ಮುದ್ದೇಬಿಹಾಳ: ಪಟ್ಟಣದಲ್ಲಿ 77ನೇ ಸ್ವಾತಂತ್ರ್ಯೋತ್ಸವ ಮತ್ತು ಕಾರ್ಗಿಲ್ ವಿಜಯೋತ್ಸವ ಹಿನ್ನೆಲೆ ಆ. 14 ರ ಸೋಮವಾರ ಬೃಹತ್ ತಿರಂಗಾ ರ‍್ಯಾಲಿ ನಡೆಸಲಾಯಿತು.
ತಾಲೂಕಿನ ಮಾಜಿ ಸೈನಿಕರ ಸಂಘ ಮತ್ತು ಎಂಜಿವಿಸಿ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಡೆದ ರ‍್ಯಾಲಿಗೆ ಮುಖಂಡರಾದ ಪಲ್ಲವಿ ನಾಡಗೌಡ, ಶಾಂತಗೌಡ ಪಾಟೀಲ ನಡಹಳ್ಳಿ ಚಾಲನೆ ನೀಡಿದರು.
ಅಂದಾಜು ಎರಡು ಕಿ.ಮಿ. ವರೆಗೂ ಸಾವಿರಾರು ವಿದ್ಯಾರ್ಥಿಗಳು, ಎನ್.ಸಿ.ಸಿ., ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು 50-100 ಅಡಿ ಉದ್ದದ 5-6 ತಿರಂಗಾ ಹಿಡಿದು ರ‍್ಯಾಲಿಯಲ್ಲಿ ಭಾಗವಹಿಸಿದ್ದರು.
ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದ ಮಾಜಿ ಸೈನಿಕರಾದ ರಂಗಪ್ಪ ಆಲೂರ, 1971ರ ಪಾಕಿಸ್ತಾನ ಯುದ್ದದಲ್ಲಿ ಭಾಗವಹಿಸಿದ್ದ ಜಿ.ಆರ್.ಚೌಡಕೇರ, ಕುಂಬಾರ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಗೌರವಿಸಲಾಯಿತು.
ನಂತರ ಎಂಜಿವಿಸಿ ಕಾಲೇಜಿನ ರಂಗಮಂದಿರದಲ್ಲಿ ವಿಜಯೋತ್ಸವ ಕಾರ್ಯಕ್ರಮ ನಡೆಯಿತು. ಸಂಘದ ಅದ್ಯಕ್ಷ ಆರ್.ಐ.ಹಿರೇಮಠ ಮತ್ತು ಸಂಘದ ಪದಾಧಿಕಾರಿಗಳು, ಸದಸ್ಯರು ನೇತೃತ್ವ ವಹಿಸಿದ್ದರು.