ್ಘಾನ್‌ನಿಂದ ಅಮೆರಿಕದ ಸೇನಾಪಡೆಗಳನ್ನು ಹಿಂಪಡೆಯುತ್ತಿರುವ ಬೆಳವಣಿಗೆಯನ್ನು 1979ರಲ್ಲಿ ದಕ್ಷಿಣ ವಿಯೆಟ್ನಾಂನಿಂದ ಅಮೆರಿಕ ಸೇನೆಯನ್ನು ವಾಪಸ್ ಪಡೆದ ನಿರ್ಧಾರಕ್ಕೆ ಹೋಲಿಕೆ ಮಾಡಲಾಗು ತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ 42 ವರ್ಷಗಳ ಹಿಂದೆ ನಡೆದ ಬೆಳವಣಿಗೆಗಳ ಬಗ್ಗೆ ಹೋಲಿಕೆ ಮಾಡಿಕೊಂಡು ಚರ್ಚೆ ನಡೆಸಲಾಗುತ್ತಿದೆ. ಉತ್ತರ ವಿಯೆಟ್ನಾಂ ಮತ್ತು ಅಮೆರಿಕ ಬೆಂಬಲಿತ ದಕ್ಷಿಣ ವಿಯೆಟ್ನಾಂನಲ್ಲಿ ಇಪ್ಪತ್ತು ವರ್ಷಗಳ ಕಾಲ ಹೋರಾಟ ನಡೆದಿತ್ತು. ಅದಕ್ಕೂ ಕೂಡ ಅಮೆರಿಕದ ಅಂದಿನ ಸರಕಾರಗಳು ಕೋಟ್ಯಂತರ ರೂ. ಮೊತ್ತ ವಿನಿಯೋಗಿ ಸಿದ್ದವು. ಕಮ್ಯೂನಿಸ್ಟ್ ಆಡಳಿತವಿದ್ದ ಉತ್ತರ ವಿಯೆಟ್ನಾಂನ ಪ್ರಬಲ ಹೋರಾಟದ ಮುಂದೆ, ಅಮೆರಿಕದ ತಂತ್ರಗಾರಿಕೆ ಸಾಗಲಿಲ್ಲ. ಹೀಗಾಗಿ ಅಮೆರಿಕ ಸೋಲೊಪ್ಪಿಕೊಳ್ಳಬೇಕಾಯಿತು. ಅದನ್ನೇ ಇತಿಹಾಸದಲ್ಲಿ “ದ ಫಾಲ್ ಆಫ್ ಸಾಯ್‌ಗಾನ್’ ಅಥವಾ ಸಾಯ್‌ಗಾನ್‌ನ ಪತನ ಎಂದೇ ಉಲ್ಲೇಖೀಸಲಾಗಿದೆ. 1973ರಲ್ಲಿ ವಿಯೆಟ್ನಾಂನಿಂದ ಅಮೆರಿಕ ತನ್ನ ಸೇನೆ ವಾಪಸ್ ಪಡೆದುಕೊಂಡಿತ್ತು. ಸರಿಯಾಗಿ 2 ವರ್ಷಗಳ ಬಳಿಕ ಅಂದರೆ 1975ರಲ್ಲಿ ಉತ್ತರ ವಿಯೆಟ್ನಾಂ ವಶಕ್ಕೆ ದಕ್ಷಿಣವೂ ಬಂದಿತ್ತು.
ಆಗಲೂ ರಷ್ಯಾ ವಿರುದ್ಧ: ಕುತೂಹಲಕಾರಿ ಅಂಶವೆಂದರೆ ವಿಯೆಟ್ನಾಂನಲ್ಲಿಯೂ ಕೂಡ ಅಮೆರಿಕ ರಷ್ಯಾ ವಿರುದ್ಧ ಹೋರಾಟ ನಡೆಸುತ್ತಿತ್ತು. ಅಫ್ಘಾನಿಸ್ಥಾನದಲ್ಲಿಯೂ ಅದೇ ಆಗುತ್ತಿದೆ. ಉತ್ತರ ವಿಯೆಟ್ನಾಂಗೆ ಹಿಂದಿನ ಸೋವಿಯತ್ ಒಕ್ಕೂಟ ಬೆಂಬಲ ನೀಡಿದ್ದರೆ, ಅಫ್ಘಾನ್‌ನಲ್ಲಿ ರಷ್ಯಾ, ವಿರುದ್ಧ ತಾಲಿಬಾನ್‌ಗಳ ಹುಟ್ಟಿಗೆ ಅಮೆರಿಕ ಕಾರಣವಾಯಿತು. ಒಂದು ವ್ಯತ್ಯಾಸವೆಂದರೆ, 1973ರಲ್ಲಿ ಅಮೆರಿಕ ಸೇನೆ ವಾಪಸಾಗಿ 2 ವರ್ಷಗಳ ಬಳಿಕ ದಕ್ಷಿಣ ವಿಯೆಟ್ನಾಂ ಉತ್ತರದ ವಶವಾಗಿತ್ತು.
