Advertisement

ಜಮೀನು ಬಿಟ್ಟುಕೊಟ್ಟರೂ ಪರಿಹಾರ ನೀಡಿಲ್ಲ

01:48 PM Sep 01, 2019 | Team Udayavani |

ಕುಣಿಗಲ್: ಹೇಮಾವತಿ ನಾಲೆ ನಿರ್ಮಾಣಕ್ಕೆ ಜಮೀನು ಬಿಟ್ಟುಕೊಟ್ಟರೂ ಪರಿಹಾರ ನೀಡದ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ರೈತರು ನಾಲೆ ಮುಚ್ಚಿ ರಾಗಿ ಪೈರು ನಾಟಿ ಹಾಕುವ ಮೂಲಕ ಕಾಡುಮತ್ತಿಕೆರೆಯಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

Advertisement

10 ವರ್ಷದ ಹಿಂದೆ ಹೇಮಾವತಿ ನಾಲಾ ಕಾಮಗಾರಿಗೆ ರೈತರಿಂದ ಜಮೀನು ಪಡೆದು ನಾಲೆ ನಿರ್ಮಿಸಲಾಗಿದೆ. ಆದರೆ ಈವರೆಗೂ ಜಮೀನು ಕಳೆದು ಕೊಂಡವರಿಗೆ ನಯಾಪೈಸೆ ಪರಿಹಾರ ಕೊಡದೇ ಸತಾಯಿಸುತ್ತಿರುವುದರಿಂದ ಆಕ್ರೋಶಗೊಂಡ ನೂರಾರು ರೈತರು, ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ ಆನಂದ್‌ಪಟೇಲ್ ಹಾಗೂ ತಾಲೂಕು ಅಧ್ಯಕ್ಷ ಅನಿಲ್ಕುಮಾರ್‌ ನೇತೃತ್ವದಲ್ಲಿ ಗುದ್ದಲಿ, ಪಿಕಾಸಿ ಹಾಗೂ ಮಿನಿ ಟ್ರ್ಯಾಕ್ಟರ್‌ ಬಳಸಿ ನಾಲೆಗೆ ಮಣ್ಣು ತುಂಬಿ ರಾಗಿ ಪೈರು ನೆಟ್ಟು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.

ನಾಲೆ ಮುಚ್ಚುವ ಆಂದೋಲನ: ಆನಂದ್‌ ಪಟೇಲ್ ಮಾತನಾಡಿ, ನಿಯಮಾನು ಸಾರವಾಗಿ ಭೂಸ್ವಾಧೀನ ಮಾಡಿಕೊಳ್ಳದಿರುವುದರಿಂದ ಪರಿಹಾರ ಸಿಗಲು ವಿಳಂಬವಾಗುತ್ತಿದೆ. ಇಂದಿಗೂ ರೈತರ ಹೆಸರಿನಲ್ಲೆ ದಾಖಲೆಗಳು ಇವೆ. ಸ್ವಾಧೀನ ಮಾಡಿಕೊಳ್ಳುವ ಮುನ್ನವೇ ರೈತರ ಜಮೀನಿನಲ್ಲಿ ನಾಲೆ ನಿರ್ಮಿಸಿರು ವುದು ಯಾವ ನ್ಯಾಯ. ನೀರಾವರಿ ಇಲಾಖೆಯ ನೂರಾರು ಕೋಟಿ ಅನುದಾನ ತಂದು ತಾಲೂಕಿನ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ರೈತರಿಗೆ ಪರಿಹಾರ ನೀಡಲು ಹಣ ಇಲ್ಲ. ಆದರೆ ರಸ್ತೆ ಕಾಮಗಾರಿ ನಡೆಸ ಲಾಗುತ್ತಿದೆ. ಶಾಸಕರ ಬೆಂಬಲಿಗರು ಹಣ ಮಾಡಿ ಕೊಳ್ಳಲು ಇಲಾಖೆಯಲ್ಲಿ ಅನುದಾನ ಇದೆ. ಆದರೆ ರೈತರಿಗೆ ಕೊಡಲು ಪರಿಹಾರ ಹಣವಿಲ್ಲ. 15 ದಿನದೊಳ ಗಾಗಿ ರೈತರಿಗೆ ಪರಿಹಾರ ನೀಡಬೇಕು ಇಲ್ಲವಾದರೆ ನಾಲೆ ಮುಚ್ಚುವ ಆಂದೋಲನ ಮುಂದುವರಿಸ ಲಾಗುವುದು ಎಂದು ಎಚ್ಚರಿಸಿದರು.

