Advertisement

ಗೋಮಾಳಕೆಗೆ  ಇನ್ನೂ ನಿಗದಿಯಾಗದ ಭೂಮಿ

12:50 PM Nov 25, 2020 | Mithun PG |

ಮುಳಬಾಗಿಲು: ತಾಯಲೂರು ಹೋಬಳಿಯಲ್ಲಿ 66 ಹಳ್ಳಿ, 12 ಸಾವಿರ ಜಾನುವಾರುಗಳಿಗೆ ಕಾಯ್ದಿರಿಸಬೇಕು 3,600 ಎಕರೆ ತಾಲೂಕಿನ ತಾಯಲೂರು ಹೋಬಳಿಯ 66 ಹಳ್ಳಿಗಳ 12 ಸಾವಿರ ಜಾನುವಾರುಗಳಿಗೆ ನಿಯಮಾನುಸಾರ 3,600 ಎಕರೆ ಜಮೀನು ಕಾಯ್ದಿರಿಸಬೇಕಾಗಿದ್ದರೂ ತಾಲೂಕು ಆಡಳಿತ ಇದುವರೆಗೂ ಒಂದೇ ಒಂದು ಎಕರೆ ಕಾಯ್ದಿರಿಸದೇ ಇರುವುದರಿಂದ ಜಾನುವಾರುಗಳ ಪೋಷಣೆಗೆ ಜಮೀನು ಕಾಯ್ದಿರಿಸಬೇಕೆಂಬ ಕೂಗು ದನಗಾಹಿಗಳಿಂದ ಕೇಳಿ ಬರುತ್ತಿದೆ.

Advertisement

ತಾಯಲೂರು ಹೋಬಳಿಯಲ್ಲಿ 8 ಕಂದಾಯ ವೃತ್ತಗಳಿದ್ದು, ತಾಯಲೂರು ಗ್ರಾಮದಲ್ಲಿ ಕುರಿ ಹಾಗೂ ಮೇಕೆಗಳನ್ನು ಹೊರತುಪಡಿಸಿ 1045 ಹಸು ಮತ್ತು ಎಮ್ಮೆಗಳಿದ್ದುಕಾನೂನು ರೀತಿ 100 ಜಾನುವಾರುಗಳಿಗೆ 30 ಎಕರೆ ಜಮೀನು ಕಾಯ್ದಿರಿಸಬೇಕಿದೆ.

ಜಾನುವಾರು ಮೇಯಿಸಲು ಅನಾನುಕೂಲ: ತಾಯಲೂರು ಅಮಾನಿಕೆರೆ ವ್ಯಾಪ್ತಿಯಲ್ಲಿ 60 ಎಕರೆ ಗೋಮಾಳ ಜಮೀನಿದ್ದು, ಪ್ರಸ್ತುತ ಅದನ್ನೂಕೆಲವರು ಸಾಗುವಳಿ ಮಾಡಿಕೊಳ್ಳುತ್ತಿರುವುದರಿಂದ ಒಂದು ಎಕರೆ ಜಮೀನು ಸಹ ಜಾನುವಾರುಗಳಿಗೆಕಾಯ್ದಿರಿಸದೇ ಇರುವುದರಿಂದ ಅನಾನುಕೂಲ ಉಂಟಾಗಿದೆ. ಇರುವ 60 ಎಕರೆ ಪೈಕಿ 30 ಎಕರೆ ಜಮೀನನ್ನು ಜಾನುವಾರುಗಳ ಹುಲ್ಲುಗಾವುಲುಗಾಗಿ ಕಾಯ್ದಿರಿಸಬೇಕೆಂಬುದು ಕುರಿಗಾಹಿಗಳ ಆಗ್ರಹವಾಗಿದೆ.

