Advertisement
ಈ ಹಿಂದೆ ರೋಹಿಣಿ ಅವರು ನಾಲ್ಕು ಆದೇಶಗಳನ್ನು ಮಾಡಿದ್ದಾರೆ. ಆ ಆದೇಶದ ಪ್ರತಿಗಳನ್ನು ಮನವಿ ಪತ್ರದ ಜೊತೆ ವಿಶ್ವನಾಥ್ ಡಿಸಿಯವರಿಗೆ ಸಲ್ಲಿಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ನಾಲ್ಕು ಪ್ರಕರಣಗಳು ಮಾತ್ರವಲ್ಲ ಇಂತಹ ಹಲವು ಪ್ರಕರಣಗಳಿವೆ. ಸುಪ್ರೀಂಕೋರ್ಟ್ ಆದೇಶ ಇದೆ. ಬಪರ್ ಜೋನ್ ಬಗ್ಗೆ ಇಲ್ಲಿ ಯಾವುದೇ ಮನೆ, ಕೈಗಾರಿಕೆ ಬರುವಂತಿಲ್ಲ. ಇಲ್ಲಿ ಬಫರ್ ಜೋನ್ ನಲ್ಲಿ ಅಕ್ರಮ ನಡೆಸಲಾಗುತ್ತಿದೆ. ಇದರ ಬಗ್ಗೆ ನಿಗದಿತ ಅವಧಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ವಿಶ್ವನಾಥ್ ಮನವಿ ಮಾಡಿದ್ದಾರೆ.
ರೋಹಿಣಿ ಸಿಂಧೂರಿಯನ್ನು ವಿಶೇಷಧಿಕಾರಿಯಾಗಿ ನೇಮಿಸಲು ಮನವಿ ಮಾಡಿದ್ದಾರೆ. ಚಾಮುಂಡಿಬೆಟ್ಟದ ಸುತ್ತ ಮುತ್ತ ಸಹಾ ಒತ್ತುವರಿಯಾಗಿದೆ. 6 ತಿಂಗಳ ಕಾಲ ರೋಹಿಣಿ ಸಿಂಧೂರಿ ಅವರನ್ನು ನೇಮಿಸಲು ಎಚ್ ವಿಶ್ವನಾಥ್ ಒತ್ತಾಯ ಮಾಡಿದ್ದಾರೆ. ಶನಿವಾರ ಅಥವಾ ಸೋಮವಾರ ಸಿಎಂ ಅವರನ್ನು ಭೇಟಿ ಮಾಡಿ ಮನವಿ ಮಾಡುವುದಾಗಿ ಅವರು ತಿಳಿಸಿದರು, ಹೆದರಿಕೆ ಯಾಕೆ ತನಿಖೆ ಮಾಡಲಿ, ತನಿಖೆಯಾಗಲು ಬಿಡಿ. ನನ್ನ ಸ್ನೇಹಿತರಿಗೂ ಮನವಿ ಮಾಡುತ್ತೇನೆ. ನಾನು ಮತ್ತೆ ಅವರನ್ನು ಜಿಲ್ಲಾಧಿಕಾರಿ ಮಾಡಿ ಅಂತಾ ಹೇಳುವುದಿಲ್ಲ. ನಾನು ಸಾ ರಾ ಮಹೇಶ್ ಅವರ ಪ್ರತಿಭಟನೆಯನ್ನು ಸ್ವಾಗತಿಸುತ್ತೇನೆ. ಸಾ ರಾ ಕಲ್ಯಾಣಮಂಟಪದ ಬಗ್ಗೆ ದಾಖಲೆ ಕೊಡಲಿ ಎಂದು ಮೈಸೂರಿನಲ್ಲಿ ಎಂ ಎಲ್ ಸಿ ಹೆಚ್ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.