Advertisement

ಭಾಷೆ-ಸಂಸ್ಕೃತಿ ಜತೆ ಮಾನವೀಯ ಮೌಲ್ಯ ಅಗತ್ಯ

05:23 PM Mar 03, 2018 | |

ಯಾದಗಿರಿ: ಇಂದಿನ ದಿನಗಳಲ್ಲಿ ಮಾನವೀಯ ಮೌಲ್ಯಗಳು ನಶಿಸುತ್ತಿವೆ. ಅವುಗಳ ಉಳಿವಿಗಾಗಿ ಮಕ್ಕಳಲ್ಲಿ ಬಾಲ್ಯಾವಸ್ಥೆಯಿಂದಲೇ ಮೌಲ್ಯಗಳು ಬೆಳೆಸುವಲ್ಲಿ ಪಾಲಕರು, ಶಿಕ್ಷಕರು ಶ್ರಮಿಸಬೇಕು ಎಂದು ರಾಜ್ಯ ಬಾಲ ಭವನ ಸೊಸೈಟಿ ಸದಸ್ಯೆ ಮಲ್ಲಮ್ಮ ಕೋಮಲ್‌ ಹೇಳಿದರು.

Advertisement

ನಗರದ ಜಿಲ್ಲಾ ಬಾಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸೊಸೈಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾನವೀಯ ಮೌಲ್ಯಗಳನ್ನು ಬೆಳೆಸಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಭಿರಂಗ ಮಕ್ಕಳ ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ನಾಟಕಗಳ ಮೂಲಕ ಭಾಷೆ, ಸಂಸ್ಕೃತಿ, ಸಾಹಿತ್ಯ, ಸಾಮಾಜಿಕ, ಮಕ್ಕಳಲ್ಲಿ ಆತ್ಮವಿಶ್ವಾಸ, ನಾಟಕ ಅಭಿರುಚಿ, ವ್ಯಕ್ತಿತ್ವ ವಿಕಸನ, ಧೈರ್ಯ ಹಾಗೂ ಇತರರೊಂದಿಗೆ ಬೆರೆತು ಜೀವಿಸುವುದು, ದೇಶಪ್ರೇಮ, ಪರಿಸರ ಕಾಳಜಿ ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದರು.

ಅಭಿರಂಗ ಮಕ್ಕಳ ನಾಟಕೋತ್ಸವ ಕಾರ್ಯಕ್ರಮದಲ್ಲಿ ದೋರನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಂದ ಕೆಟ್ಟ ಮೇಲೆ ಬುದ್ದಿ ಬಂತು ಎಂಬ ನಾಟಕ, ಸರಕಾರಿ ಬಾಲಕಿಯರ ಬಾಲ ಮಂದಿರ ಮಕ್ಕಳಿಂದ ಭ್ರೂಣ ಹತ್ಯೆ ಕಿರುನಾಟಕ ಹಾಗೂ ಯಾದಗಿರಿ ಗ್ರೇಸ್‌ ಅನಾಥ ಆಶ್ರಮ ಮಕ್ಕಳಿಂದ ಶಿಕ್ಷಣ ನನ್ನ ಹಕ್ಕು ಎಂಬ ಕಿರುನಾಟಕವನ್ನು ರಂಗ ಪ್ರದರ್ಶನ ಮೂಲಕ ನೀಡಲಾಯಿತು. ಕಾರ್ಯಕ್ರಮದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅಬ್ದುಲ್‌ ರಹಿಮಾನ ಅಧ್ಯಕ್ಷತೆ ವಹಿಸಿದ್ದರು. 

ಮುಖ್ಯ ಅಥಿತಿಗಳಾಗಿ ಬೆಂಗಳೂರು ಬಾಲ ವಿಕಾಸ ಅಕಡಮಿ ಸದಸ್ಯ ಪ್ರಕಾಶ ಅಂಗಡಿ ಕನ್ನಳ್ಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀಕ್ಷಕ ಚಂದ್ರಕಾಂತ ಚಲವಾದಿ, ಬಾಲಕಾರ್ಮಿಕ ಇಲಾಖೆ ಯೋಜನಾಧಿಕಾರಿ ರಘುವೀರ ಸಿಂಗ್‌ ಠಾಕೂರ್‌, ಪರಶುರಾಮ, ಬೀರಪ್ಪ, ಕಾರ್ಯಕ್ರಮ ಸಂಯೋಜಕ ಹಾಗೂ ಜಿಲ್ಲಾ ಬಾಲ ಭವನ ಸಿಂಬ್ಬಂದಿ ಅನಿಲಕುಮಾರ ಪಾಟೀಲ್‌ ಭಾಗವಹಿಸಿದ್ದರು.

Advertisement

ನಾಟಕೋತ್ಸವಕ್ಕೆ ಚಾಲನೆ ಜಿಲ್ಲಾ ಮಕ್ಕಳ ರಕ್ಷಣಾ ಧಿಕಾರಿ ಅಬ್ದುಲ್‌ ರಹಿಮಾನ್‌ ಅವರು, ನಗರದ ಹೊಸ ಬಸ್‌ ನಿಲ್ದಾಣದಲ್ಲಿ ಅಭಿರಂಗ ಮಕ್ಕಳ ನಾಟಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಯರಗೋಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ಕಿರುನಾಟಕ ಹಾಗೂ ಯಾದಗಿರಿ ಸರಕಾರಿ ಬಾಲಕಿಯರ ಬಾಲ ಮಂದಿರದ ಮಕ್ಕಳಿಂದ ಸ್ವತ್ಛಭಾರತ ಅಭಿಯಾನ ಕುರಿತು ಕಿರುನಾಟಕವನ್ನು ಪ್ರದರ್ಶಿಸಿ, ಸಾರ್ವಜನಿಕರಲ್ಲಿ ಬಾಲ್ಯವಿವಾಹ ಕಾಯ್ದೆ ಹಾಗೂ ಸ್ವತ್ಛ ಭಾರತ ಬಗ್ಗೆ ಕಾನೂನು ಅರಿವು
ಮುಡಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next