Advertisement

ಗುಂತಕಲ್‌ ಕ್ಯಾಂಪ್  ನಿವಾಸಿಗಳ ದಶಕಗಳ ಕನಸನ್ನು ಸರಕಾರ ನನಸು ಮಾಡಿದೆ: ಶಾಸಕ ದಡೇಸೂಗೂರು

07:05 PM Jan 29, 2022 | Team Udayavani |

ಗಂಗಾವತಿ: ಶ್ರೀರಾಮನಗರ ಗ್ರಾ.ಪಂ.ನ ಗುಂತಕಲ್ ಕ್ಯಾಂಪಿನ ನಿವಾಸಿಗಳ ದಶಕದ ಕನಸನ್ನು ಬಿಜೆಪಿ ಸರಕಾರ ನನಸು ಮಾಡಿದೆ ಎಂದು ಶಾಸಕ ದಡೇಸೂಗೂರು ಬಸವರಾಜ ಹೇಳಿದರು.

Advertisement

ಅವರು ಶ್ರೀರಾಮನಗರದಲ್ಲಿ ಗುಂತಕಲ್‌ ಕ್ಯಾಂಪಿನ  ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು,13 ವರ್ಷಗಳ ಹಿಂದೆ ಶ್ರೀರಾಮನಗರದ ಕಾಲುವೆ ಮೇಲೆ ಹಾಗೂ ರಸ್ತೆ ಬದಿಯಲ್ಲಿ ವಾಸ ಮಾಡುತ್ತಿದ್ದ 246 ಕುಟುಂಬಗಳಿಗೆ ಕೋಟಯ್ಯಕ್ಯಾಂಪಿ ರಸ್ತೆಯಲ್ಲಿ 4.30 ಗುಂಟೆ ಖಾಸಗಿ ಭೂಮಿ  ಖರೀದಿಸಿ ನಿವೇಶನ ರಚಿಸಿ ವಿತರಣೆಗೆ  ಮಾಡಬೇಕಿತ್ತು. ಕೆಲ ಕಾರಣಗಳಿಂದ ಹಕ್ಕು ಪತ್ರ ವಿತರಣೆ ನೆನಗುದಿಗೆ ಬಿದ್ದತ್ತು. ಸದ್ಯ 60 ನಿವೇಶನಗಳ ಹಕ್ಕು ಪತ್ರ ವಿತರಣೆ ಮಾಡಲಾಗಿದೆ. ಶೀಘ್ರವೇ ಉಳಿದ ಹಕ್ಕು ಪತ್ರ ವಿತರಿಸಿ ಈ ವಾರ್ಡಿನಲ್ಲಿ ರಸ್ತೆ, ಕುಡಿಯುವ ನೀರು, ಬೀದಿ ದೀಪ ಸೇರಿ ಅಗತ್ಯ ಸೌಕರ್ಯ ಕಲ್ಪಿಸಲಾಗುತ್ತದೆ. ಅಭಿವೃದ್ದಿ ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ಯಾರು ಸಹ ರಾಜಕೀಯ ಬೆರೆಸಬಾರದೆಂದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ.ಉಪಾಧ್ಯಕ್ಷ ರೆಡ್ಡಿ ವೀರರಾಜು, ಇಒ ಡಾ|ಮೋಹನ್, ಗ್ರಾ.ಪಂ.ಸದಸ್ಯ ಮುಳ್ಳಪೂಡಿ ಶ್ರೀನಿವಾಸ, ಒ.ರಾಮಕೃಷ್ಣ, ಸುಂಕಣ್ಣ, ಸುನೀತಾ, ಬಿಜೆಪಿ ಪಾಪರಾವ್,ದುರ್ಗಾರಾವ್, ಕರಟೂರಿ ಶ್ರೀನಿವಾಸ, ಪಿಡಿಒ ವತ್ಸಲಾ ಸೇರಿ ಅನೇಕರಿದ್ದರು.

ಯೋಜನೆ ರೂಪಿಸಿ ತವರನ್ನು ಮರೆತಿದ್ದಾರೆ:

Advertisement

ಕಳೆದ 13 ವರ್ಷಗಳ ಹಿಂದೆ ಗುಂತಕಲ್ ಕ್ಯಾಂಪ್ ನಿರ್ಮಿಸಿ ನಿವೇಶನ ರಹಿತರಿಗೆ ನಿವೇಶನ ನೀಡುವ ಪ್ರಕ್ರಿಯೆ ಮಾಜಿ ಸಚಿವ ಶಿವರಾಜ್ ತಂಗಡಗಿ ಮಾಡಿದ್ದರು. ಅಂದಿನ ಗ್ರಾ.ಪಂ.ಸದಸ್ಯರಾಗಿದ್ದ ವೆಂಕಟಕೃಷ್ಣ(ನಾನಿ) ಸತತವಾಗಿ ಬೆಂಗಳೂರಿಗೆ ಸುತ್ತಾಡಿ ಹಕ್ಕುಪತ್ರ ಬರಲು ಕಾರಣರಾಗಿದ್ದಾರೆ. ರಾಜಕೀಯ ಏನೆ ಇರಲಿ ಗುಂತಕಲ್ ಕ್ಯಾಂಪ್ ನಿವಾಸಿಗಳಿಗೆ ಹಕ್ಕುಪತ್ರ ದೊರಕಲು ಕಾರಣರಾದವರನ್ನು ಸ್ಮರಿಸಬೇಕಿದ್ದು ಗ್ರಾ.ಪಂ. ಆಡಳಿತ ಮಂಡಳಿ ಹಾಗೂ ಪಿಡಿಒ ಅವರು ನಿರ್ಲಕ್ಷ್ಯ  ಮಾಡಿದ್ದು ಖಂಡನೀಯ ಎಂದು ಗ್ರಾಪಂ ಸದಸ್ಯ ಸುಂಕಪ್ಪ ಅಧಿಕಾರಿಗಳ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next