ಯಳಂದೂರು: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಕಂದಹಳ್ಳಿ ಮಹದೇಶ್ವರ ದೇಗುಲದ ಹೆಬ್ಟಾಗಿಲಿಗೆ ಸೋಮವಾರ ಭೂಮಿಪೂಜೆ ನೆರವೇರಿಸಲಾಯಿತು.
ಕಂದಹಳ್ಳಿ ಮಹದೇಶ್ವರಸ್ವಾಮಿ ಸೇವಾಟ್ರಸ್ಟ್ ವತಿಯಿಂದ 20 ಲಕ್ಷ ರೂ. ವೆಚ್ಚದಲ್ಲಿ ಹೆಬ್ಟಾಗಿಲು ನಿರ್ಮಿಸಲಾಗುತ್ತಿದೆ. ಈ ದೇಗುಲವು ಕಳೆದ 20 ವರ್ಷಗಳಿಂದಲೂ ಪ್ರತಿ ಭೀಮನ ಅಮಾವಾಸ್ಯೆ ನಿಮಿತ್ತ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಅಂದು ಲಕ್ಷಾಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಗುತ್ತದೆ. ಇದರೊಂದಿಗೆ ಪ್ರತಿ ಅಮಾವಾಸ್ಯೆಯಂದು ಬರುವ ಭಕ್ತರಿಗೆ ಉಪಾಹಾರ ವ್ಯವಸ್ಥೆ ಮಾಡಲಾಗುತ್ತಿದೆ.
ಈ ದೇಗುಲಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡುಬರುತ್ತಿದೆ. ಇಲ್ಲಿನ ಭಕ್ತರಿಗೆ ಇನ್ನಷ್ಟು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದ್ದು. ದೇಗುಲದ ಹೆಬ್ಟಾಗಿಲು ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ ಎಂದು ದೇಗುಲದ ಟ್ರಸ್ಟ್‌ನ ಸದಸ್ಯರು ಮಾಹಿತಿ ನೀಡಿದರು.
ಕಾರಾಪುರ ವಿರಕ್ತ ಮಠದ ಬಸವರಾಜ ಸ್ವಾಮೀಜಿ ಮಾತನಾಡಿ, ಮಲೆ ಮಹದೇಶ್ವರರು ಉತ್ತರದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಸಾಗುವ ವೇಳೆಯಲ್ಲಿ ಸುವರ್ಣಾವತಿ ನದಿ ತಟದಲ್ಲಿರುವ ಈ ಪವಿತ್ರ ಸ್ಥಳದಲ್ಲಿ ಧ್ಯಾನ ಮಾಡಿದ್ದರು. ರಾಜ್ಯಾದ್ಯಂತ ಇದಕ್ಕೆ ಸಾವಿರಾರು ಭಕ್ತರು ಇದ್ದಾರೆ. ಇಂತಹ ಐತಿಹಾಸಿಕ ಮಹತ್ವವುಳ್ಳ ಈ ದೇಗುಲಕ್ಕೆ ನಿರ್ಮಾಣ ಮಾಡುತ್ತಿರುವ ಹೆಬ್ಟಾಗಿಲು ಮತ್ತೂಂದು ಆಕರ್ಷಣೆಯಾಗಲಿ ಎಂದರು.
ಈ ವೇಳೆ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ರಾಮಚಂದ್ರು, ಟ್ರಸ್ಟ್‌ನ ಗೌರವಾಧ್ಯಕ್ಷ ಪಟೇಲ್‌ವುಹೇಶ್, ಅಧ್ಯಕ್ಷ ಕಂದಹಳ್ಳಿ ಬಿ. ಮಹೇಶ್ ಕುಮಾರ್,ಕಾರ್ಯದರ್ಶಿ ಸಿದ್ದರಾಜು, ಕೋಶಾಧ್ಯಕ್ಷ ಬಸವಣ್ಣ, ಹಾಪ್‌ಕಾಮ್ಸ್ ಉಪಾಧ್ಯಕ್ಷ ಬಸವಶೆಟ್ಟಿ, ಗ್ರಾಪಂ ಸದಸ್ಯರಾದ ಜವರಶೆಟ್ಟಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಕೆ.ಮೋಳೆ ನಾಗರಾಜು, ಪಪಂ ಸದಸ್ಯ ಮಹೇಶ್, ನಿಂಗರಾಜು ಟಿಎಪಿಸಿಎಂಎಸ್ ನಿರ್ದೇಶಕರಾದ ವೈ. ಎಸ್. ನಂಜಶೆಟ್ಟಿ, ಪ್ರತಾಪ್ ಗ್ರಾಪಂ ಸದಸ್ಯ ಚಂದ್ರಶೇಖರ್, ಮುಖಂಡರಾದ ಅಂಬಳೆಸೋಮಪ್ಪ, ಮೆಳ್ಳಹಳ್ಳಿ ಶಿವಣ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.