Advertisement

ಲಂಕಾ “ಸಾಫ್ಟ್ವೇರ್‌’ಉಗ್ರನಿಗೆ ಭಾರತದ ಲಿಂಕ್‌

02:56 AM May 15, 2019 | Team Udayavani |

ಕೊಲಂಬೊ/ಅಹ್ಮದಾಬಾದ್‌: ಲಂಕಾವನ್ನೇ ನಡುಗಿಸಿದ ಈಸ್ಟರ್‌ ರವಿವಾರದ ಸ್ಫೋಟಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ಸರಕಾರ ಗುಪ್ತವಾಗಿ ಬಂಧಿ ಸಿಟ್ಟಿರುವ ಆದಿಲ್‌ ಅಮೀಜ್‌ ಎಂಬ ಸಾಫ್ಟ್ವೇರ್‌ ಎಂಜಿನಿಯರ್‌ ವಿರುದ್ಧ ಭಾರತದಲ್ಲೂ ಎರಡು ಚಾರ್ಜ್‌ ಶೀಟ್‌ಗಳು ಸಲ್ಲಿಕೆಯಾಗಿದ್ದವೆಂಬ ಕುತೂಹಲಕಾರಿ ವಿಚಾರವೊಂದು ಬಹಿರಂಗಗೊಂಡಿದೆ.

Advertisement

ದಕ್ಷಿಣ ಕೊಲಂಬೊದ ಅಲುತಾYಮ ಎಂಬ ಪಟ್ಟಣದ ನಿವಾಸಿಯಾದ ಎಂ. ಅಜೀಜ್‌ ಅವರ ಪುತ್ರ ಆದಿಲ್‌. ಎಂ.ಎಸ್ಸಿ. ಕಂಪ್ಯೂಟರ್‌ ಸೈನ್ಸ್‌ ಮತ್ತು ಯು.ಕೆ. ವಿಶ್ವವಿದ್ಯಾಲಯವೊಂದರಿಂದ ರಾಜಕೀಯ ಶಾಸ್ತ್ರ ಪದವಿ ಯನ್ನೂ ಗಳಿಸಿರುವುದಾಗಿ ತನ್ನ “ಲಿಂಕ್ಡ್ ಇನ್‌’ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹೇಳಿಕೊಂಡಿರುವ ಈತ, ತನ್ನನ್ನು ತಾನು ಸೀನಿಯರ್‌ ಎಂಜಿನಿಯರ್‌/ಪ್ರೋಗ್ರಾಮರ್‌/ವೆಬ್‌ ಡಿಸೈನರ್‌ ಎಂದು ಕರೆದುಕೊಂಡಿದ್ದಾನೆ.

ಬಂಧನ ಏಕೆ?
ಈಸ್ಟರ್‌ ದಿನದ ಸ್ಫೋಟಗಳ ಸಂಚುಕೋರರಿಗೆ ಎಲ್ಲ ತಾಂತ್ರಿಕ ನೆರವು ನೀಡಿರುವುದು ಮತ್ತು ಕಚ್ಚಾ ವಸ್ತುಗಳನ್ನು ತಲುಪಿಸಲು ಸಹಾಯ ಮಾಡಿರುವ ಆರೋಪ ಈತನ ಮೇಲಿದೆ. ಹಾಗಾಗಿ ಸ್ಫೋಟಗಳು ಸಂಭವಿಸಿದ ನಾಲ್ಕು ದಿನಗಳ ಅನಂತರ (ಎ. 25ರಂದು) ಈತನನ್ನು ಬಂಧಿಸಲಾಗಿದೆ.

ಈಸ್ಟರ್‌ ಸ್ಫೋಟಗಳನ್ನು ನಡೆಸಿದ ಎರಡು ಭಯೋತ್ಪಾದಕ ಗುಂಪುಗಳ ನಡುವೆ ಸಮನ್ವಯಕಾರನಂತೆ ಕೆಲಸ ಮಾಡಿದ್ದ ಆರೋಪವೂ ಈತನ ಮೇಲಿದೆ.

ಭಾರತದಲ್ಲಿ ಎರಡು ಆರೋಪಪಟ್ಟಿ
ಈತನ ಚಟುವಟಿಕೆಗಳ ಮೇಲೆ ಭಾರತೀಯ ಅಧಿ ಕಾರಿಗಳು 2016ರಿಂದಲೇ ಕಣ್ಣಿಟ್ಟಿದ್ದರು. ಭಾರತದಲ್ಲಿ ಐಸಿಸ್‌ ಸಂಘಟನೆಗೆ ಸಂಬಂಧಿಸಿದಂತೆ 2 ಪ್ರತ್ಯೇಕ ಚಾರ್ಜ್‌ ಶೀಟ್‌ಗಳಲ್ಲಿ ಈತನ ಹೆಸರನ್ನು ಉಲ್ಲೇಖೀಸಲಾಗಿತ್ತು.

Advertisement

ಮೂರು ಸಂಘಟನೆಗಳಿಗೆ ನಿಷೇಧ
ಈಸ್ಟರ್‌ ಸ್ಫೋಟಗಳ ರೂವಾರಿ ಎನ್ನಲಾಗಿರುವ ಶ್ರೀಲಂಕಾದ ನ್ಯಾಶನಲ್‌ ತೌಹೀತ್‌ ಜಮಾತ್‌ (ಎನ್‌ಟಿಜೆ) ಸಂಘಟನೆಯನ್ನು ಶ್ರೀಲಂಕಾ ಸರಕಾರ ನಿಷೇಧಿಸಿದೆ. ಜತೆಗೆ ಜಮಾತೆ ಮಿಲ್ಲಾತೆ ಇಬ್ರಾಹೀಂ (ಜೆಎಂಐ), ವಿಲ್ಲಾಯತ್‌ ಆಸ್‌ ಸೆಯಾÉನಿ (ಡಬ್ಲೂéಎಎಸ್‌) ಸಂಘಟನೆಗಳನ್ನೂ ನಿಷೇಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next