Advertisement

ಚಾಣಕ್ಯ ವಿವಿಗೆ ಜಮೀನು: ದೊಡ್ಡ ಹಗರಣ

01:57 PM Sep 23, 2021 | Team Udayavani |

ಬೆಂಗಳೂರು: ಚಾಣಕ್ಯ ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರದ ವತಿಯಿಂದ ಅರ್ಹತೆ ಹಾಗೂ ಆನುಭವ ಇಲ್ಲದ ಸೆಸ್‌ ಎಂಬ ಸಂಸ್ಥೆಗೆ ಕಡಿಮೆ ದರದಲ್ಲಿ 116.16 ಎಕರೆ ಜಮೀನು ನೀಡಿದ್ದು ಸರ್ಕಾರ ಆ ತೀರ್ಮಾನ ಕೈ
ಬಿಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದ ರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ್‌ ಒತ್ತಾ
ಯಿಸಿದ್ದಾರೆ.

Advertisement

ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಏರೋಸ್ಪೇಸ್‌ ಹಾಗೂ
ಡಿಫೆನ್ಸ್‌ ಪಾರ್ಕ್‌ಗಾಗಿ ರೈತರಿಂದ ಸ್ವಾಧೀನಪಡಿಸಿಕೊಂಡಿರುವ ಜಮೀನು ಆರ್‌ ಎಸ್‌ಎಸ್‌ಗೆ ಸೇರಿದ ಸಂಸ್ಥೆಗೆ ಬಳುವಳಿಯಾಗಿ ಕೇವಲ 50 ಕೋಟಿ ರೂ.ಗೆ ಕೊಡಲು ವಿಧೇಯಕ ಚರ್ಚೆ ಇಲ್ಲದೆ ಅಂಗೀಕಾರ
ಮಾಡಿಕೊಳ್ಳಲಾಗಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.

ರೈತರಿಂದಲೇ ಪ್ರತಿ ಎಕರೆಗೆ 1.50 ಕೋಟಿ ರೂ. ಪರಿಹಾರ ನೀಡಿ ವಶಕ್ಕೆ ಪಡೆಯಲಾಗಿದೆ. ಕೆಐಎಡಿಬಿ ಅಭಿವೃದ್ಧಿಪಡಿಸಿದ ನಂತರ ಪ್ರತಿ ಎಕರೆ 10 ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುತ್ತದೆ. ಹೀಗಾಗಿ 400 ಕೋಟಿ ರೂ.
ಮೊತ್ತದ ಭೂಮಿ 50 ಕೋಟಿ ರೂ.ಗೆ ಕೊಡುವ ಮೂಲಕ ಸರ್ಕಾರಕ್ಕೆ ನಷ್ಟ ಮಾಡಲಾಗಿದೆ
ಎಂದು ಆರೋಪಿಸಿದರು. ಸಿದ್ದರಾಮಯ್ಯ ಮಾತನಾಡಿ, ಚಾಣಕ್ಯ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ
ಸೆಂಟರ್‌ ಫಾರ್‌ ಎಜ್ಯುಕೇಷನ್‌ ಅಂಡ್‌ ಸೋಷಿಯಲ್‌ ಸ್ಟಡೀಸ್‌ ಸಂಸ್ಥೆಗೆ (ಸೆಸ್‌) ಕಡಿಮೆ ದರದಲ್ಲಿ ನೂರಾರು ಎಕರೆ ಭೂಮಿ ನೀಡುವ ತೀರ್ಮಾನದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಇರುವ ನಿಯಮಾವಳಿ ಪರಿಶೀಲನೆ ಮಾಡಿದಾಗ ಈ ಸಂಸ್ಥೆಗೆ ನೀಡಿದ ಪರವಾನಗಿಯಲ್ಲಿ ಅದೆಲ್ಲದರ ಉಲ್ಲಂಘನೆ
ಆಗಿದೆ. ಒಂದು ಸಂಸ್ಥೆಯೇ ಇಲ್ಲ. ಜಮೀನು ಕಡಿಮೆ ಬೆಲೆಗೆ ನೀಡುತ್ತಾರೆ ಎಂದು ಪಡೆಯುವುದು ಸರಿಯಲ್ಲ ಎಂದು
ತಿಳಿಸಿದರು.