ಆದರೆ ಅಫ್ಘಾನ್ ಪರಿಸ್ಥಿತಿಯಲ್ಲಿ ಅಮೆರಿಕ ಊಹಿಸಿದ್ದಕ್ಕಿಂತ ಕ್ಷಿಪ್ರವಾಗಿ ತಾಲಿಬಾನ್ ದೇಶವನ್ನು ಮತ್ತೆ ಅತಿಕ್ರಮಿಸಿಕೊಂಡಿವೆ. ಅಮೆರಿಕ ದಕ್ಷಿಣ ವಿಯೆಟ್ನಾಂನಿಂದ ಆ ಕಾಲಕ್ಕೆ 7 ಸಾವಿರ ಮಂದಿಯನ್ನು ರಕ್ಷಿಸಿತ್ತು.
ಅಫ್ಘಾನ್ ಅದಿರಿನ ಮೇಲೆ ಚೀನದ ಕೆಟ್ಟ ಕಣ್ಣು :
ಈಗಾಗಲೇ ತಾಲಿಬಾನ್ ಆಡಳಿತಕ್ಕೆ ಮೃದು ಧೋರಣೆ ವ್ಯಕ್ತಪಡಿಸಿರುವ ಚೀನದ ಇರಾದೆ ಸ್ಪಷ್ಟವಾಗಿದೆ. ಅಫ್ಘಾನಿಸ್ಥಾನದಲ್ಲಿ ಕೋಟ್ಯಂತರ ರೂ. ಮೌಲ್ಯದ, ಜಗತ್ತಿನ ಅತ್ಯಂತ ಅಪರೂಪದ ಅದಿರಿನ ನಿಕ್ಷೇಪಗಳು ಇವೆ. ಚಿನ್ನ, ಬೆಳ್ಳಿ, ಸತು, ಲ್ಯಾಂಥನಮ್, ಸೀರಿಯಮ್ ಸೇರಿದಂತೆ ಹಲವು ರೀತಿಯ ಅದಿರುಗಳ ನಿಕ್ಷೇಪ ಹೊಂದಿವೆ. 2020ರಲ್ಲಿ ನಡೆಸಲಾಗಿರುವ ಮೌಲ್ಯಮಾಪನ ಪ್ರಕಾರ ಅವುಗಳ ಮೌಲ್ಯ 74 ಲಕ್ಷ ಕೋಟಿ ರೂ. ಮತ್ತು 233 ಲಕ್ಷ ಕೋಟಿ ರೂ. ಆಗಿರುವ ಸಾಧ್ಯತೆ ಇದೆ ಎಂದು ಅಲಯನ್ಸ್ ಬೆರ್ನ್ಸ್ಟಿನ್ ಸಂಸ್ಥೆಯ ವಿಶ್ಲೇಷಕಿ ಶಮೈಲಾ ಖಾನ್ ಆತಂಕ ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ಥಾನದಿಂದ ತಾಲಿಬಾನ್ ಪರವಾಗಿ ಅದಿರು ಪಡೆಯುವುದರ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ನಿಗಾ ಇರಬೇಕು. ಚೀನ ತಾಲಿಬಾನ್ ಮೇಲೆ ಪ್ರಭಾವ ಬೀರಿ, ಅದಿರು ನಿಕ್ಷೇಪ ಲೂಟಿ ಮಾಡದಂತೆ ಎಲ್ಲರೂ ಮುತುವರ್ಜಿ ವಹಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಜಗತ್ತಿನಲ್ಲಿರುವ ಅತ್ಯಂತ ಅಪರೂಪದ ಅದಿರು ನಿಕ್ಷೇಪಗಳ ಪೈಕಿ ಶೇ.35ರ ಮೇಲೆ ಚೀನ ಈಗಾಗಲೇ ಪಾರಮ್ಯ ಹೊಂದಿದೆ.
