Advertisement

ಪರಭಾಷಾ ನಟಿಯರಿಗೆ ಸ್ಟಾರ್‌ ಪಟ್ಟ

12:38 PM Apr 17, 2017 | |

ಬೆಂಗಳೂರು: ಕರ್ನಾಟಕ ಸಿನಿಮಾ ರಂಗದಲ್ಲಿ ಕನ್ನಡಿಗರನ್ನು ಕಡೆಗಣಿಸಿ ಪರಭಾಷಾ ನಟರನ್ನು ಕರೆತಂದು ಸೂಪರ್‌ ಸ್ಟಾರ್‌ಗಳನ್ನಾಗಿ ಮಾಡುತ್ತಿಧಿದ್ದಾರೆ ಎಂದು ನಟಿ, ಪದ್ಮಭೂಷಣ ಡಾ.ಬಿ. ಸರೋಜಾದೇವಿ ಬೇಸರ ವ್ಯಕ್ತಪಡಿಸಿದರು. ಭಾರತೀಯ ವಿದ್ಯಾ ಭವನದ ಖೀಂಚಾ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಅಭಿನಯ ಶಾರದೆ ಡಾ. ಜಯಂತಿ ಅವರಿಗೆ “ಪದ್ಮಭೂಷಣ ಡಾ. ಬಿ. ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು. 

Advertisement

ಕಲಾವಿದರನ್ನು ಇನ್ನೊಬ್ಬ ಕಲಾವಿದ ಸನ್ಮಾನಿಸುವುದೇ ಅತ್ಯಂತ ಸಂತೋಷದ ಕ್ಷಣ. ಜಯಂತಿಯರು ಎಲ್ಲ ಪಾತ್ರಗಳಿಗೂ ಜೀವತುಂಬಿ ನಟಿಸುತ್ತಿದ್ದರು. ಜಯಂತಿ ಮತ್ತು ನಾನು ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದೇವೆ. ನಮ್ಮಿಬ್ಬರ ಸ್ನೇಹ ಎಂದಿಗೂ ಹಸಿರಾಗಿರುತ್ತದೆ. ಶೂಟಿಂಗ್‌ಗೆ ಹೋಗಿದ್ದ ಸಂದರ್ಭದ ಬಿಡುವಿನ ಸಮಯದಲ್ಲಿ ಕಾರ್ಡ್‌ ಆಡಿರುವುದು, ಒಟ್ಟಿಗೆ ತಿಂಡಿ ತಿಂದಿರುವುದು ಸೇರಿದಂತೆ ವೃತ್ತಿ ಜೀವನದ ಅನುಭವಗಳನ್ನು ಅವರು ಹಂಚಿಕೊಂಡರು.

ಮಾಜಿ ಸಚಿವ ಹಾಗೂ ನಟ ಅಂಬರೀಷ್‌ ಮಾತನಾಡಿ, ಕಲಾವಿದರ ಒಳ್ಳೆಯ ತನಕ್ಕೆ ಎಲ್ಲೆಡೆ ಯಿಂದಲೂ ಪ್ರೋತ್ಸಾಹ ಹಾಗೂ ಹೊಗಳಿಕೆ ಬರುತ್ತದೆ. ದಕ್ಷಿಣ ಭಾರತದಿಂದ ಪದ್ಮಿನಿ, ರಾಗಿಣಿ, ಸರೋಜಾದೇವಿ, ಕಾಂಚನ, ಭಾರತಿ, ಹೇಮಾ ಮಾಲಿನಿ, ಜಯಪ್ರದ, ಶ್ರೀದೇವಿ, ಜಯಂತಿ ಹೀಗೆ ಶ್ರೇಷ್ಠ ನಟಿಯರಾಗಿ ಹೆಸರು ಗಳಿಸಿದವರು ಅನೇಕರು.

ದುರ್ದೈವ ಇಂದು ಕನ್ನಡ ಚಿತ್ರರಂಗಕ್ಕೆ ಬಾಂಬೆಯಿಂದ ನಟಿಯರನ್ನು ಕರೆ ತರುತ್ತಿದ್ದಾರೆ. ಅವರಿಗೆ ಕನ್ನಡ ಬಾರದೇ ಇದ್ದರೂ ಪರವಾಗಿಲ್ಲ. ಅವರಿಂದ 1, 2, 3, 4… ಹೇಳಿಸಿ, ಸ್ವಲ್ಪ ಎಕ್ಸ್‌ ಫೋಸ್‌ ಮಾಡಿದರೆ ಸಾಕಾಗುತ್ತದೆ ಎಂದು ಕನ್ನಡ ಚಿತ್ರರಂಗಕ್ಕೆ ಪರಭಾಷಿಕರನ್ನು ಕರೆತರುವುದನ್ನು ಪರೋಕ್ಷವಾಗಿ ವಿರೋಧಿಸಿದರು.

