Advertisement

ಭೂಮಿ ಮಂಜೂರು ಪರಮಾಧಿಕಾರ ಡಿಸಿಗೆ

07:42 PM Jul 09, 2021 | Team Udayavani |

ಶಿರಸಿ: ಹಂಗಾಮಿ ಲಾಗಣಿಗೆ ನೀಡಲಾದ ಜಮೀನು ಖಾಯಂ ನಾತೆಯಿಂದ ಮಂಜೂರಿ ಪಡೆಯುವ ಕಾನೂನು ಮತ್ತು ನಿಯಮ ಇಂದಿಗೂ ಊರ್ಜಿತವಿದ್ದು, ಜಿಲ್ಲೆಯಲ್ಲಿ ವ್ಯವಸಾಯ ಸಾಗುವಳಿಯ ಹಂಗಾಮಿ ಲಾಗಣಿ ಗುತ್ತಿಗೆ ಖಾಯಂ ಮಂಜೂರಿ ಮಾಡುವ ಅಧಿಕಾರ ಜಿಲ್ಲಾಧಿಕಾರಿಗೆ ನೀಡಿದ್ದಾಗ್ಯೂ ಅರಣ್ಯ ಅಧಿಕಾರಿಗಳ ತಕರಾರಿನಿಂದ ಕಾಯಂ ಭೂಮಿಯ ಹಕ್ಕು ಪತ್ರದಿಂದ ಹಂಗಾಮಿ ಲಾಗಣಿದಾರರಿಗೆ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.

Advertisement

ಅರಣ್ಯ ಇಲಾಖೆ ಫೋಕಸ್‌- 3ಕ್ಕೆ ಸಂಬಂಧಿಸಿ ಕಾಯಂ ಮಂಜೂರಿಗೆ ಸರಕಾರದ ಆದೇಶ ಇದ್ದಾಗಲೂ ಅರಣ್ಯ ಅಧಿಕಾರಿಗಳ ಹಸ್ತಕ್ಷೇಪದ ಕುರಿತು ಸರಕಾರದ ಆದೇಶ ಪತ್ರ ಪ್ರದರ್ಶಿಸಿ ಮಾತನಾಡಿದರು.

ಅರಣ್ಯ ಸಂರಕ್ಷಣಾ ಕಾಯಿದೆ ಪೂರ್ವದಲ್ಲಿ ಜಿಲ್ಲಾಡಳಿತವು ಜಿಲ್ಲೆಯಲ್ಲಿ 6156 ಕುಟುಂಬಗಳಿಗೆ ವ್ಯವಸಾಯ ಉದ್ದೇಶಕ್ಕಾಗಿ 19,529.24 ಸಾವಿರ ಎಕರೆ ಪ್ರದೇಶವನ್ನು ಹಂಗಾಮಿ ಲಾಗಣಿ ನಾತೆಯಿಂದ ಕೃಷಿ ಕುಟುಂಬಗಳಿಗೆ ಹಸ್ತಾಂತರಿಸಲಾಗಿತ್ತು. ಹಂಗಾಮಿ ಲಾಗಣಿ ವ್ಯವಸಾಯ ಭೂಮಿಯನ್ನು ಕರ್ನಾಟಕ ಭೂ ಮಂಜೂರಾತಿ ನಿಯಮದಡಿ ಕಾಯಂಗೊಳಿಸಲು ಜಿಲ್ಲಾಧಿಕಾರಿಗೆ ಅವಕಾಶ ನೀಡಿದ್ದಾಗ್ಯೂ, ವೇದಿಕೆಗೆ ದೊರಕಿರುವ ಅಂಕೆ-ಸಂಖ್ಯೆ ಪ್ರಕಾರ ಕೇವಲ 2029 ಪ್ರಕರಣಗಳಿಗೆ ಮಾತ್ರ ಕಾಯಂ ಮಂಜೂರಿ ಆದೇಶ ನೀಡಿ ಅಂತಹ ಸಾಗುವಳಿದಾರರ ಹೆಸರನ್ನು ಪಹಣಿ ಪತ್ರಿಕೆಯಲ್ಲಿ ಕಾಯಂ ಲಾಗಣಿದಾರರು ಎಂದು ದಾಖಲಾಗಲ್ಪಟ್ಟಿದೆ. ಇನ್ನುಳಿದ ಹಂಗಾಮಿ ಸಾಗುವಳಿದಾರರು ಕಾಯಂ ಸಾಗುವಳಿಯ ಭೂಮಿ ಹಕ್ಕಿನ ಪ್ರಕ್ರಿಯೆಗೆ ಅರಣ್ಯ ಇಲಾಖೆಯ ಹಸ್ತಕ್ಷೇಪ ಹಾಗೂ ಕಾನೂನು ಬಾಹಿರ ತಕರಾರುಗಳಿಂದ ವಂಚಿತರಾಗಿದ್ದಾರೆ ಎಂದು ಅವರು ಆಪಾದಿಸಿದರು.

ಹಂಗಾಮಿ ಲಾಗಣಿದಾರರಿಗೆ ಕಾಯಂ ಭೂಮಿ ಮಂಜೂರಿ ಹಕ್ಕು ನೀಡುವ ಅಂತಿಮ ಅಧಿಕಾರ ಜಿಲ್ಲಾಧಿಕಾರಿಗಳಿಗೆ. ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿ, 1969 ನಿಯಮ 23 ರನ್ವಯ ಖಾಯಂಗೊಳಿಸುವಿಕೆ, ಹಂಗಾಮಿ ಲಾಗಣಿದಾರರಿಂದ ಎಲ್ಲ ಬಾಕಿ ಗುತ್ತಿಗೆ ಹಣ, ಭೂ ಕಂದಾಯ ಹಾಗೂ ಇತರೆ ಬಾಕಿಗಳ ವಸೂಲಿ, ಖಾಯಂ ಸಾಗುವಳಿ ಚೀಟಿ ನೀಡಿದ ದಿನಾಂಕದಿಂದ ಮಂಜೂರಾದ ಭೂಮಿಯನ್ನು 15 ವರ್ಷ ಪರಭಾರೆಗೆ ಅವಕಾಶವಿಲ್ಲ, ಹಂಗಾಮಿ ಸಾಗುವಳಿದಾರರು ಶರ್ತು ಉಲ್ಲಂಘಿಸಿ ಸಾಗುವಳಿ ಮಾಡುತ್ತಿದ್ದಾರೆ ಎಂಬ ನಿಯಮ ಸಡಿಲಿಸಿ ಸಂದರ್ಭಾನುಸಾರ ಹಂಗಾಮಿ ಲಾಗಣಿ ಕಾಯಂ ಮಾಡುವ ಪರಮಾಧಿಕಾರ ಜಿಲ್ಲಾಧಿಕಾರಿಗಳಿಗೆ ಸರಕಾರ ನೀಡಿದೆ ಎಂದೂ ಪ್ರಸ್ತಾಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next