Advertisement

landslides ವಯನಾಡಿನ ದೃಶ್ಯ ನೋಡಿ ಊಟ ಸೇರುತ್ತಿಲ್ಲ: ನಾಗರಾಜ್‌

11:48 PM Aug 04, 2024 | Team Udayavani |

ಸಕಲೇಶಪುರ: ಭೀಕರ ಭೂ ಕುಸಿತದಿಂದ ತತ್ತರಿಸಿರುವ ಕೇರಳದ ವಯನಾಡಿನಲ್ಲಿ ರಕ್ಷಣಾ ಕಾರ್ಯಕ್ಕೆ ಬೆಂಗಳೂರಿನಿಂದ ತೆರಳಿದ ಎನ್‌ಡಿಆರ್‌ಎಫ್ ನ 30 ಜನರ ತಂಡದಲ್ಲಿ ನಿರತರಾಗಿರುವ ಕುರುಭತ್ತೂರು ಗ್ರಾ.ಪಂ.ನ ದೊಡ್ಡನಹಳ್ಳಿಯ ಹವಾಲ್ದಾರ್‌ ನಾಗರಾಜ್‌ ಕಾರ್ಯಾಚರಣೆ ವೇಳೆ ಎದುರಾದ ಸವಾಲುಗಳು, ಭೀಕರ ಸ್ಥಿತಿಗತಿ, ಜನರ ನೋವು ಸೇರಿದಂತೆ ಕಣ್ಣೀರಿನ ಕಥೆಗಳನ್ನು “ಉದಯವಾಣಿ’ ಜತೆ ಹಂಚಿಕೊಂಡಿದ್ದಾರೆ.

Advertisement

ಭೂಕುಸಿತವಾದ ವಯನಾಡು ಸಮೀಪದ ಮುಂಡಕೈ ಹಾಗೂ ಚೂರಲ್‌ವುಲ ಗ್ರಾಮಗಳ ಮಧ್ಯೆ 630 ಮನೆಗಳು ಇದ್ದವು. ಬಹುತೇಕ ಮನೆಗಳು ಕುಸಿದರೆ, ಕೆಲವು ಅನಾಥವಾಗಿವೆ. 380 ಮೃತದೇಹಗಳು ಸಿಕ್ಕಿವೆ, ಮೃತರ ಸಂಖ್ಯೆ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇಲ್ಲಿನ ದೃಶ್ಯಗಳನ್ನು ನೋಡಿ ನಮಗೆ ಊಟ ತಿಂಡಿ ಸರಿಯಾಗಿ ಸೇರುತ್ತಿಲ್ಲ. ಅರ್ಧಂಬರ್ಧ ಮೃತದೇಹಗಳು ನೀರಿನಲ್ಲಿ, ಕೆಸರಿನಲ್ಲಿ ದೊರಕುತ್ತಿವೆ. ಜಾನುವಾರುಗಳು ಅನಾಥವಾಗಿದ್ದು ನಮ್ಮನ್ನು ನೋಡಿ ಅವರ ಮಾಲಕರೆಂದು ಬರುತ್ತವೆ. ಆದರೆ ಅನಂತರ ಗೊತ್ತಾಗಿ ಹಿಂದಿರುಗಿ ಹೋಗುತ್ತವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next