ಇಂದಿನ ನಟಿಯರು ಒಂದೇ ಸಿನಿಮಾಕ್ಕೆ ಸೀಮಿತರಾಗುತ್ತಿದ್ದಾರೆ. ಶ್ರೇಷ್ಠ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರು ಹೆಣ್ಣಿನ ಸಂಸ್ಕೃತಿಗೆ ವಿರುದ್ಧ ವಾಗಿ, ಹೆಣ್ಣಿನ ಶೋಷಣೆಯ ವಿವಿಧ ಮಜಲು ಗಳನ್ನು ಚಿತ್ರದ ಮೂಲಕ ಸಮಾಜಕ್ಕೆ ತೋರಿಸಿ ದ್ದಾರೆ. ಅಂಥ ಗಟ್ಟಿತನವನ್ನು ಪುಟ್ಟಣ್ಣ ಅವರಿಂದ ಮಾತ್ರ ನಿರೀಕ್ಷೆ ಮಾಡಲು ಸಾಧ್ಯ ಎಂದು ಹೇಳಿದರು.

Advertisement

ಕಲಾವಿದರ ನಟನೆಯ ತುಣುಕುಗಳನ್ನು ಕ್ರೋಢೀಕರಿಸಿ, ಸಮಾಜಕ್ಕೆ ನೀಡುವುದೇ ಅತಿದೊಡ್ಡ ಗೌರವ. ಇದರ ಮುಂದೆ ಪದ್ಮಶ್ರೀ, ಪದ್ಮ ವಿಭೂಷಣ ಹಾಗೂ ದಾದಾಸಾಹೇಬ್‌ ಪಾಲ್ಕೆ ಪ್ರಶಸ್ತಿ ಕೂಡ ಏನೂ ಅಲ್ಲ ಎಂದು ತಮ್ಮ ಮತ್ತು ಸರೋಜದೇವಿ ಹಾಗೂ ಜಯಂತಿಯಧಿವರೊಂದಿಗಿನ ಸುಮಧುರ ಸನ್ನಿವೇಶದ ಕೆಲವು ಪ್ರಸಂಗಗಳನ್ನು ಹಂಚಿಕೊಂಡರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರಸಿಂಗ್‌ ಬಾಬು, ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್‌.ರಾಮಾನುಜ, ನಿರ್ದೇಶಕ ಎಚ್‌.ಎನ್‌.ಸುರೇಶ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಉಪಸ್ಥಿತರಿದ್ದರು.

ಕನ್ನಡದಲ್ಲಿ ಸಿನಿಮಾ ಮಾಡದವರಿಗೆ ದಾದಾಸಾಹೇಬ್‌ ಪಾಲ್ಕೆ ಪ್ರಶಸ್ತಿಯನ್ನು ಕನ್ನಡಿಗರ ನೆಲೆಯಲ್ಲಿ ನೀಡುತ್ತಾರೆ.  ಕನ್ನಡದ ಶ್ರೇಷ್ಠ ನಟಿ ಸರೋಜ ದೇವಿಯವರಿಗೆ ಈ ಪ್ರಶಸ್ತಿ ಲಭಿಸಬೇಕು. ಈ ಬಗ್ಗೆ ನಮ್ಮವರು ಮುತುವರ್ಜಿ ವಹಿಸಬೇಕು. ಇಂದು ಮಹಿಳೆಯನ್ನೇ ಪ್ರಧಾನವಾಗಿ ಸಿನಿಮಾ ಮಾಡಲು ಬೇಕಾದ ನಟಿಯರು ಸಿಗುತ್ತಿಲ್ಲ.
-ರಾಜೇಂದ್ರಸಿಂಗ್‌ ಬಾಬು, ಅಧ್ಯಕ್ಷ, ಕರ್ನಾಟಕ ಚಲನಚಿತ್ರ ಅಕಾಡೆಮಿ

ಕಲ್ಯಾಣ್‌ ಕುಮಾರ್‌ ಹಾಗೂ ಸರೋಜ ದೇವಿಯ ಜೋಡಿ ಸ್ಕ್ರೀನ್‌ ಮೇಲೆ ನೋಡಲು ತುಂಬಾ ಇಷ್ಟ. ಸರೋಜ ದೇವಿಯರು ಸದಾ ತಾಳ್ಮೆಯಿಂದ ಸಲಹೆ ನೀಡುತ್ತಿದ್ದವರು, ಅವರ ಮನೆಗೆ ಹೋದಾಗಲೆಲ್ಲ ಬೆಳ್ಳಿ ತಟ್ಟೆಯಲ್ಲೇ ಊಟ ನೀಡುತ್ತಿದ್ದರು. ಇಂದು ಒಂದೆರೆಡು ಸಿನಿಮಾ ಮಾಡಿದ ನಟಿಯರು ಆಕಾಶ ದಲ್ಲೇ ತೇಲಾಡುವಂತೆ ವರ್ತಿಸುತ್ತಾರೆ. ಆದರೆ, ಸರೋಜ ದೇವಿ ಬಹು ಭಾಷೆಯಲ್ಲಿ ನಟಿಸಿದರೂ ಅಹಂಕಾರ ಇಲ್ಲವೇ ಇಲ.
-ಜಯಂತಿ, ನಟಿ

Advertisement

Udayavani is now on Telegram. Click here to join our channel and stay updated with the latest news.

Next