ದೋಟಿಹಾಳ: ಏನೋ ಮಾಡಲು ಹೋಗಿ, ಏನು ಮಾಡಿದೆ ನೀನು ಎಂಬುವ ಹಾಡಿನಂತೆ ಈ ಶಾಲೆ ಸದ್ಯದ ಪರಿಸ್ಥಿತಿಯಾಗಿದೆ.
ಮೇಣಸಗೇರಿ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿಯವರಗೆ ಸುಮಾರು 130 ಮಕ್ಕಳು ಕಲಿಯುತ್ತಿದ್ದಾರೆ. ಒಟ್ಟು 7 ಕೊಠಡಿಗಳಲ್ಲಿ ಎರಡು ಕೊಠಡಿಗಳನ್ನು ನೆಲಸಮ ಮಾಡಿದ್ದು, ಸದ್ಯ 5 ಕೊಠಡಿಗಳು ಉಳಿದಿವೆ. ಮುಂದಿನ ಶೈಕ್ಷಣಿಕ ವರ್ಷ ಆರಂಭವಾದಾಗ ಮಕ್ಕಳಿಗೆ ಕೊಠಡಿಗಳ ಸಮಸ್ಯೆ ಎದುರಾಗುತ್ತದೆ. ಈಗಿರುವ 5 ಕೊಠಡಿಗಳಲ್ಲಿ ಬಿಸಿಯೂಟದ ಅಡುಗೆ ಕೊಠಡಿ ಹಾಗೂ ಶಾಲಾ ಕಚೇರಿಗೆ 2 ಕೊಠಡಿಗಳನ್ನು ಉಪಯೋಗಿಸಿದರೆ. ಉಳಿದ ಮೂರು ಕೊಠಡಿಗಳಲ್ಲಿ 1ಂದ 7 ತರಗತಿಯ ಮಕ್ಕಳಿಗೆ ಶಿಕ್ಷಣ ನೀಡುವುದು ಕಷ್ಟವಾಗುತ್ತದೆ.
ಈ ಕುರಿತು ಬಸವರಾಜ ಕೊಡಗಲಿ ಅವರನ್ನು ವಿಚಾರಿಸಿದಾಗ, ಎಚ್ಕೆಆರ್‌ಡಿಪಿ ಯೋಜನೆಯಡಿ ಕೊಠಡಿ ನಿರ್ಮಾಣಕ್ಕೆ ಸುಮಾರು 11 ಲಕ್ಷ ರೂ. ಮಂಜೂರಾಗಿದೆ. ಹೊಸ ಕೊಠಡಿಗಳ ನಿರ್ಮಾಣಕ್ಕೆ ಜಾಗದ ಕೊರತೆ ಇದ್ದ ಕಾರಣ ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರು ಒಪ್ಪಿಗೆ ಪಡೆದು ಶಿಥಿಲಗೊಂಡ ಕೊಠಡಿಗಳನ್ನು ನೆಲಸಮ ಮಾಡಲಾಗಿದೆ. ಆ ವೇಳೆ ಯಾವುದೇ ತಕರಾರು ಮಾಡದ ಭೂದಾನಿಗಳು ಹೊಸ ಕೊಠಡಿಗಳ ನಿರ್ಮಾಣಕ್ಕೆ ತಕರಾರು ಮಾಡುತ್ತಿದ್ದಾರೆ. ಇದರಿಂದಾಗಿ ಕಾಮಗಾರಿ ಸ್ಥಗಿತಗೊಂಡಿದೆ. ಕೊಠಡಿ ನಿರ್ಮಾಣವಾಗದಿದ್ದರೆ ಶಾಲೆ ಆರಂಭವಾದ ಮೇಲೆ ಮಕ್ಕಳಿಗೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ಗ್ರಾಮಸ್ಥರು ಚರ್ಚೆ ಮಾಡಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಹಿಂದೇ ನಮ್ಮ ಹಿರಿಯರ ಮೇಲೆ ದಬ್ಟಾಳಿಕೆ ಮಾಡಿ ಶಾಲಾ ಕೊಠಡಿಗಳನ್ನು ನಿರ್ಮಿಸಿದ್ದಾರೆ. ಸದ್ಯ ನಮ್ಮ ಜಮೀನಿನಲ್ಲಿ ಯಾವುದೇ ಹೊಸ ಕಟ್ಟಡ ನಿರ್ಮಿಸಲು ಜಾಗ ನೀಡುವುದಿಲ್ಲ. ಒಂದು ವೇಳೆ ಗ್ರಾಮಸ್ಥರು ಒತ್ತಾಯ ಮಾಡಿದರೆ. ಗ್ರಾಮದಲ್ಲಿ ಖಾಲಿ ಇರುವ ಅಂಗನವಾಡಿ ಕೇಂದದ ಕಾರ್ಯಕರ್ತೆ ಹುದ್ದೆಗೆ ಕುಟುಂಬದ ಮಹಿಳೆಯೊಬ್ಬರನ್ನು ನೇಮಕ ಮಾಡಿದರೆ ಶಾಲೆಗೆ ಜಾಗ ನೀಡುತ್ತೇನೆ. ಇಲ್ಲದ್ದಿದರೆ ಯಾವುದೇ ಕಾರಣಕ್ಕೂ ಶಾಲಾ ಕೊಠಡಿ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ.
