ಜೈಪುರ: ಪಾಕಿಸ್ಥಾನದಿಂದ ಭಾರತಕ್ಕೆ ವಲಸೆ ಬಂದು ರಾಜಸ್ಥಾನದಲ್ಲಿ ನೆಲೆಸಿರುವ ಹಿಂದೂ ಸಮುದಾಯಗಳಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಜೈಸಲ್ಮೇರ್ ಜಿಲ್ಲೆಯಲ್ಲಿ 24 ಎಕ್ರೆಗೂ ಅಧಿಕ ಭೂಮಿಯನ್ನು ಮಂಜೂರುಗೊಳಿಸುವುದಾಗಿ ಜೈಸಲ್ಮೇರ್ ಜಿಲ್ಲಾಧಿಕಾರಿ ಬುಧವಾರ ಘೋಷಿಸಿದ್ದಾರೆ. ಜಿಲ್ಲೆಯ ಅಮರಸಾಗರ ಸರಕಾರಿ ಭೂಮಿ ಅತಿಕ್ರಮಿಸಿದ್ದ ವಲಸಿಗರ ಹಲವು ನಿವಾಸಗಳನ್ನು ನೆಲಸಮಗೊ ಳಿಸಿದ ಬಳಿಕ ಜಿಲ್ಲೆಯಲ್ಲಿ ತೀವ್ರ ಪ್ರತಿಭಟನೆಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಅಂಥ ವಲಸಿಗ ಹಿಂದೂಗಳಿಗಾಗಿ ಖಾಸ್ರಾದಲ್ಲಿರುವ 24 ಎಕ್ರೆಗೂ ಹೆಚ್ಚು ಭೂಮಿಯನ್ನು ಮಂಜೂರುಗೊಳಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಟೀನಾ ದಬಿ ಹೇಳಿದ್ದಾರೆ.
Advertisement