ಇದನ್ನೂ ಓದಿ:ಮಹದೇಶ್ವರ ಬೆಟ್ಟದಲ್ಲಿಸಿಎಂ ಆಗಮನಕ್ಕೆ ಸಿದ್ಧತೆ

ದೂಲಪಲ್ಲಿ ಕಂದಾಯ ವೃತ್ತ: ದೂಲಪಲ್ಲಿ, ಯಳಚೇಪಲ್ಲಿ, ಟಿ.ಅಗರ, ಕುಪ್ಪಂಪಾಳ್ಯ, ಅಬ್ಬೇನಹಳ್ಳಿ ಭೈರಸಂದ್ರ ಸೇರಿದಂತೆ 6 ಗ್ರಾಮಗಳಿದ್ದು, ದೂಲಪಲ್ಲಿಯಲ್ಲಿ 216 ಜಾನುವಾರುಗಳಿದ್ದು ಕೇವಲ 6 ಎಕರೆ ಗೋಮಾಳವಿದೆ. ಯಳಚೇಪಲ್ಲಿಯಲ್ಲಿ 528 ಜಾನುವಾರುಗಳಿದ್ದು ಕೇವಲ 5.20 ಎಕರೆ ಸರ್ಕಾರಿ ಜಮೀನಿರುತ್ತದೆ. ಟಿ.ಅಗರ 316 ಗೋವುಗಳಿದ್ದು 3 ಎಕರೆ ಮಾತ್ರ ಸರ್ಕಾರಿ ಜಮೀನಿರುತ್ತದೆ.

Advertisement

ಕುಪ್ಪಂಪಾಳ್ಯದಲ್ಲಿ 250 ಜಾನುವಾರುಗಳಿದ್ದು 5.20 ಎಕರೆ ಜಮೀನಿದೆ, ಅಬ್ಬೇನಹಳ್ಳಿಯಲ್ಲಿ 187 ಜಾನುವಾರುಗಳಿದ್ದು 1.20 ಎಕರೆ ಮಾತ್ರ ಗೋಮಾ ಳವಿದೆ. ಭೈರಸಂದ್ರದಲ್ಲಿ 593 ಗೋವುಗಳಿದ್ದು 10.30 ಎಕರೆ ಜಮೀನಿದೆ.

ಒಟ್ಟಾರೆ ಈ ಹಳ್ಳಿಗಳಲ್ಲಿ2090 ಜಾನುವಾರುಗಳಿಗೆ 630 ಎಕರೆ ಜಮೀನು ಕಾಯ್ದಿರಿಸಬೇಕಾಗಿದೆ. ಆದರೆ 33 ಎಕರೆ ಮಾತ್ರ ಸರ್ಕಾರಿ ಜಮೀನಿದ್ದು, ಅದನ್ನೂ ಸಹ ರೈತರು ಅನಧಿಕೃತವಾಗಿ ಸಾಗುವಳಿ ಮಾಡಿ ಕೊಳ್ಳುತ್ತಿರುದರಿಂದ  ಒಂದೇ ಒಂದು ಎಕರೆ ಜಮಿನು ಸಹಕಾಯ್ದಿರಿಸಿಲ್ಲ.

