Advertisement

ಜೀವಜಲವಿಲ್ಲದೇ ಭೂಮಿ ಬರಡು

12:14 PM May 20, 2019 | pallavi |

5 ವರ್ಷಗಳಿಂದ ಬರಗಾಲ ಆವರಿಸಿ ಹಿಂಗಾರು-ಮುಂಗಾರು ಬೆಳೆಗಳೆಲ್ಲ ಕೈಕೊಟ್ಟಿವೆ. ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಟ್ಯಾಂಕರ್‌ ನೀರು ಸರಬರಾಜು ಮಾಡಿದರೆ ಸಾಲದು. ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಚಂದರಗಿಯಲ್ಲಿ ಮಾತ್ರ ಮೇವು ಬ್ಯಾಕ್‌ ಪ್ರಾರಂಭಿಸಿದ್ದು, ಪಂಚಾಯಿತ ಮಟ್ಟದಲ್ಲಿ ಒಂದರಂತೆ ಗೋಶಾಲೆ ತೆರೆಯಬೇಕು. ಬರಗಾಲ ಕಾಮಗಾರಿ ಪ್ರಾರಂಭಿಸಿಲ್ಲ. ರೈತರು-ಜನರಿಗೆ ಉದ್ಯೋಗ ನೀಡದ ಸರಕಾರ ಹಾಗೂ ತಾಲೂಕಾಡಳಿತ ಕಾರ್ಯವೈಖ್ಯರಿ ನೋಡಿದರೆ ಆಡಳಿತ ಯಂತ್ರವೇ ನಿಷ್ಕ್ರೀಯವಾಗಿದೆ ಎಂಬುದು ಸ್ಪಷ್ಟ.

Advertisement

•ಮಲ್ಲಿಕಾರ್ಜುನ ರಾಮದುರ್ಗ, ರಾಜ್ಯ ಸಂಘಟನಾ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಲ್ಲಿ ಟ್ಯಾಂಕರ್‌ ಮೂಲಕ ಹಾಗೂ ಸಾರ್ವಜನಿಕರ ಕೊಳವೆ ಬಾವಿಗಳಿಂದ ಸರಬರಾಜು ಮಾಡಲಾಗುತ್ತಿದೆ. ಜಾನುವಾರುಗಳಿಗಾಗಿ ಕೆ. ಚಂದರಗಿಯಲ್ಲಿ ಮೇವು ಬ್ಯಾಂಕ್‌ ತೆರೆಯಲಾಗಿದ್ದು, ಅವಶ್ಯಕತೆ ಬಿದ್ದರೆ ತಾಲೂಕಿನ ಬಿಡಕಿ, ಸುರೇಬಾನ ಹಾಗೂ ಬಟಕುರ್ಕಿಯಲಿ ಮೇವು ಬ್ಯಾಂಕ್‌ ಪ್ರಾರಂಭಿಸಲಾಗುವುದು. ಜನರಿಗೆ ಉದ್ಯೋಗ ಖಾತ್ರಿ ಯೋಜನೆ ಮೂಲಕ ಉದ್ಯೋಗ ನೀಡಲು ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಲಾಗಿದೆ.

