Advertisement
ಪಾಸಿಟಿವ್ ಪೇ ಸಿಸ್ಟಮ್ ಅಡಿಯಲ್ಲಿ ಚೆಕ್ ನೀಡುವವರು ಎಸ್‌ಎಂಎಸ್, ಮೊಬೈಲ್ ಆ್ಯಪ್, ಇಂಟರ್‌ನೆಟ್ ಬ್ಯಾಂಕಿ ಂಗ್ ಅಥವಾ ಎಟಿಎಂ ಮೂಲಕ ಕೆಲವು ಮಾಹಿತಿಯನ್ನು ಇನ್ನು ಮುಂದೆ ಸಲ್ಲಿಸಬೇಕು. ಇದರಿಂದ ಬ್ಯಾಂಕ್‌ಗಳು ನಿರ್ದಿಷ್ಟ ಚೆಕ್‌ಗಳು ಬಂದಾಗ ಖಾತೆದಾರ ಎಲೆ ಕ್ಟ್ರಾನಿಕ್ ಮಾಧ್ಯಮದ ಮೂಲಕ ನೀಡಿದ ಪೂರ್ವ ಮಾಹಿತಿಯನ್ನು ತಾಳೆ ಹಾಕಿ ಚೆಕ್ ಅನ್ನು ಮಾನ್ಯ ಮಾಡುತ್ತವೆ. ಈ ರೀತಿಯ ಮಾಹಿತಿ ಇಲ್ಲದ ಸಂದರ್ಭ ಬ್ಯಾಂಕ್ ಚೆಕ್ ಅನ್ನು ಅಮಾನ್ಯಗೊಳಿಸುವುದಕ್ಕೆ ಅವಕಾಶ ನೀಡಲಾಗಿದೆ. 50 ಸಾವಿರ ರೂ. ಅಥವಾ ಹೆಚ್ಚಿನ ಮೊತ್ತಕ್ಕೆ ಈ ಮಾಹಿತಿಯನ್ನು ಬ್ಯಾಂಕ್‌ಗಳು ಕೇಳಬಹುದು. ಆದರೆ 5 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಚೆಕ್‌ಗಳಿಗೆ ಮಾತ್ರ “ಪಾಸಿಟಿವ್ ಪೇ ಸಿಸ್ಟಮ್’ ಅನ್ನು ಕಡ್ಡಾಯವಾಗಿ ಅನ್ವಯಿಸುವಂತೆ ಆರ್‌ಬಿಐ ಈಗಾಗಲೇ ತಿಳಿಸಿದೆ. ಕೆಲವು ಬ್ಯಾಂಕ್‌ಗಳು ಈ ನಿಟ್ಟಿನಲ್ಲಿ ಗ್ರಾಹಕರಿಗೆ ಮಾಹಿತಿ ನೀಡಲಾರಂಭಿಸಿವೆ.
ಚೆಕ್ ನೀಡುವಾಗಲೇ ಆ ಖಾತೆದಾರರ ಬ್ಯಾಂಕ್‌ಗೆ ಮಾಹಿತಿ ನೀಡಬೇಕು. ಚೆಕ್ ಸಂಖ್ಯೆ, ದಿನಾಂಕ, ಯಾರ ಹೆಸರಿಗೆ ಚೆಕ್ ನೀಡಲಾಗುತ್ತಿದೆ, ಖಾತೆ ಸಂಖ್ಯೆ, ಎಷ್ಟು ಮೊತ್ತ ಇತ್ಯಾದಿ ಮಾಹಿತಿಯನ್ನು ಒದಗಿಸಬೇಕು. ಮೊತ್ತ ನಗದು ಮಾಡಿಕೊಳ್ಳಲು ನೀಡುವ ಮುನ್ನ ಮಾಹಿತಿಯನ್ನು ಪುನರ್ ಪರಿಶೀಲಿಸಲಾಗುತ್ತದೆ. ಒಂದು ವೇಳೆ ಚೆಕ್ ಪಾವತಿ ಸಂದರ್ಭ ವ್ಯತ್ಯಾಸಗಳು ಕಂಡುಬಂದಲ್ಲಿ ಚೆಕ್ ಅನ್ನು ಸಲ್ಲಿಸುವ ಹಾಗೂ ಸ್ವೀಕರಿಸುವ ಎರಡೂ ಬ್ಯಾಂಕ್‌ನಿಂದ ಅಗತ್ಯ ಕ್ರಮ ತೆಗೆದುಕೊಳ್ಳಲಾಗು ವುದು ಎಂದು ಆರ್‌ಬಿಐ ತಿಳಿಸಿದೆ.