ದೋಟಿಹಾಳ: ಗ್ರಾಮದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯ ನಿರ್ಮಾಣಕ್ಕೆ ಶುಕ್ರವಾರ ಚಳಗೇರಿಮಠ ವೀರ ಸಂಗಮೇಶ್ವರ ಶಿವಾಚಾರ್ಯರ ಶ್ರೀಗಳು ಮತ್ತು ಕೇಸೂರ ಗ್ರಾಮದ ಚಂದ್ರಶೇಖರ ಸ್ವಾಮಿಗಳ ಸಾನಿಧ್ಯದಲ್ಲಿ ಭೂಮಿಪೂಜೆ ನೆರವೇರಿತು.
ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಕೆ. ಶರಣಪ್ಪ ಅವರು,ದೋಟಿಹಾಳ ಕೇಸೂರ ಅವಳಿ ಗ್ರಾಮಗಳ ಭಕ್ತರು ಪ್ರತಿವರ್ಷ ಆಂಧ್ರಪ್ರದೇಶದಲ್ಲಿರುವ ಪುಣ್ಯಕ್ಷೇತ್ರಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆಗೆ 8 10 ದಿನಗಳ ಕಾಲ ಪಾದಯಾತ್ರೆ ಹೋಗಿ ಮಲ್ಲಿಕಾರ್ಜುನ ಸ್ವಾಮಿ ಆಶೀರ್ವಾದ ಪಡೆದು ಪುನೀತರಾಗುತ್ತಾರೆ. ಆದರೆ ಗ್ರಾಮದಲ್ಲಿರುವ ಮಕ್ಕಳು, ವೃದ್ಧರು ದೇವರದರ್ಶನ ಪಡೆಯಲು ಆಗುತ್ತಿರಲ್ಲಿಲ್ಲ. ಆದರೆ ಈಗನಿ ಮ್ಮ ಗ್ರಾಮದಲ್ಲಿ ಶ್ರೀಮಲ್ಲಿಕಾರ್ಜುನ ನೆಲೆಸಲು ನಿಮ್ಮ ಭಕ್ತಿಯ ರೂಪದಲ್ಲಿ ಬಂದ್ದಿದಾನೆ ಎಂದು ಹೇಳಿದರು.
ಚಳಗೇರಿಮಠ ವೀರ ಸಂಗಮೇಶ್ವರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಕೊಡುವ ಕೈಯಗಳಿಗೆ ಕೊರತೆಯಿಲ್ಲ. ಒಳ್ಳೆಯ ಮನಸ್ಸು, ಶ್ರದ್ಧಾ ಭಕ್ತಿಯಿಂದ ಕೆಲಸ ಮಾಡಿ. ಹಣ ಯಾವುದೋ ಒಂದು ರೂಪದಲ್ಲಿ ಸಂಗ್ರಹವಾಗುತ್ತದೆ. ಸುಂದರ ದೇವಾಲಯ ನಿರ್ಮಿಸಿ. ಈ ಕಾರ್ಯದಲ್ಲಿ ಎಷ್ಟೇತೊಡಕುಗಳು ಬಂದರು. ಗ್ರಾಮಸ್ಥರು ಎಲ್ಲರೂ ಸೇರಿಕೊಂಡು ಕೆಲಸ ಮಾಡಿ ಎಂದು ಹೇಳಿದರು. ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಮಾತನಾಡಿ, 10 15 ವರ್ಷಗಳಿಂದ ಈ ಗ್ರಾಮಗಳ ಮಲ್ಲಯ್ಯನ ಭಕ್ತರು ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆಗೆ ಪಾದಯಾತ್ರೆ ಮೂಲಕ ಹೋಗುತ್ತಾರೆ. ಕೆಲವರಿಗೆ ಅಲ್ಲಿಗೆ ಹೋಗಿ ಬರಲು ಕಷ್ಟವಾಗುತ್ತದೆ. ಇಲ್ಲಿ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.ಸುಂದರ ದೇವಾಲಯ ನಿರ್ಮಾಣವಾಗಬೇಕಾದರೆ ನಿರ್ದಿಷ್ಟ ರೂಪಬೇಕು. ನೀಲನಕ್ಷೆ ತಯಾರಿಸಿದೇವಾಲಯ ನಿರ್ಮಿಸಿ ಸರಕಾರದಿಂದ ಬರುವಯಾವುದಾದರೂ ಒಂದು ಯೋಜನೆಯಿಂದ ಹಣ ನೀಡಲು ಪ್ರಯತ್ನಿಸುತ್ತೇನೆ ಎಂದರು.
ತಾಪಂ ಸದಸ್ಯ ಯಂಕಪ್ಪ ಚವ್ಹಾಣ, ದೋಟಿಹಾಳ ಗ್ರಾಪಂ ಅಧ್ಯಕ್ಷ ಗೌಸುಸಾಬ್ ಕೊಣ್ಣೂರು, ಗ್ರಾಪಂ ಸದಸ್ಯ ಗುರುಸಿದ್ಧಯ್ಯ ಮರಳೀಮಠ, ಎಪಿಎಂಸಿ ಸದಸ್ಯರಾದ ಹನುಮಂತರಾವ್ ದೇಸಾಯಿ, ಮಲ್ಲಿಕಾರ್ಜುನ ಚಳಗೇರಿ, ಮುಖಂಡರಾದ ಸಂಗಪ್ಪ ಕಡಿವಾಲ್, ಕಲ್ಲಯ್ಯ ಸರಗಣಾಚಾರಿ,ಮಲ್ಲಯ್ಯ ಮ್ಯಾಗೇರಿಮಠ, ಲಾಡಸಾಬ್ ಕೊಳ್ಳಿ ಸೇರಿದಂತೆ ದೋಟಿಹಾಳ ಕೇಸೂರ ಗ್ರಾಮಗಳ ಮುಖಂಡರು, ಭಕ್ತರು ಭಾಗವಹಿಸಿದ್ದರು.