Advertisement

ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ

05:57 PM May 02, 2022 | Shwetha M |

ಬಸವನಬಾಗೇವಾಡಿ: ಪ್ರತಿ ವರ್ಷ 60 ಲಕ್ಷಕ್ಕೂ ಹೆಚ್ಚು ಆದಾಯ ಬರುವ ಐದು ಮಾದರಿ ಗ್ರಾಪಂಗಳು ಜಿಲ್ಲೆಯಲ್ಲಿದ್ದು ಅದರಲ್ಲಿ ನಾಲ್ಕು ಗ್ರಾಪಂ ಬಸವನಬಾಗೇವಾಡಿ ಮತಕ್ಷೇತ್ರದಲ್ಲಿವೆ ಎಂದು ಮಾಜಿ ಸಚಿವ, ಶಾಸಕ ಶಿವಾನಂದ ಪಾಟೀಲ ಹೇಳಿದರು.

Advertisement

ಮನಗೂಳಿ ಪಟ್ಟಣದಲ್ಲಿ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ 2021-22ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಿಂದ ಹೊನಗನಹಳ್ಳಿ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಅಭಿವೃದ್ಧಿ ಕಾರ್ಯಗಳು ನಿಂತ ನೀರಾಗದೆ ಹರಿಯುವ ನೀರಾದಾಗ ಮಾತ್ರ ಆ ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗುತ್ತದೆ. ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ರಸ್ತೆ, ನೀರಾವರಿ, ವಿದ್ಯುತ್‌, ಕುಡಿಯುವ ನೀರು, ಶೈಕ್ಷಣಿಕ, ಒಳ ಚರಂಡಿ, ಪ್ರವಾಸೋದ್ಯಮ, ಔದ್ಯೋಗಿಕರಣ ಸೇರಿದಂತೆ ಸಾರ್ವಜನಿಕರಿಗೆ ಅಗತ್ಯ ಇರುವ ಮೂಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಜಿಲ್ಲೆಯಲ್ಲಿ ಮಾದರಿ ಮತಕ್ಷೇತ್ರವಾಗಿ ಹೊರ ಹೊಮ್ಮುತ್ತಿದೆ ಎಂದು ಹೇಳಿದರು.

ವಿಶ್ವನಾಥ ಪಾಟೀಲ, ಶ್ರೀಶೈಲ ಸಜ್ಜನ, ಚಂದ್ರಶೇಖರಗೌಡ ಪಾಟೀಲ, ಮಹಾಂತಪ್ಪಗೌಡ ಗುಜಗೊಂಡ, ಸಿದ್ದನಗೌಡ ಬಿರಾದಾರ, ಪಿಂಟು ಮುತ್ತಪ್ಪನವರ, ಶರಣಯ್ಯ ನಂದಿಕೊಲಮಠ, ಸುರೇಶ ಬಿರಾದಾರ, ಶ್ರೀಶೈಲ ಮುತ್ತಪ್ಪನವರ, ಬಸವರಾಜ ಸೋಂಪುರ, ಎಸ್‌.ಬಿ. ದನವಾಡ, ಎಸ್‌.ಜಿ. ಪಟ್ಟೆದ, ಸುನೀಲ ಉಳ್ಳಾಗಡ್ಡಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next