•ಬಸನಗೌಡ ಕೋಟುರ, ತಹಶೀಲ್ದಾರ್‌, ರಾಮದುರ್ಗ

•ಈರನಗೌಡ ಪಾಟೀಲ

ರಾಮದುರ್ಗ: ಬೆಳೆಗಳಿಗೆ ನೀರಿಲ್ಲದೆ ಬರಡು ಭೂಮಿಯಂತಾಗಿದ್ದು, ಕುಡಿಯಲು ನೀರಿಲ್ಲದೇ ಒದ್ದಾಡುವ ಪರಸ್ಥಿತಿ ರಾಮದುರ್ಗ ತಾಲೂಕಿನಲ್ಲಿ ನಿರ್ಮಾಣವಾಗಿದೆ. ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಹೊಸದಾಗಿ ಕೊರೆಸಲಾದ ಬೋರ್‌ನಲ್ಲಿ ನೀರು ಸಿಗದೆ ಆತಂಕ ಪಡುವಂತಾಗಿದೆ. ಅಲ್ಲದೇ ಪ್ರಾಣಿ, ಪಕ್ಷಿಗಳಿಗೂ ಜೀವಜಲ ಸಿಗದಂತಾಗಿದೆ. 1,21,542 ಹೆಕ್ಟೇರ್‌ನಲ್ಲಿ 81,984 ಹೆಕ್ಟೇರ್‌ ಸಾಗುವಳಿ ಪ್ರದೇಶ ಹೊಂದಿದ್ದು, ಅದರಲ್ಲೂ ವಿಶೇಷವಾಗಿ ರಾಮದುರ್ಗದ ಉತ್ತರ ಭಾಗದ ಕೆ. ಚಂದರಗಿ, ಮುದಕವಿ, ಕಟಕೋಳ ಹೋಬಳಿಗಳಲ್ಲಿನ ಶೇ.70ರಷ್ಟು ಪ್ರದೇಶದ ಸ್ಥಿತಿ 1942ರ ಬರಗಾಲವನ್ನು ನೆನಪಿಸುವಂತಿದೆ. ನಾಲ್ಕೈದು ವರ್ಷಗಳಿಂದ ಸತತವಾಗಿ ಮುಂಗಾರು-ಹಿಂಗಾರು ಮಳೆಗಳು ಕೈಕೊಟ್ಟು ಆಹಾರದ ಬೆಳೆಗಳು ಬಾರದೇ ಜನತೆ ಇನ್ನಷ್ಟು ಕಂಗಾಲಾಗಿದ್ದಾರೆ.
ಮುಂಗಾರು, ಹಿಂಗಾರು ಸುರಿಯುವ ನಿರೀಕ್ಷೆಯಲ್ಲಿ ಒಣ ಭೂಮಿಗೆ ಬೀಜ ಬಿತ್ತಿ ಕೈ ಸುಟ್ಟುಕೊಂಡಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಅತಿವೃಷ್ಟಿಯ ಕಾರ್ಮೋಡಗಳು ಕವಿದಾಗ ಇಲ್ಲಿ ಚೂರುಪಾರು ತುಂತುರು ಮಳೆ ಸುರಿಯಿತು. ಇದೇ ನೆಪದ ಹಿನ್ನೆಲೆಯಲ್ಲಿ ಒಂದಿಷ್ಟು ಬೀಜ ಹುಟ್ಟಿ ಮೇಲಕ್ಕೇಳುವಷ್ಟರಲ್ಲೇ ಮತ್ತೆ ಕಮರಿತು. ಊರು ಊರಿಗೂ ಗೋಶಾಲೆ ತೆರೆದರೂ ದನ ಕರುಗಳ ಹಸಿವನ್ನು ನೀಗಿಸಲು ಸಾಧ್ಯವಾಗದ ಸ್ಥಿತಿ ಇಂದು ನಿರ್ಮಾಣವಾಗಿದೆ. ಸರಕಾರ ಯುದ್ಧೋಪಾದಿಯಲ್ಲಿ ರಾಮದುರ್ಗ ತಾಲೂಕಿನ ಉತ್ತರ ಭಾಗದ ಈ ಹೋಬಳಿಗಳ ಬರಗಾಲದ ತೀವ್ರತೆ ಅವಲೋಕಿಸಿ ವಿಳಂಬವಿಲ್ಲದಂತೆ ಬೆಳೆ ವಿಮೆ ವಿತರಣೆ, ದನ-ಕರುಗಳಿಗೆ ನೀರು ಮತ್ತು ಮೇವು, ಜನರಿಗೆ ಉದ್ಯೋಗಾವಕಾಶ ಸೃಷ್ಟಿಸಬೇಕು ಎಂಬುವುದು ಈ ಭಾಗದ ರೈತರ ಹಾಗೂ ಸಾರ್ವಜನಿಕರ ಒತ್ತಾಸೆಯಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next