Advertisement

ಮಂಗಗಳಿಗೆ ಲೇಸರ್‌ ಗನ್‌

07:40 PM Aug 04, 2019 | mahesh |

ಬೆಳೆಗಳಿಗೆ ಮಂಗಗಳ ಹಾವಳಿ ಕೆಲವೆಡೆ ಎಷ್ಟು ಅತಿಯಾಗಿದೆ ಎಂದರೆ, ಕೆಲವೊಂದು ಭಾಗಗಳಲ್ಲಿ ಕೃಷಿಕರು ಬೇಸಾಯ ಮಾಡುವುದನ್ನೇ ಬಿಟ್ಟಿದ್ದಾರೆ. ಇದು ಆಶ್ಚರ್ಯವೆನಿಸಿದರೂ ನಿಜ. ವರ್ಷದ ಎಲ್ಲ ಋತುಮಾನಗಳಲ್ಲಿಯೂ ಇವುಗಳ ಕಾಟ ಇದ್ದದ್ದೇ. ಮಂಗಗಳನ್ನು ಹಿಡಿಯಲು ಬೋನು ಇಡುವುದು, ಕುಡಿಕೆಯಲ್ಲಿ ಕಳಿತ ಹಣ್ಣು ತುಂಬಿ ಸತ್ತ ಹಾವುಇಡುವುದು, ಗರ್ನಾಲು ಸಿಡಿಸುವುದು, ರೈಫ‌ಲ್‌ನಿಂದ ಗುಂಡು ಹಾರಿಸುವುದು, ಪರಿಣಿತರಿಂದ ಅವುಗಳನ್ನು ಹಿಡಿಸಿ ಕಾಡಿಗೆ ಬಿಡುವುದು, ಹುಲಿ ಪ್ರತಿಮೆ ಇಡುವುದು, ನಾಯಿಗಳಿಗೆ ಹುಲಿ ವೇಷ ಬಳಿದು ತಿರುಗಾಡಲು ಬಿಡುವುದು ಹೀಗೆ ನಾನಾ ಉಪಾಯಗಳನ್ನು ಕೃಷಿಕರು ಮಾಡಿದ್ದಾರೆ. ಅವುಗಳು ಸ್ವಲ್ಪ ಕಾಲ ಮಾತ್ರ ಪರಿಣಾಮಕಾರಿ ಎನ್ನುವ ಅಭಿಪ್ರಾಯ ಕೃಷಿಕ ವರ್ಗದವರಲ್ಲಿದೆ.

Advertisement

ಇದರಿಂದಾಗಿ ಹೊಸ ಉಪಾಯಗಳಿಗೆ ಮೊರೆ ಹೋಗುತ್ತಲೇ ಇರಬೇಕಾಗುತ್ತದೆ. ಆ ರೀತಿ ಕಂಡುಕೊಂಡ ಉಪಾಯವೇ ಲೇಸರ್‌ ಗನ್‌. ದಕ್ಷಿಣಕನ್ನಡದ ಪುತ್ತೂರು- ಸುಳ್ಯದ ನಡುವೆ ಸಿಗುವ ಇಲ್ಲಿನ ಪಾಲ್ತಾಡ್‌ ಎಂಬಲ್ಲಿ ಶಿವಸುಬ್ರಮಣ್ಯ ಎಂಬುವವರು ವರ್ಷಗಳಿಂದ ಕೃಷಿ ಮಾಡುತ್ತಾ ಬಂದಿದ್ದಾರೆ. ಅವರು ಪ್ರಧಾನವಾಗಿ ಅಡಿಕೆ- ತೆಂಗು- ಬಾಳೆ ಮತ್ತು ಮೆಣಸು ಬೆಳೆಯುತ್ತಾರೆ. ಬೆಳೆಯನ್ನು ಮಂಗಗಳಿಂದ ರಕ್ಷಿಸಿಕೊಳ್ಳುವುದೇ ಅವರಿಗಿದ್ದ ದೊಡ್ಡ ಸಮಸ್ಯೆ. ಆಗ ಅವರಿಗೆ ಲೇಸರ್‌ ಗನ್‌ ಬಗ್ಗೆ ತಿಳಿದುಬಂದಿದೆ. ಆನ್‌ಲೈನ್‌ ಮೂಲಕ ಅದನ್ನು ತರಿಸಿಕೊಂಡರು. ಪುಟ್ಟ ಟಾರ್ಚ್‌ ಥರ ಇರುವ ಲೇಸರ್‌ ಗನ್‌ಅನ್ನು ಬಳಸುವುದು ತುಂಬಾ ಸುಲಭ ಕೂಡ. ಪುಟ್ಟದಾದರೂ ಅದರ ಸಾಮರ್ಥ್ಯ ದೊಡ್ಡದು. ಸುಮಾರು ಒಂದು ಕಿಲೋಮೀಟರ್‌ಗಳಿಗಿಂತಲೂ ಹೆಚ್ಚು ದೂರ ಇದರ ಬೆಳಕು ಹಾಯುತ್ತದೆ. ರೀಚಾರ್ಜೆಬಲ್‌ ಬ್ಯಾಟರಿಗಳ ಸಹಾಯದೊಂದಿಗೆ ಅದು ಕಾರ್ಯ ನಿರ್ವಹಿಸುತ್ತದೆ. ಅದೊಂದು ದಿನ ಬೆಳ್ಳಂಬೆಳಗ್ಗೆ ತೋಟಕ್ಕೆ ದಾಳಿ ಇಟ್ಟಿದ್ದ ಮಂಗಗಳ ಗದ್ದಲ ಕಂಡು ಲೇಸರ್‌ ಗನ್‌ ಅನ್ನು ಮೊದಲ ಬಾರಿ ಹಿಂಡಿನತ್ತ ಪ್ರಯೋಗಿಸಿದ್ದರು.ಆ ಬೆಳಕು ಚಿಮ್ಮುತ್ತಿದಂತೆ ಗಾಬರಿಗೊಂಡ ಮಂಗಗಳು ಪರಾರಿಯಾದವು.
ವಿ. ಸೂ: ಲೇಸರ್‌ ಗನ್‌ ಅನ್ನು ದೂರದಲ್ಲೇ ನಿಂತು ಬಳಸಬೇಕು

ಕುಮಾರ ರೈತ

Advertisement

Udayavani is now on Telegram. Click here to join our channel and stay updated with the latest news.

Next