Advertisement
ಹೀಗಾಗಿ ಲಿಂಗಾಯತರೆನ್ನುವ ಎಲ್ಲರೂ ಈ ರ್ಯಾಲಿಯಲ್ಲಿ ಭಾಗವಹಿಸಿ ಶಕ್ತಿ ತುಂಬುವ ಕೆಲಸ ಮಾಡಬೇಕು. ಈಗ ಹೋರಾಟ ಮಾಡಿದರೆ ಮುಂದೆ ಒಳ್ಳೆಯ ಫಲವಾಗಿ ಪ್ರತ್ಯೇಕ ಧರ್ಮದ ಸ್ಥಾನಮಾನ ಲಭಿಸಲಿದ್ದು, ಇದರಿಂದ ಸಾಹಿತ್ಯ, ಶೈಕ್ಷಣಿಕ ಸೇರಿದಂತೆ ವಿವಿಧ ಸ್ಥರಗಳಿಂದ ಲಿಂಗಾಯತ ಧರ್ಮದ ಜನರ ಒಳಿತಿಗೆ ಕಾರಣವಾಗಲಿದೆ.
Related Articles
Advertisement
ಅಖೀಲ ಭಾರತ ವೀರಶೈವ ಮಹಾಸಭಾದ ಮಾಜಿ ಜಿಲ್ಲಾಧ್ಯಕ್ಷ ಶಿವಣ್ಣ ಬೆಲ್ಲದ ಮಾತನಾಡಿ, ಈವರೆಗೂ ಲಿಂಗಾಯತ ಧರ್ಮಕ್ಕೆ ಸರಿಯಾದ ಹೋರಾಟದ ದಿಕ್ಕು ಇರಲಿಲ್ಲ. ಈಗ ಹೋರಾಟದ ದಿಕ್ಕು ಸರಿಯಾಗಿದೆ. ಆ.22 ರಂದು ನಡೆಯಲಿರುವ ರ್ಯಾಲಿಗೆ ಎಲ್ಲರೂ ಕೈ ಜೋಡಿಸುವ ಅಗತ್ಯವಿದ್ದು, 6 ಸ್ವತಂತ್ರ ಧರ್ಮದ ಬಳಿಕ ಲಿಂಗಾಯತವನ್ನು 7ನೇ ಸ್ವತಂತ್ರ ಧರ್ಮವನ್ನಾಗಿ ಮಾಡುವ ಕಾರ್ಯ ಆಗಬೇಕಿದೆ ಎಂದರು.
ಈಗಾಗಲೇ ಅಖೀಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ ಇದ್ದು, ಅದರ ಹೆಸರು ಬದಲಿಸಿ ಅಖೀಲ ಭಾರತ ಲಿಂಗಾಯತ ಮಹಾಸಭಾ ಸ್ಥಾಪಿಸುವ ತುರ್ತು ಅಗತ್ಯವಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಬೇಕೆಂಬುದು ನಾಡಿನ ಎಲ್ಲಾ ಮಠಾಧಿಶರ ಒತ್ತಾಸೆ.
ಬದಲಾಗುವ ಧರ್ಮಕ್ಕಾಗಿ ಹಕ್ಕು ಕೇಳುತ್ತಿದ್ದಾರೆ ಅಷ್ಟೆ. ಲಿಂಗಾಯತ ಮಹಾರ್ಯಾಲಿಯಲ್ಲಿ ಪಾಲ್ಗೊಳ್ಳಲು ಧಾರವಾಡ ಜಿಲ್ಲೆಯಿಂದ 800 ಕ್ಕೂ ಅ ಧಿಕ ವಾಹನಗಳ ವ್ಯವಸ್ಥೆ ಮಾಡಿದ್ದಾರೆ. ಜನರ ಬೇಕು ಬೇಡಿಕೆಗಳನ್ನು ನಮ್ಮ ಸರ್ಕಾರ ಈಡೇರಿಲಿದೆ. ಇದರಲ್ಲಿ ಯಾವ ಪಕ್ಷ ಅಥವಾ ಮುಖಂಡರ ಪ್ರತಿಷ್ಠೆ ಬೇಡ.
ಸಮಾಜದ ಹಿತಕ್ಕಾಗಿ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದರು. ಜಿಪಂ ಸದಸ್ಯ ಕೆ.ಸಿ.ಪುಡಕಲಕಟ್ಟಿ, ತಾಪಂ ಅಧ್ಯಕ್ಷ ಮಲ್ಲಪ್ಪ ಭಾವಿಕಟ್ಟಿ, ಡಾ|ಶಂಭುಲಿಂಗ ಹೆಗಡಾಳ, ಬಸವರಾಜ ಬಿಕ್ಕಣ್ಣವರ, ಎಚ್.ಸಿ.ಮೊರಬ, ಮಲ್ಲನಗೌಡ ಪಾಟೀಲ, ಮಹದೇವ ಹಂಪಣ್ಣವರ, ರಮೇಶ ಪಾಟೀಲ, ರಾಜು ಬೆಳ್ಳಕ್ಕಿ, ಬಸಯ್ಯ ಗಣಾಚಾರಿ, ಸಿದ್ದರಾಮಣ್ಣ ನಡಕಟ್ಟಿ ಇದ್ದರು.