ನಾನೇ ಹಂಗಾಮಿ ಅಧ್ಯಕ್ಷ :
“ದೇಶದ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ಪರಾರಿಯಾಗಿರುವ ಹಿನ್ನೆಲೆಯಲ್ಲಿ ಸಂವಿಧಾನ ಪ್ರಕಾರ ಉಪಾಧ್ಯಕ್ಷನಾಗಿರುವ ನಾನೇ ಹಂಗಾಮಿ ಅಧ್ಯಕ್ಷ’ ಎಂದು ಅಫ್ಘಾನ್‌ನ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ದೇಶದ ಸಂವಿಧಾನದ ಪ್ರಕಾರ ಅಧ್ಯಕ್ಷರು ಪರಾರಿಯಾದರೆ, ಸಾವನ್ನಪ್ಪಿದರೆ ಅಥವಾ ರಾಜೀನಾಮೆ ನೀಡಿದರೆ ಉಪಾಧ್ಯಕ್ಷರೇ ಹಂಗಾಮಿ ಅಧ್ಯಕ್ಷರಾಗುತ್ತಾರೆ. ನಾನು ಪ್ರಸ್ತುತ ದೇಶದೊಳಗೇ ಇದ್ದೇನೆ. ಆ ಹಿನ್ನೆಲೆಯಲ್ಲಿ ಈಗ ನಾನೇ ಹಂಗಾಮಿ ಅಧ್ಯಕ್ಷನಾಗಿದ್ದೇನೆ. ನಮ್ಮ ಸರಕಾರಕ್ಕೆ ಬೆಂಬಲ ಮತ್ತು ಒಮ್ಮತ ನೀಡುವಂತೆ ನಾನು ಎಲ್ಲ ನಾಯಕರಿಗೆ ಕೇಳಿಕೊಳ್ಳುತ್ತಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ತಾಲಿಬಾನ್ ಆಡಳಿತವೇ ಮೇಲು: ರಷ್ಯಾ :
ಅಶ್ರಫ್ ಘನಿ ನೇತೃತ್ವದ ಆಡಳಿತಕ್ಕಿಂತ ತಾಲಿಬಾನ್ ಉಗ್ರರ ಆಡಳಿತವೇ ಲೇಸು ಎಂದು ಅಫ್ಘಾನಿಸ್ಥಾನದಲ್ಲಿರುವ ರಷ್ಯಾ ರಾಯಭಾರಿ ಡಿಮಿಟ್ರಿ ಡಿನೊìವ್ ಅಭಿಪ್ರಾಯಪಟ್ಟಿದ್ದಾರೆ. ಉಗ್ರರ ಆಡಳಿತ ವೈಖರಿಯಿಂದ ಅವರ ಜತೆಗೆ ಕೆಲಸ ಮಾಡಲು ಪೂರಕವಾಗಿದೆ ಎಂದು ಹೇಳಿದ್ದಾರೆ. ಇಸ್ಪೀಟ್ ಕಾರ್ಡ್‌ನ ಮಹಲು ಬಿದ್ದಂತೆ ಘನಿ ನೇತೃತ್ವದ ಆಡಳಿತ ಕುಸಿದು ಬಿದ್ದಿತು. ಉಗ್ರರು ಕಾಬೂಲ್‌ಗೆ ಪ್ರವೇಶ ಮಾಡಿದ 24 ಗಂಟೆಗಳಲ್ಲಿ ಸುರಕ್ಷತೆಯ ಭಾವನೆ ಮೂಡಿತು ಎಂದಿದ್ದಾರೆ. ಆದರೆ ಮಾಸ್ಕೋದಲ್ಲಿ ವ್ಯತಿರಿಕ್ತ ಹೇಳಿಕೆ ನೀಡಿದ ರಷ್ಯಾ ವಿದೇಶಾಂಗ ಸಚಿವ ಸರ್ಗೆ ಲಾರ್ವೋವ್ “ತಾಲಿಬಾನ್ ನೇತೃತ್ವದ ಆಡಳಿತಕ್ಕೆ ತತ್‌ಕ್ಷಣದಲ್ಲಿ ಮಾನ್ಯತೆ ನೀಡುವ ಆತುರ ಇಲ್ಲ’ ಎಂದು ಹೇಳಿದ್ದಾರೆ.