Advertisement

Khel Ratna Award: ನನ್ನಿಂದಲೇ ತಪ್ಪಾಗಿರಬಹುದು: ಮನು ಭಾಕರ್‌

08:29 PM Dec 24, 2024 | Team Udayavani |

ಹೊಸದಿಲ್ಲಿ: ಧ್ಯಾನ್‌ಚಂದ್‌ ಖೇಲ್‌ರತ್ನ ಪ್ರಶಸ್ತಿಗೆ ಶಿಫಾರಸುಗೊಂಡ ಪಟ್ಟಿಯಲ್ಲಿ ಖ್ಯಾತ ಶೂಟರ್‌ ಮನು ಭಾಕರ್‌ ಹೆಸರಿಲ್ಲ ಎಂಬ ವಿವಾದ ಇನ್ನಷ್ಟು ತೀವ್ರಗೊಂಡಿದೆ. ಕೇಂದ್ರ ಕ್ರೀಡಾ ಸಚಿವಾಲಯ ಇನ್ನೂ ಪ್ರಶಸ್ತಿಪಟ್ಟಿ ಅಂತಿಮಗೊಂಡಿಲ್ಲ ಎಂದಿದ್ದರೂ, ಆಕ್ಷೇಪಗಳು ಮುಂದುವರಿದಿವೆ.

Advertisement

ಈ ಬಗ್ಗೆ ಸ್ವತಃ ಮನು ಭಾಕರ್‌ ಪ್ರತಿಕ್ರಿಯಿಸಿ, “ಅರ್ಜಿ ಹಾಕುವುದರಲ್ಲಿ ನನ್ನಿಂದಲೇ ಏನೋ ತಪ್ಪಾಗಿರಬಹುದು. ಊಹಾಪೋಹ ಬೇಡ, ಇಲ್ಲಿಗೆ ನಿಲ್ಲಿಸಿ’ ಎಂದು ಮನವಿ ಮಾಡಿದ್ದಾರೆ.

ಮತ್ತೊಂದು ಕಡೆ ಸಂದರ್ಶನವೊಂದರಲ್ಲಿ ಮಾತನಾಡಿರುವ ತಂದೆ ರಾಮಕಿಶನ್‌, “ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಮೇಲೂ ಮನುವನ್ನು ಪ್ರಶಸ್ತಿಗೆ ಆಯ್ಕೆ ಮಾಡಿಲ್ಲ. ಇದಕ್ಕೂ ಮೀರಿ ಇನ್ನೇನು ಮಾಡಬೇಕು? ಅವಳನ್ನು ಶೂಟರ್‌ ಬದಲು ಕ್ರಿಕೆಟರ್‌ ಮಾಡಬೇಕಿತ್ತು’ ಎಂದಿದ್ದಾರೆ. ಮನು ಕೋಚ್‌ ಜಸ್ಪಾಲ್‌ ರಾಣಾ ಕೂಡ ಶಿಫಾರಸು ಪಟ್ಟಿಯಲ್ಲಿ ಹೆಸರಿಲ್ಲದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next