Advertisement

ಪಾಕಿಸ್ಥಾನ ಪ್ರವಾಸಕ್ಕೆ ಲಂಕಾ ಸಜ್ಜು

12:17 AM Sep 21, 2019 | Team Udayavani |

ಕೊಲಂಬೊ: ಭದ್ರತಾ ಭೀತಿಯಿಂದ ಹಿರಿಯ ಆಟಗಾರರೇ ಹಿಂದೆ ಸರಿದರೂ ಶ್ರೀಲಂಕಾ ಕ್ರಿಕೆಟ್‌ ತಂಡ ಪಾಕಿಸ್ಥಾನ ಪ್ರವಾಸಕ್ಕೆ ತೆರಳುವುದಾಗಿ ಘೋಷಿಸಿದೆ.

Advertisement

ಈ ಕುರಿತಂತೆ ಶ್ರೀಲಂಕಾ ಕ್ರಿಕೆಟ್‌ ಮಂಡಳಿಯ ಕಾರ್ಯದರ್ಶಿ ಮೋಹನ್‌ ಡಿ’ಸಿಲ್ವ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು, “ಪಾಕಿಸ್ಥಾನಕ್ಕೆ ತೆರಳಲು ರಕ್ಷಣಾ ಸಚಿವರಿಂದ ನಾವು ಹಸಿರು ನಿಶಾನೆ ಪಡೆದಿದ್ದೇವೆ. ಪಾಕ್‌ ಪ್ರವಾಸ ನಾವು ಯೋಜಿಸಿದಂತೆಯೇ ನಡೆಯಲಿದೆ. ನಾನು ಹಾಗೂ ನಮ್ಮ ಕಚೇರಿ ಸಿಬಂದಿ ಶ್ರೀಲಂಕಾ ತಂಡಕ್ಕೆ ಸಾಥ್‌ ನೀಡಲಿದ್ದೇವೆ’ ಎಂದಿದ್ದಾರೆ.

“ನಾನು ಕಳೆದ ವಾರ ಪಾಕ್‌ಗೆ ತೆರಳಿದ್ದು, ಅಲ್ಲಿ ಪರಿಸ್ಥಿತಿ ಮತ್ತು ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ ಅನಂತರ ಈ ನಿರ್ಧಾರಕ್ಕೆ ಬಂದಿದ್ದೇವೆ’ ಎಂದು ಡಿ’ ಸಿಲ್ವ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next