Advertisement

ಶಿವಮೊಗ್ಗ ಪ್ರಾಧ್ಯಾಪಕರ Laptop ಹ್ಯಾಕ್; 600 ಡಾಲರ್ ಗೆ ಬೇಡಿಕೆ

12:24 PM May 16, 2017 | Sharanya Alva |

ಶಿವಮೊಗ್ಗ: ಜಗತ್ತಿನ ಸೈಬರ್ ಜಗತ್ತು ವಾನಕ್ರೈ ರಾನ್ಸಂವೇರ್ ದಾಳಿ ಕರ್ನಾಟಕಕ್ಕೂ ಕಾಲಿಟ್ಟಿದ್ದು, ಶಿವಮೊಗ್ಗದ ಪೆಸಿಟ್ ಎಂ ಕಾಲೇಜಿನ ಸಹ ಪ್ರಾಧ್ಯಾಪಕರೊಬ್ಬರ ಲ್ಯಾಪ್ ಟ್ಯಾಪ್ ವೈರಸ್ ಅಟ್ಯಾಕ್ ಗೆ ತುತ್ತಾಗಿದ್ದು, 600 ಡಾಲರ್ ನೀಡುವಂತೆ ಬೇಡಿಕೆ ಇಟ್ಟಿರುವ ಅಂಶ ಬೆಳಕಿಗೆ ಬಂದಿದೆ.

Advertisement

ಶಿವಮೊಗ್ಗ ಪೆಸಿಟ್ ಎಂ ಕಾಲೇಜಿನ ಐಎಸ್ಇ  ವಿಭಾಗದ ಸಹ ಪ್ರಾಧ್ಯಾಪಕ ಅರ್ಜುನ್ ಎಂಬವರ ಲ್ಯಾಪ್ ಟ್ಯಾಪ್ ಪರದೆ ಮೇಲೆ ಡೈಲಾಗ್ ಬಾಕ್ಸ್ ನಲ್ಲಿ, ನಿಮ್ಮ ಅಕೌಂಟ್ ಹ್ಯಾಕ್ ಮಾಡಲಾಗಿದ್ದು ಅದನ್ನು ತೆಗೆಯಲು  600 ಡಾಲರ್ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿರುವ ಸಂದೇಶ ಕಾಣಿಸಿಕೊಂಡಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಶಿವಮೊಗ್ಗದ ನಿವಾಸಿಯಾಗಿರುವ ಅರ್ಜುನ್ ಅವರು ಖಾಸಗಿ ಚಾನೆಲ್ ಜೊತೆ ಮಾತನಾಡುತ್ತ, ನನಗೆ ಬಿಟ್ ಕಾಯಿನ್ ಮೂಲಕ 600 ಡಾಲರ್ ಪಾವತಿಸುವಂತೆ ಸೂಚಿಸಿದ್ದಾರೆ. ಆದರೆ ನನ್ನ ಲ್ಯಾಪ್ ಟ್ಯಾಪ್ ನಲ್ಲಿ ಅಂತಹ ಮುಖ್ಯವಾದ ಫೈಲ್ಸ್ ಗಳೇನಿಲ್ಲ. ಹಾಗಾಗಿ ಹಣ ಪಾವತಿ ಮಾಡಲ್ಲ ಎಂದು ತಿಳಿಸಿದ್ದಾರೆ.

ವಾನಕ್ರೈ ರಾನ್ಸಂವೇರ್ ದಾಳಿ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಸೋಮವಾರದಿಂದ ಎಟಿಎಂ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next