Advertisement

ಲ್ಯಾಂಡ್‌ಟ್ರೇಡ್ಸ್‌ನ ಸಾಲಿಟೇರ್‌ ಯೋಜನೆ ಪರವಾನಿಗೆ ನ್ಯಾಯಬದ್ಧ: ಸು.ಕೋರ್ಟ್‌

10:25 AM Aug 04, 2019 | keerthan |

ಮಂಗಳೂರು: ಲ್ಯಾಂಡ್‌ಟ್ರೇಡ್ಸ್‌ ಬಿಲ್ಡರ್ ಆ್ಯಂಡ್‌ ಡೆವಲಪರ್ನ “ಸಾಲಿಟೇರ್‌’ ರೆಸಿಡೆನ್ಸಿಯಲ್‌ ಯೋಜನೆಗೆ ಮಹಾನಗರ ಪಾಲಿಕೆ ನೀಡಿರುವ ಕಟ್ಟಡ ನಿರ್ಮಾಣ ಪರವಾನಿಗೆಯು ನ್ಯಾಯಬದ್ಧವಾಗಿದೆ ಎಂಬುದಾಗಿ ಸರ್ವೋಚ್ಚ ನ್ಯಾಯಾಲಯವು ತನ್ನ ಪರವಾಗಿ ತೀರ್ಪು ನೀಡಿದೆ ಎಂದು ಸಂಸ್ಥೆಯು ತಿಳಿಸಿದೆ.

Advertisement

ನಗರದ ಹ್ಯಾಟ್‌ಹಿಲ್‌ನಲ್ಲಿರುವ ಸಾಲಿಟೇರ್‌ನ ಸಂಪರ್ಕ ರಸ್ತೆಗಳಲ್ಲೊಂದರ ವಿಸ್ತರಣೆಗೆ ಸಮ್ಮತಿಸದ ಕೆಲವು ಸ್ಥಳೀಯರು, ನಗರ ಪಾಲಿಕೆಯು ಸಾಲಿಟೇರ್‌ಗೆ ನೀಡಿರುವ ಪರವಾನಿಗೆಯ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ದೂರು ಸಲ್ಲಿಸಿದ್ದರು. ಪರವಾನಿಗೆ ಕಾನೂನು ಬದ್ಧವೆಂದು ಕೋರ್ಟ್‌ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ದೂರುದಾರರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಜುಲೈ 19ರಂದು ವಜಾಗೊಳಿಸಿದ ಸುಪ್ರೀಂ ಕೋರ್ಟ್‌, ಹೈಕೋರ್ಟಿನ ತೀರ್ಪನ್ನು ಎತ್ತಿಹಿಡಿದಿದೆಯಲ್ಲದೆ, ಪಾಲಿಕೆಯು “ಸಾಲಿಟೇರ್‌’ ಯೋಜನೆಗೆ ಕಾನೂನಿಗೆ ಅನುಗುಣವಾಗಿ ಕ್ಷಿಪ್ರವಾಗಿ ಪೂರ್ಣತಾ ಪ್ರಮಾಣಪತ್ರ ನೀಡಬೇಕೆಂದು ಆದೇಶಿಸಿದೆ ಎಂಬುದಾಗಿ ಲ್ಯಾಂಡ್‌ಟ್ರೇಡ್ಸ್‌ ಮಾಲಕರಾದ ಕೆ. ಶ್ರೀನಾಥ್‌ ಹೆಬ್ಟಾರ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸಾಲಿಟೇರ್‌ನ ಸಂಪರ್ಕ ರಸ್ತೆಯನ್ನು ಪಾಲಿಕೆಯು ವಿಸ್ತರಿಸುವ ಬಗ್ಗೆ ತಾನು ನೀಡಿದ್ದ “ಯಥಾಸ್ಥಿತಿ’ ಆದೇಶವನ್ನು ಕೂಡ ಇದೇ ವೇಳೆ ಕೋರ್ಟ್‌ ವಜಾ ಮಾಡಿದೆ. ಅರ್ಜಿದಾರರ ಸಮಸ್ಯೆಗಳಿಗೆ ಸಂಬಂಧಿಸಿ ನ್ಯಾಯಾಲಯದ ಸೂಚನೆಯಂತೆ ಪಾಲಿಕೆಯು ರಸ್ತೆ ವಿಸ್ತರಣೆ ಸಂದರ್ಭ ಅರ್ಜಿದಾರರ ಪೈಕಿ ಮೂವರ ಕಟ್ಟಡಗಳ ರಕ್ಷಣೆಗಾಗಿ ರಕ್ಷಣಾ ಗೋಡೆ ನಿರ್ಮಿಸಲು ಸಮ್ಮತಿಸಿದೆ. ಈ ಮೂಲಕ ರಸ್ತೆ ವಿಸ್ತರಣೆಗೆ ಸಂಬಂಧಿಸಿದ ಎಲ್ಲ ಅಡೆತಡೆಗಳು ಪರಿಹಾರಗೊಂಡಿವೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಪ್ರತಿಷ್ಠೆಯ ಯೋಜನೆ: ಶ್ರೀನಾಥ್‌ ಹೆಬ್ಟಾರ್‌
“ಸಾಲಿಟೇರ್‌’ ಸರ್ವಶ್ರೇಷ್ಠ ಸ್ವರೂಪದಲ್ಲಿ ನಿರ್ಮಾಣಗೊಳ್ಳುವಂತೆ ಕ್ರಮ ಕೈಗೊಂಡಿ ದ್ದೇವೆ. ಪ್ರತಿಷ್ಠಿತ ಯೋಜನೆಯ ನಿರ್ಮಾಣ ಪರವಾನಿಗೆಯನ್ನು ಸರ್ವೋಚ್ಚ ನ್ಯಾಯಾಲಯ ಪುರಸ್ಕರಿಸಿದ್ದು ನಮಗೆ ಸಂತಸ ನೀಡಿದೆ’ ಎಂದು ಲ್ಯಾಂಡ್‌ಟ್ರೇಡ್ಸ್‌ ಮಾಲಕ ಕೆ. ಶ್ರೀನಾಥ್‌ ಹೆಬ್ಟಾರ್‌ ಹೇಳಿದ್ದಾರೆ.

ಲ್ಯಾಂಡ್‌ಟ್ರೇಡ್ಸ್‌ ಎಲ್ಲ ನಿಯಮ, ಕಾನೂನುಗಳನ್ನು ಪರಿಪೂರ್ಣವಾಗಿ ಅನುಸರಿಸುತ್ತಿದೆ. ಐಎಸ್‌ಒ 9000: 2015 ಮಾನ್ಯತೆಯ ಲ್ಯಾಂಡ್‌ಟ್ರೇಡ್ಸ್‌ ಕ್ರಿಸಿಲ್‌ನಿಂದ ರಿಯಲ್‌ ಎಸ್ಟೇಟ್‌ ಡೆವಲಪರ್‌ನ ಡಿಎ2 ಪುರಸ್ಕಾರ ಹೊಂದಿದೆ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next