•ಯಲಗುರಪ್ಪ ನಿಂಗಪ್ಪ ಆಳೂರು, ಜಮೀನು ಮಾಲೀಕ
•ಎಂ. ಚನ್ನಬಸಪ್ಪ, ಬಿಇಒ.
Advertisement
ಸಮೀಪ ಮೇಣಸಗೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2018-19ನೇ ಸಾಲಿನಲ್ಲಿ ಎಚ್ಕೆಆರ್‌ಡಿಪಿ ಯೋಜನೆಯಲ್ಲಿ ಎರಡು ಕೊಠಡಿ ನಿರ್ಮಾಣಕ್ಕೆ ಸುಮಾರು 11 ಲಕ್ಷ ರೂ. ಮಂಜೂರಾಗಿದೆ. ಹೊಸ ಕೊಠಡಿಗಳ ನಿರ್ಮಾಣಕ್ಕೆ ಜಾಗದ ಸಮಸ್ಯೆ ಇರುವುದರಿಂದ ಶಿಥಿಲಗೊಂಡ ಎರಡು ಕೊಠಡಿಗಳನ್ನು ನೆಲಸಮ ಮಾಡಲು ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರು ಸಭೆ ಸೇರಿ ತಿರ್ಮಾನಿಸಿ, ಅದರಂತೆ ಒಪ್ಪಿಗೆ ಪಡೆದುಕೊಂಡು ಶಾಲಾ ಶಿಕ್ಷಕರು ಹಾಗೂ ಗುತ್ತಿಗೆದಾರರು ಕೊಠಡಿ ನೆಲಸಮ ಮಾಡಿದರು. ಇಷ್ಟೇಲ್ಲ ಕೆಲಸ ಮುಗಿಯುತ್ತಿದ್ದಂತೆ ಶಾಲೆಗೆ ಜಾಗ ನೀಡಿದ ಭೂದಾನ ಮಾಡಿದ್ದವರ ಪುತ್ರ ಯಲಗುರಪ್ಪ ನಿಂಗಪ್ಪ ಆಳೂರು ತಮ್ಮ ಜಮೀನಿನಲ್ಲಿ ಹೊಸದಾಗಿ ಶಾಲಾ ಕೊಠಡಿಗಳು ನಿರ್ಮಿಸಬೇಡಿ ಎಂದು ತಕರಾರು ತೆಗೆದಿದ್ದಾರೆ. ಇದರಿಂದ ಇದ್ದ ಎರಡು ಕೊಠಡಿಗಳನ್ನು ಕಳೆದುಕೊಂಡು ಹೊಸ ಕೊಠಡಿಗಳನ್ನು ನಿರ್ಮಿಸಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
Related Articles
•ಯಲಗುರಪ್ಪ ನಿಂಗಪ್ಪ ಆಳೂರು, ಜಮೀನು ಮಾಲೀಕ
Advertisement
ಮೆಣಸಗೇರಿ ಶಾಲೆಗೆ ಎರಡು ಕೊಠಡಿಗಳು ಮಂಜೂರುವಾಗಿವೆ. ಆದರೆ ಅಲ್ಲಿ ಭೂದಾನಿಗಳು ಹೊಸ ಕೊಠಡಿಗಳನ್ನು ನಿರ್ಮಿಸಲು ತಕರಾರು ಮಾಡುತ್ತಿದ್ದಾರೆಂದು ಮುಖ್ಯೋಪಾಧ್ಯಾಯರು ತಿಳಿಸಿದಾರೆ. ಈ ಬಗ್ಗೆ ವಿಚಾರಿಸಲು 2-3 ದಿನಗಳಲ್ಲಿ ಮುಖ್ಯೋಪಾಧ್ಯಾಯ ಮತ್ತು ಗ್ರಾಮಸ್ಥರೊಂದಿಗೆ ಚರ್ಚಿಸುತ್ತೇವೆ. ಹಳೇ ಶಾಲಾ ಕೊಠಡಿಗಳನ್ನು ನೆಲಸಮ ಮಾಡಲು ನಾವೂ ಯಾವುದೇ ಆದೇಶ ನೀಡಿಲ್ಲ. ಜಾಗದ ಕೊರತೆ ಇದ್ದ ಕಾರಣ ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರ ಒಪ್ಪಿಗೆ ಪಡೆದುಕೊಂಡು ಕೊಠಡಿಗಳನ್ನು ನೆಲಸಮ ಮಾಡಲಾಗಿದೆ ಎಂದು ಶಾಲಾ ಶಿಕ್ಷಕರು ತಿಳಿಸಿದ್ದಾರೆ.•ಎಂ. ಚನ್ನಬಸಪ್ಪ, ಬಿಇಒ.