ತರಾಟೆ: ಸ್ಥಳಕ್ಕೆ ಆಗಮಿಸಿದ ಸಿಪಿಐ ಅಶೋಕ್‌ ಕುಮಾರ್‌, ಪಿಎಸ್‌ಐ ವಿಕಾಸ್‌ಗೌಡ, ಭೂಸ್ವಾಧೀನ ಇಲಾಖೆಯ ಎಸ್‌ಎಲ್ಒ ಸಹಾಯಕ ಕೆಂಪರಾಜು, ಹೇಮಾವತಿ ಹೆಬ್ಬೂರು ವಿಭಾಗದ ಜಿಇ ಸುನೀಲ್, ಎಇ ಸುನೀಲ್ ಅವರನ್ನು ಕರೆಸಿ ರೈತರ ಸಮಸ್ಯೆ ಪರಿಹರಿಸಲು ತಿಳಿಸಿದರು.

ಈ ವೇಳೆ ಭೂಸ್ವಾಧೀನ ಕಚೇರಿ ಅಧಿಕಾರಿಗಳನ್ನು ರೈತರು ತರಾಟೆ ತೆಗೆದು ಕೊಂಡರು. ಜಮೀನನ್ನು ಸ್ವಾಧೀನ ಪಡಿಸಿಕೊಳ್ಳದೆ ಜಮೀನುಗಳಿಗೆ ಅತಿಕ್ರಮ ಪ್ರವೇಶ ಮಾಡಿ ನಾಲೆ ನಿರ್ಮಿಸಲಾಗಿದೆ. ಈಗಲೂ ರೈತರ ಹೆಸರಿನಲ್ಲೇ ಪಹಣಿ ಬರುತ್ತಿದೆ. ನಾಲೆ ಮುಚ್ಚಿ ರಾಗಿ ಬೆಳೆ ಬೆಳೆಯಲು ಮುಂದಾಗಿದ್ದೇವೆ. ಇಲ್ಲಿಗೆ ಏಕೆ ಬಂದಿದ್ದೀರಾ ಎಂದು ಪ್ರಶ್ನಿಸಿದರು.

Advertisement

ಹೊಸ ಭೂಸ್ವಾಧೀನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ನಂತರ ಸ್ಪಷ್ಟ ನಿರ್ದೇಶನ ಇಲ್ಲದೇ ಅಧಿಕಾರಿಗಳು ದಾಖಲಾತಿ ಸಿದ್ಧಪಡಿಸದೆ ವಿಳಂಬವಾಗಿದೆ. ಈಗ ಹೊಸ ಕಾಯ್ದೆ ಪ್ರಕಾರ ನೇರ ಖರೀದಿ ಪ್ರಕ್ರಿಯೆ ಆರಂಭವಾಗಿದೆ. ಶೀಘ್ರ ರೈತರಿಗೆ ಸಿಗಬೇಕಾದ ಪರಿಹಾರ ಕೈ ಸೇರಲಿದೆ ಎಂದು ಎಸ್‌ಎಲ್ಒ ಸಹಾಯಕ ಅಧಿಕಾರಿ ಕೆಂಪರಾಜು ಭರವಸೆ ನೀಡಿದರು. ಭರವಸೆಯಂತೆ ರೈತರಿಗೆ ಪರಿಹಾರ ಸಿಗದೆ ಹೋದರೆ ಕುಣಿಗಲ್ನಿಂದ ಹುಲಿಯೂರುದುರ್ಗ ದವರೆಗೂ ನಾಲೆ ಮುಚ್ಚಿ ರಾಗಿ ನಾಟಿ ಚಳುವಳಿ ಮುಂದುವರಿಯಲಿದೆ ಎಂದು ರೈತರು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next