Advertisement

ಮೋದಿಯುಗ ಇರುವವರೆಗೆ ಜಮೀನು ವಶ ಅಸಾಧ್ಯ: ಶಾ

12:38 AM Dec 26, 2020 | mahesh |

ಹೊಸದಿಲ್ಲಿ/ವಾಷಿಂಗ್ಟನ್‌: ನರೇಂದ್ರ ಮೋದಿ ಪ್ರಧಾನಿಯಾಗಿ ಇರುವವರೆಗೆ ಯಾವುದೇ ಕಾರ್ಪೊರೇಟ್‌ ಸಂಸ್ಥೆ ರೈತರ ಜಮೀನು ಕಿತ್ತುಕೊಳ್ಳಲು ಅವಕಾಶವೇ ಕೊಡಲಾಗುವುದಿಲ್ಲ ಎಂದು ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ರಾಜಧಾನಿ ಹೊಸದಿಲ್ಲಿಯ ಹೊರ ಭಾಗದಲ್ಲಿರುವ ಕೃಷ್ಣಗಡ ಎಂಬ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ರೈತರ ಸಮಾವೇಶ ದಲ್ಲಿ ಅವರು ಮಾತನಾಡಿದರು. ಮೂರು ಕೃಷಿ ಕಾಯ್ದೆಗಳು ರೈತ ಪರವಾ ಗಿಯೇ ಇವೆ. ರೈತ ಸಂಘಟನೆಗಳು ಅದ ರಲ್ಲಿ ಯಾವುದೇ ಅಂಶ ಕೃಷಿಕರ ಹಿತಾಸಕ್ತಿಗೆ ವಿರುದ್ಧವಾಗಿ ಇದ್ದರೆ ಅದರ ಬಗ್ಗೆ ಮೋದಿ ಸರಕಾರ ಮುಕ್ತ ಮನಸ್ಸಿ ನಿಂದ ಮಾತುಕತೆಗೆ ಸಿದ್ಧವಿದೆ ಎಂದರು. ಕಾಂಗ್ರೆಸ್‌ ಸೇರಿದಂತೆ ಎಲ್ಲಾ ಪ್ರತಿಪಕ್ಷಗಳು ಕಾಯ್ದೆಗಳ ಬಗ್ಗೆ ಸುಳ್ಳು ಮಾಹಿತಿ ನೀಡು ತ್ತಿವೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದನ್ನು ಮುಂದುವರಿಸಲಾಗು ತ್ತದೆ ಎಂದರು. ರೈತರ ಅಭಿವೃದ್ಧಿಯೇ ಮೋದಿ ಸರಕಾರದ ಪ್ರಧಾನ ಆದ್ಯತೆ ಎಂದರು. ಅಮಿತ್‌ ಶಾ ಅವರು ಪ್ರಧಾನಿ  ಯವರು ಮಾಡಿದ ಭಾಷಣವನ್ನೂ ಇದೇ ಗ್ರಾಮದಲ್ಲಿ ವೀಕ್ಷಿಸಿದರು.

Advertisement

ನಡೆಯಲಿ 2 ವರ್ಷ ಪ್ರಯೋಗ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ದ್ವಾರ ಕಾ  ದಲ್ಲಿ ರೈತರ ಮತ್ತೂಂದು ಕಾರ್ಯ   ಕ್ರಮದಲ್ಲಿ ಮಾತನಾಡಿ, ಎರಡು ವರ್ಷ  ಗಳ ಕಾಲ ಮೂರು ರೈತ ಕಾಯ್ದೆಗಳ ಪ್ರ ಯೋಗ ನಡೆಯಲಿ. ಅದರಲ್ಲಿ ಏನೇನೂ ಅನು ಕೂಲವೆಂದು ಕಂಡು  ಬಂದರೆ ತಿದ್ದುಪಡಿ ಮಾಡಬಹುದು ಎಂದಿ  ದ್ದಾರೆ. ರೈತರ ಬಗ್ಗೆ ಅಪಾರ ಗೌರವ ಇದೆ ಎಂದ ಅವರು, ಪ್ರತಿಭಟನೆ ನಡೆಸುತ್ತಿರುವವರೂ ನಮ್ಮವರೇ ಎಂದರು. ಕೆಲವರು ರೈತರನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸುತ್ತಿ ದ್ದಾರೆ. ನಾನೂ ರೈತನ ಮಗನೇ ಮತ್ತು ಕೃಷಿ ಜಮೀನಿನಲ್ಲಿ ಕೆಲಸ ಮಾಡಿದ್ದೇನೆ ಎಂದು ಸಿಂಗ್‌ ಹೇಳಿದ್ದಾರೆ. ಬೆಳೆಗಳಿಗೆ ನೀಡಲಾ  ಗುವ ಕನಿಷ್ಠ ಸಾಮಾನ್ಯ ಬೆಲೆ ಮುಂದು ವರಿಯಲಿದೆ ಎಂದರು.

