ನವದೆಹಲಿ: ರೈಲ್ವೇ ಇಲಾಖೆಯಲ್ಲಿ ಉದ್ಯೋಗಕ್ಕಾಗಿ ಜಮೀನು ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರದ ಡಿಸಿಎಂ ತೇಜಸ್ವಿ ಯಾದವ್ ಅವರು ಶನಿವಾರ ನವದೆಹಲಿಯಲ್ಲಿ ಸಿಬಿಐ ಪ್ರಧಾನ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.
Advertisement
ಅದಕ್ಕೂ ಮುನ್ನ ಮಾತನಾಡಿದ ಅವರು ಈ ವಿಚಾರದಲ್ಲಿ ತನಿಖೆಯನ್ನು ಸಮರ್ಥವಾಗಿ ಎದುರಿಸಲು ಕುಟುಂಬ ನಿರ್ಧರಿಸಿದೆ ಎಂದರು. ಈ ಪ್ರಕರಣದಲ್ಲಿ ತೇಜಸ್ವಿ ಅವರನ್ನು ಬಂಧಿಸುವುದಿಲ್ಲವೆಂದು ಇತ್ತೀಚೆಗೆ ದೆಹಲಿ ಹೈಕೋರ್ಟ್‌ಗೆ ಸಿಬಿಐ ಭರವಸೆ ನೀಡಿತ್ತು. ಇದೇ ವೇಳೆ, ರಾಜ್ಯಸಭಾ ಸದಸ್ಯೆ ಮತ್ತು ಲಾಲು ಯಾದವ್ ಪುತ್ರಿ ಮಿಸ್ಸಾ ಭಾರ್ತಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿತು.