Advertisement

ಜಿಂದಾಲ್‌ಗೆ ಭೂಮಿ: ಹಗಲು ದರೋಡೆ

04:06 PM Apr 30, 2021 | Team Udayavani |

ಮೈಸೂರು: ಕೋವಿಡ್  ಸಂಕಷ್ಟದ ಪರಿಸ್ಥಿತಿಯಲ್ಲಿರಾಜ್ಯ ಸರ್ಕಾರ ಖಾಸಗಿ ಕಂಪನಿಯೊಂದಕ್ಕೆ 3667ಎಕರೆ ಭೂಮಿಯನ್ನುಪರಭಾರೆ ಮಾಡುತ್ತಿರುವಕ್ರಮ ಖಂಡನೀಯವಾಗಿದ್ದು, ಮುಂದಿನಸಂಪುಟ ಸಭೆಯಲ್ಲಿ ಭೂಮಿಪರಭಾರೆ ಆದೇಶವನ್ನುರದ್ದುಗೊಳಿಸಬೇಕು ಎಂದುವಿಧಾನ ಪರಿಷತ್‌ ಸದಸ್ಯಎಚ್‌. ವಿಶ್ವನಾಥ್‌ ಆಗ್ರಹಿಸಿದರು.

Advertisement

ನಗರದ ಜಿಲ್ಲಾಪರ್ತಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಸಂಡೂರಿನಲ್ಲಿರುವ ಸರ್ಕಾರಒಡೆತನದಲ್ಲಿರುವ ಭೂಮಿಯನ್ನು ಈ ಹಿಂದಿನಸರ್ಕಾರ ಮಾರಾಟ ಮಾಡಲು ಮುಂದಾದಾಗ,ವಿಧಾನ ಸಭೆಯಲ್ಲಿ ಹಾಸಿಗೆ ಹಾಕಿ ಅಹೋ ರಾತ್ರಿಧರಣಿ ನಡೆಸಿದ ಬಿ.ಎಸ್‌.ಯಡಿಯೂರಪ್ಪ ಮತ್ತುತಂಡ ಈಗ್ಯಾಕೆ ಜಿಂದಾಲ್‌ ಕಂಪನಿಗೆ ಭೂಮಿಮಾರಾಟ ಮಾಡಿದ್ದಾರೆ? ಇದರ ಇಂದಿನ ಕಥೆ ಏನುಎಂಬುದನ್ನು ಬಹಿರಂಗ ಪಡಿಸಿ ಎಂದು ಒತ್ತಾಯಿಸಿದರು.

ಒಂದು ಎಕರೆಗೆ 80 ಲಕ್ಷ ರೂ. ಮೌಲ್ಯವಿರುವಾಗ3667.31 ಎಕರೆ ಭೂಮಿಯನ್ನು ಪ್ರತಿ ಎಕರೆಗೆ1.20 ಲಕ್ಷ ರೂ.ನಂತೆ ಕನಿಷ್ಠ ಬೆಲೆಯನ್ನು ನಿಗದಿಪಡಿಸಿ ಕಡಿಮೆ ಬೆಲೆಗೆ ಮಾರಾಟ ಮಾಡಿರುವಹುನ್ನಾರವೇನು? ಕಳೆದ 20 ವರ್ಷಗಳಲ್ಲಿನಗರಾಭಿವೃದ್ಧಿ ಪ್ರಾಧಿಕಾರಗಳು ಬಡವರಿಗೆಒಂದು ನಿವೇಶನ ನೀಡಲು ಸಾಧ್ಯವಾಗಿಲ್ಲ.

ಆದರೆಒಬ್ಬ ಸಬ್‌ ರಿಜಿಸ್ಟರ್‌ ವರದಿ ಆಧಾರವಾಗಿಟ್ಟುಕೊಂಡು ಎಕರೆಗೆ 1 ಲಕ್ಷದ 20 ಸಾವಿರದಂತೆ 3667ಎಕರೆ ಭೂಮಿಯನ್ನು ಪರಭಾರೆ ಮಾಡಲಾಗುತ್ತಿದೆ. ಇದು ಹಗಲು ದರೋಡೆ ಅಲ್ಲದೇ ಮತ್ತೇನುಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next