ಅಮೆರಿಕ ಸಂಸದರ ಪತ್ರ: ರೈತರ ಪ್ರತಿ  ಭಟನೆ ವಿಚಾರವನ್ನು ಭಾರತದ ವಿದೇ  ಶಾಂಗ ಸಚಿವರ ಜತೆಗೆ ಪ್ರಸ್ತಾಪಿಸಿ ಚರ್ಚೆ ನಡೆಸಬೇಕು ಎಂದು ಅಮೆರಿಕದ ಏಳು ಮಂದಿ ಪ್ರಭಾವಶಾಲಿ ಸಂಸದರು ಒತ್ತಾ ಯಿಸಿ  ದ್ದಾರೆ. ಈ ಬಗ್ಗೆ ಭಾರತೀಯ ಅಮೆ  ರಿಕನ್‌ ಸಂಸದೆ ಪ್ರಮೀಳಾ ಜಯಪಾಲ್‌ ಸೇರಿದಂತೆ ಏಳು ಮಂದಿ ಅಮೆರಿಕದ ವಿದೇಶಾಂಗ ಸಚಿವ ಮೈಕ್‌ ಪೊಂಪೊÂà ಅವರಿಗೆ ಪತ್ರ ಬರೆದಿದ್ದಾರೆ.

ಉಚಿತ ಪಾನಿಪುರಿ ವಿತರಣೆ
ಹರ್ಯಾಣದ ಸಿರ್ಸಾದ ಸುರೇಂದ್ರ ಕಾಂಬೋಜ್‌ ಮತ್ತು ಅವರ ಸ್ನೇಹಿತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿ ರೈತರಿಗೆ ಉಚಿತವಾಗಿ ಪಾನಿಪುರಿ ವಿತರಿಸಿದ್ದಾರೆ. ಅದಕ್ಕೂ ಒಂದು ಕಾರಣವಿದೆ. ಪ್ರತಿಭಟನಾ ಸ್ಥಳದಲ್ಲಿ ಪಾನಿಪುರಿ ಮಾರುತ್ತಿದ್ದ ವ್ಯಕ್ತಿಯ ಸುತ್ತ ಬಾಲಕ ಓಡಾಡುತ್ತಿದ್ದ. ಅದನ್ನು ಕಾಂಬೋಜ್‌ ನೋಡಿದರು. ಬಾಲಕನನ್ನು ವಿಚಾರಿಸಿದಾಗ ಪಾನಿಪುರಿ ಬೇಕು ಎಂದು ಕೇಳಿದ. ಅದನ್ನು ಖರೀದಿಸಲು ಆತನ ಬಳಿ ಹಣವಿಲ್ಲ ಎಂದೂ ಹೇಳಿದ. ಹೀಗಾಗಿ, ಅವರು ತಮ್ಮ ಸ್ನೇಹಿತರ ಜತೆಗೂಡಿ ರೈನಾ ಎಂಬಲ್ಲಿದ್ದ ಪಾನಿಪುರಿ ಮಾರಾಟಗಾರರನ್ನು ಕರೆಯಿಸಿಕೊಂಡು ಸ್ಥಳದಲ್ಲಿದ್ದ ಎಲ್ಲರಿಗೂ ಅದನ್ನು ಉಚಿತವಾಗಿ ವಿತರಿಸಿದರು.

ರೈತ ಕಾಯ್ದೆಗಳ ಬಗ್ಗೆ ತಪ್ಪು ಮಾಹಿತಿ ನೀಡುವವರ ಜಾಲಕ್ಕೆ ಬಲಿಯಾಗಬೇಡಿ. ಅಂಥವರಿಗೆ ಅಧಿಕಾರ ಪಡೆ ಯುವುದೇ ಪ್ರಧಾನ ಉದ್ದೇಶ. ಪಶ್ಚಿಮ ಬಂಗಾಳದಲ್ಲೇಕೆ ಪಿಎಂ-ಕಿಸಾನ್‌ ಯೋಜನೆ ಜಾರಿಯಾಗಿಲ್ಲ?
ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next