Advertisement

ರಸ್ತೆ ಕಾಮಗಾರಿಗೆ ಭೂಮಿಪೂಜೆ

08:00 PM Aug 28, 2020 | Suhan S |

ಮಾಯಕೊಂಡ: ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಕೈಗೊಂಡಿರುವಮಾಯಕೊಂಡ ವಿಧಾನಸಭಾ ಕ್ಷೇತ್ರದ ತುರ್ಚಘಟ್ಟ ಗ್ರಾಮದಿಂದ ಆನಗೋಡುವರೆಗೆ ಮಾಯಕೊಂಡ-ಕಂದಗಲ್ಲು ರಸ್ತೆಯಅಭಿವೃದ್ಧಿ ಕಾಮಗಾರಿಗೆ ಸಂಸದ ಜಿ.ಎಂ. ಸಿದ್ದೇಶ್ವರ್‌ ಹಾಗೂ ಶಾಸಕ ಪ್ರೊ| ಎನ್‌. ಲಿಂಗಣ್ಣ ಕಂದಗಲ್ಲು ಮತ್ತು ಕುರ್ಕಿ ಗ್ರಾಮದಲ್ಲಿ ಗುರುವಾರ ಭೂಮಿಪೂಜೆ ನೆರವೇರಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ್‌, ಕಾಮಗಾರಿಯನ್ನು ಉತ್ತಮ ಗುಣಮಟ್ಟದಲ್ಲಿ ಮಾಡಬೇಕು. ಗ್ರಾಮಸ್ಥರು ಕೂಡ ಕೆಲಸ ನಡೆಯುವ ಸಮಯದಲ್ಲಿ ಸಾಮಗ್ರಿಗಳ ಗುಣಮಟ್ಟವನ್ನು ಪರಿಶೀಲನೆ ಮಾಡುತ್ತಿರಬೇಕು. ಮಾಯಕೊಂಡ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಹೊಂದಬೇಕು. ನಿಮ್ಮ ಋಣ ನನ್ನ ಮತ್ತು ಶಾಸಕರ ಮೇಲಿದೆ. ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೂಲ ಋಣ ತೀರಿಸುವುದಾಗಿ ತಿಳಿಸಿದರು.

ಶಾಸಕ ಪ್ರೊ| ಎನ್‌. ಲಿಂಗಣ್ಣ ಮಾತನಾಡಿ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಮಗಾರಿ ಮಾಡಲು ಎಷ್ಟೇ ಪ್ರಯತ್ನ ಮಾಡಿದರೂ ಕೆಲಸ ನಡೆಯಲಿಲ್ಲ. ಯಡಿಯೂರಪ್ಪ ನೇತೃತ್ವದ ಸರ್ಕಾರ ಬಂದ ಮೇಲೆ ನಾನು ಮತ್ತು ಸಂಸದರು ಅನುದಾನ ಬಿಡುಗಡೆ ಮಾಡಿಸಿದ್ದೇವೆ ಎಂದರು. ಮಾಜಿ ಶಾಸಕ ಬಸವರಾಜ ನಾಯ್ಕ್ ಹಾಗೂ ಜಿಪಂ ಅಧ್ಯಕ್ಷೆ ದೀಪಾ ಜಗದೀಶ್‌ ಮಾತನಾಡಿದರು. ಜಿಪಂ ಸದಸ್ಯೆ ಶೈಲಜಾ ಬಸವರಾಜ್‌, ತಾಪಂ ಸದಸ್ಯ ಅಶೋಕ್‌, ಬಿಜೆಪಿ ಮಂಡಲ ಅಧ್ಯಕ್ಷ ದೇವೇಂದ್ರಪ್ಪ, ಮಾಜಿ ಅಧ್ಯಕ್ಷ ಅಣಬೇರು ಜೀವನಮೂರ್ತಿ, ಮುಖಂಡರಾದ ದೇವರಾಜ್‌ ಅತ್ತಿಗೆರೆ, ಬಸಪ್ಪ, ರಾಜಣ್ಣ ಮತ್ತಿತರರು ಇದ್ದರು. ತುರ್ಚಘಟ್ಟದಿಂದ ಆನಗೋಡು 7.30 ಕಿಮೀ ಉದ್ದದ ರಸ್ತೆಗೆ 5.80 ಕೋಟಿ, ಮಾಯಕೊಂಡದಿಂದ ಕಂದಗಲ್ಲು ರಸ್ತೆ ಯ ಕಬ್ಬೂರು, ಮಲ್ಲೇನಹಳ್ಳಿ, ಅತ್ತಿಗೆರೆ, ಗೋಪನಾಳು, ಕಾಶಿಪುರ, ಮಳಲ್ಕೆರೆವರೆಗೆ 22.62 ಕಿಮೀವರೆಗೆ 22.79 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next