Advertisement

ಶಾಲಾ ಆವರಣದಲ್ಲಿ ಭೂ ಕುಸಿತ

03:27 PM Aug 30, 2020 | Suhan S |

ಗದಗ: ನಗರದ ಐತಿಹಾಸಿಕ ಶ್ರೀ ವೀರನಾರಾಯಣ ದೇವಸ್ಥಾನ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ. 2ರ ಆವರಣದಲ್ಲಿ ಭೂ ಕುಸಿತ ಉಂಟಾಗಿದ್ದು, ಶಾಲೆ ರಜೆಯಿಂದಾಗಿ ಅನಾಹುತ ತಪ್ಪಿದಂತಾಗಿದೆ.

Advertisement

ಶುಕ್ರವಾರ ಸಂಜೆಯಿಂದ ಶನಿವಾರ ಬೆಳಗಿನ ಅವಧಿಯಲ್ಲಿ ಭೂ ಕುಸಿತ ಉಂಟಾಗಿದೆ ಎನ್ನಲಾಗಿದೆ. ಸುಮಾರು 10 ಅಡಿಗಿಂತ ಹೆಚ್ಚು ಆಳಕ್ಕೆ ಕುಸಿತವಾಗಿದೆ. ಭೂ ಕುಸಿತದ ಸ್ಥಳ ಹೊಂಡದಂತೆ ಗೋಚರಿಸುತ್ತಿದ್ದು, ನಾಲ್ಕೈದು ಅಡಿಗೆ ನೀರು ಕಾಣಿಸುತ್ತಿರುವುದು ಶಾಲೆಯ ಶಿಕ್ಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ನಗರಸಭೆ ಅಭಿಯಂತರ ಬಂಡಿವಡ್ಡರ್‌ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಭೂ ಕುಸಿತ ಉಂಟಾದ ಸ್ಥಳವನ್ನು ಮುಚ್ಚಿಸುವಂತೆ ಇದೇ ವೇಳೆ ಶಾಲೆಯ ಶಿಕ್ಷಕರು ಮನವಿ ಮಾಡಿದರು. ನವೆಂಬರ್‌ನಲ್ಲಿ ಇದೇಪ್ರದೇಶದ ಅಕ್ಕಪಕ್ಕದ ಎರಡು ಮನೆಗಳಲ್ಲಿ ಭೂ ಕುಸಿತ ಉಂಟಾಗಿ, ಅಂತರ್ಜಲ ಮೇಲಕ್ಕೆ ಬಂದಿತ್ತು. ಅದೇ ಘಟನೆ ಇದೀಗ ಮರುಕಳಿಸಿರುವುದು ಅವಳಿ ನಗರದ ಜನತೆಯಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next