ಮೋತಕಪಲ್ಲಿ ಕಂದಾಯ ವೃತ್ತ: ಮೋತಕಪಲ್ಲಿ, ಮಡಿವಾಳ, ಜೌಗುಪಲ್ಲಿ, ಮೇಲ್ತಾಯಲೂರು, ಕೊಂಡಿಹಳ್ಳಿ, ಬಿ.ಕೊರವೇನೂರು, ಮಿಂಡಹಳ್ಳಿ, ಸೋಮಾರಸನಹಳ್ಳಿ, ಮದ್ದೇರಿ, ಜಂಗಮಹೊಸ ಹಳ್ಳಿ ಸೇರಿದಂತೆ 11 ಹಳ್ಳಿಗಳಲ್ಲಿ 1,398 ಜಾನುವಾರುಗಳಿದ್ದು ಕಾಯ್ದೆಯಂತೆ 420 ಎಕರೆ ಜಮೀನು ಕಾಯ್ದಿರಿಸಬೇಕಾಗಿದೆ. ಆದರೆ ಪ್ರಸ್ತುತ 88.20 ಎಕರೆ ಮಾತ್ರ ಗೋಮಾಳವಿದ್ದು, ಒಂದೇ ಒಂದು ಎಕರೆ ಜಮೀನುಕಾಯ್ದಿರಿಸಿಲ್ಲ. ಕೆ.ಬೈಪಲ್ಲಿ ಕಂದಾಯ ವೃತ್ತ: ಕೆ.ಬೈಪಲ್ಲಿ, ಶಿನಿಗೇನಹಳ್ಳಿ, ಪಾಯಸ್ತನಹಳ್ಳಿ, ಕಸುವುಗಾ ನಹಳ್ಳಿ, ಶೆಟ್ಟಿಕಲ್‌, ರಾಮಚಂದ್ರಾಪುರ ಸೇರಿ ದಂತೆ 6 ಹಳ್ಳಿಗಳಲ್ಲಿ 1,745 ಜಾನುವಾರು ಗಳಿದ್ದು, ಕಾಯ್ದೆಯಂತೆ 520 ಎಕರೆ ಕಾಯ್ದಿರಿ ಸಬೇಕಾಗಿದೆ. ಆದರೆ ಇರುವುದು 156 ಎಕರೆ ಮಾತ್ರ ಗೋಮಾಳವಿದ್ದು, ಅದನ್ನೂ ಸಹಕೆಲ ವರು ಸಾಗುವಳಿ ಮಾಡುತ್ತಿದ್ದು, ಇಲ್ಲಿಯೂ ಒಂದು ಎಕರೆ ಸಹ ಜಾನುವಾರುಗಳ ಹುಲ್ಲುಗಾವುಲಿಗೆಕಾಯ್ದಿರಿಸಿಲ್ಲ. ಜೆ.ಅಗ್ರಹಾರ ಕಂದಾಯ ವೃತ್ತ: ಜೆ. ಅಗ್ರಹಾರ, ಎಂ.ಎನ್‌.ಹಳ್ಳಿ, ಮೋಪರ ಹಳ್ಳಿ, ಪುಟ್ಟೇನಹಳ್ಳಿ, ಪುಲಿಪಾಪೇನಹಳ್ಳಿ, ಯಚ್ಚನಹಳ್ಳಿ, ಕೆ.ಬಿಕ್ಕನಹಳ್ಳಿ, ಬೇವನತ್ತ, ಬಟವಾರಿಹಳ್ಳಿ, ತಿಮ್ಮಾಪುರ, ಕೆ.ಬಿ. ಕೊತ್ತೂರು ಸೇರಿದಂತೆ 11 ಹಳ್ಳಿಗಳಲ್ಲಿ 1930 ಜಾನುವಾರುಗಳಿದ್ದು, ಕಾಯ್ದೆಯಂತೆ 570 ಎಕರೆ ಜಮೀನು ಹುಲ್ಲುಗಾವುಲಿಗೆ ಕಾಯ್ದಿರಿಸಬೇಕಾಗಿದೆ. ಆದರೆ ಪ್ರಸ್ತುತ ಇರುವುದೇ 141 ಎಕರೆ ಗೋಮಾಳ ಮಾತ್ರ. ಇಲ್ಲಿಯೂ ಒಂದೇ ಒಂದು ಎಕರೆ ಜಮೀನು ಜಾನುವಾರುಗಳ ಸಂರಕ್ಷಣೆಗೆ ಕಾಯ್ದಿರಿಸಿಲ್ಲ. ಒಟ್ಟಿನಲ್ಲಿ ಸರ್ಕಾರದ ವಿವಿಧ ಕಲ್ಯಾಣ ಹಾಗೂ ಮೂಲಭೂತ ಸೌಕರ್ಯದ ಯೋಜನೆಗಳಿಗಾಗಿ, ವಸತಿ, ಸ್ಮಶಾನಭೂಮಿಯಂತಹ ಸಾರ್ವಜನಿಕ ಉದ್ದೇಶ ಗಳಿಗೆ ಸರ್ಕಾರಿ ಜಮೀನಿನ ತೀವ್ರ ಕೊರತೆಯಿದ್ದು, ಖಾಸಗಿಯವರಿಂದಲೇ ಸರ್ಕಾರಕ್ಕೆ ಜಮೀನು ಖರೀದಿ ಸುವಂತಹ ಅನಿವಾರ್ಯವಾಗಿರುವ ಕರ್ನಾಟಕ ಭೂ ಕಂದಾಯ ಕಾಯ್ದೆಯಡಿಯಲ್ಲಿ ಜಮೀನು ಮಂಜೂರು ಮಾಡುವ ಸಂದರ್ಭದಲ್ಲಿ ಜಾನುವಾರುಗಳ ಸಂರಕ್ಷಣೆ ಕಾಯ್ದೆಯನ್ನು ಪರಿಪಾಲಿಸಬೇಕಾಗಿದೆ.