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌ ಪಾಟೀಲ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಮಾಜಿ ಸಚಿವರಾದ ಎಚ್‌.ಕೆ.ಪಾಟೀಲ್‌, ರಮೇಶ್‌ ಕುಮಾರ್‌, ಕೆ.ಜೆ.ಜಾರ್ಜ್‌, ಕೃಷ್ಣ ಬೈರೇಗೌಡ
ಉಪಸ್ಥಿತರಿದ್ದರು.

ಕಡಿಮೆ ಬೆಲೆಗೆ ಜಮೀನು ಸರಿಯಲ್ಲ: ಡಿಕೆಶಿ
ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಇರುವ ನಿಯಮಾವಳಿ ಪರಿಶೀಲನೆ ಮಾಡಿದಾಗ ಈ ಸಂಸ್ಥೆಗೆ ನೀಡಿದ ಪರವಾನಗಿಯಲ್ಲಿ ಉಲ್ಲಂಘನೆ ಆಗಿದೆ. ಒಂದು ಸಂಸ್ಥೆಯೇ ಇಲ್ಲ. ಜಮೀನು ಕಡಿಮೆ ಬೆಲೆಗೆ ನೀಡುತ್ತಾರೆ ಎಂದು ಪಡೆಯುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು. ಏರ್‌
ಪೋರ್ಟ್‌ ಪಕ್ಕ ಏರೋಸ್ಪೇಸ್‌ಗೊàಸ್ಕರ ಕೊಂಡುಕೊಂಡ ಭೂಮಿಯನ್ನು ಶಿಕ್ಷಣ ಸಂಸ್ಥೆಗೆ ನೀಡಿದ್ದು ಸರಿಯಲ್ಲ. ಇಲ್ಲಿ ಒಂದು ಎಕರೆಭೂಮಿಗೆ 10 ಕೋಟಿ ರೂ.ವರೆಗೂ ಮಾರುಕಟ್ಟೆ ಮೌಲ್ಯ ಇದೆ. ಸರ್ಕಾರಿ ಭೂಮಿ ರಾಜ್ಯದ ಯಾವುದೇ ಭಾಗದಲ್ಲಿದ್ದರೆ ನೀಡಿ. ಕೈಗಾರಿಕಾ ಭೂಮಿ ಬಳಕೆ ಸರಿಯಲ್ಲ ಎಂದರು. ರಾಜ್ಯ
ಬಿಜೆಪಿ ಸರಕಾರವು ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ಯಾವುದೇ ವಿದ್ಯಾಸಂಸ್ಥೆ ಖಾಸಗಿ ವಿವಿಯಾಗಿ ಮಾನ್ಯತೆ ಪಡೆಯಬೇಕಾದರೆ, 25 ಎಕರೆ ಜಮೀನು, ನಿರ್ದಿಷ್ಠ ಹಣಕಾಸಿನ ನಿಧಿ ಸೇರಿದಂತೆ ಅನೇಕ ಮಾನದಂಡ ನಿಗದಿ
ಮಾಡಲಾಗಿದೆ. ಅವರಿಗೆ ಈ ರೀತಿ ಜಮೀನು ಮಂಜೂರು ಮಾಡುತ್ತಿರುವುದು ಸರಿಯಲ್ಲ. ನಾಳೆ ಯಾರು ಬೇಕಾದರೂ ಒಂದು ಕಮಿಟಿ ಅಥವಾ ಟ್ರಸ್ಟ್‌ ಆರಂಭಿಸಿ ಈ ರೀತಿ ವಿವಿ ಹೆಸರಲ್ಲಿ ಸರ್ಕಾರದಿಂದ ಜಮೀನು ಪಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next