ಗುಮ್ಮಕಲ್ಲುಕಂದಾಯ ವೃತ್ತ: 11 ಹಳ್ಳಿ, 2036 ಜಾನುವಾರುಗುಮ್ಮಕಲ್ಲು, ನೆರ್ನಹಳ್ಳಿ, ಪುಲಿಓಬರೆಡ್ಡಿಹಳ್ಳಿ, ರಾಯಲ ಮಾನದಿನ್ನೆ, ಮೈಲಾಪುರ, ಯಡಹಳ್ಳಿ, ಜಿ.ಮಾರಂಡ ಹಳ್ಳಿ, ಸೂರಕುಂಟೆ, ಪಟ್ರಹಳ್ಳಿ, ಮಚ್ಚನಹಳ್ಳಿ, ಮಿಟ್ಟಹಳ್ಳಿ ಸೇರಿದಂತೆ 11 ಹಳ್ಳಿಗಳಲ್ಲಿ2036 ಜಾನುವಾರುಗಳಿದ್ದು, ಕಾಯ್ದೆಯಂತೆ 600 ಎಕರೆ ಜಮೀನು ಕಾಯ್ದಿರಿಸ ಬೇಕಾಗಿದೆ. ಅದರೆ ಇರುವ 141 ಎಕರೆ ಗೋಮಾಳವನ್ನು ಕೆಲವರು ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದಾರೆ. ಅದೇ ರೀತಿ ತಿಮ್ಮರಾವುತನಹಳ್ಳಿ ಕಂದಾಯ ವೃತ್ತದತಿಮ್ಮರಾವುತನಹಳ್ಳಿ, ಚುಕ್ಕನಹಳ್ಳಿ, ಅಪ್ಪಿಕೊಂಡೇನಹಳ್ಳಿ, ಏತೋರಹಳ್ಳಿ, ಕೋಗಿಲೇರು, ಅಪ್ಪೇನಹಳ್ಳಿ, ಕುಂಪಾಂಡಹಳ್ಳಿ,ವೇಗಮಡಗು, ಸನ್ಯಾಸಪಲ್ಲಿ, ಗಡ್ಡಂಚಿ ನ್ನೇಪಲ್ಲಿ, ವಿ.ಕುರುಬರಹಳ್ಳಿ, ಕರವಿರೆಡ್ಡಿಹಳ್ಳಿ ಸೇರಿದಂತೆ 12 ಗ್ರಾಮಗಳಲ್ಲಿ ಸುಮಾರು 2,373 ಜಾನುವಾರು ಗಳಿದ್ದು ಸಂರಕ್ಷಣೆ ಹೇಗೆ ಎಂಬ ಪ್ರಶ್ನೆ ಎದುರಾಗಿದೆ.

ಎಂ.ನಾಗರಾಜಯ್ಯ

ಮುಳಬಾಗಿಲು ತಾಲೂಕಿನ ಸರ್ಕಾರಿಜಮೀನುಗಳಲ್ಲಿ ಹಲವಾರು ವರ್ಷಗಳಿಂದ ಕೃಷಿ ಚಟುವಟಿಕೆ ಮಾಡುತ್ತಿರುವ ರೈತರು ಜಮೀನು ಮಂಜೂರಾತಿಗಾಗಿ ಅಕ್ರಮ ಸಕ್ರಮ ಯೋಜನೆಯಡಿಈಗಾಗಲೇ ಅರ್ಜಿ ಸಲ್ಲಿಸಿದ್ದು, ಅರ್ಜಿಗಳನ್ನು ವಿಲೇವಾರಿ ಮಾಡಿ ಜಮೀನು  ಮಂಜೂರು ಮಾಡುವಾಗ ಕುರಿತು ಪರಿಶೀಲಿಸಿ ಹೈನುಗಾರಿಕೆಗೆ ಪ್ರೋತ್ಸಾಹ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಎಚ್‌.ನಾಗೇಶ್‌, ಅಬಕಾರಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next