Advertisement

ಮಣಿಪಾಲ ಮಂಚಿಕೆರೆಯಲ್ಲಿ ಮತ್ತೆ ಭೂಮಿ ಬಿರುಕು!

10:54 AM Jun 20, 2019 | Team Udayavani |

ಉಡುಪಿ: ಮಣಿಪಾಲದ ಮಂಚಿಕೆರೆ ನಾಗಬ್ರಹ್ಮಸ್ಥಾನ ಮುಂಭಾಗದ ಕಾಲನಿ ಸಮೀಪದ ಅಡ್ಡರಸ್ತೆಯಲ್ಲಿ ಮಂಗಳವಾರ ಭೂಮಿ ಬಾಯ್ದೆರೆದಿದ್ದು, ಸ್ಥಳೀಯರ ಭೀತಿಗೆ ಕಾರಣವಾಗಿದೆ.

Advertisement

8 ಇಂಚು ಅಗಲ, 200 ಮೀ. ಉದ್ದದವರೆಗೆ ಭೂಮಿ ಬಾಯಿ ಬಿಟ್ಟಿದೆ. ಅಳವೂ ಇದೆ. ಈ ದೃಶ್ಯ ನೋಡಲು ಜನರು ಸ್ಥಳದಲ್ಲಿ ಜಮಾಯಿಸುತ್ತಿದ್ದಾರೆ.
ಕಾರಣವೇನು ಎಂಬುದು ಸಂಬಂಧಪಟ್ಟ ಇಲಾಖೆಯ ಅಧಿಕಾರಗಳ ಭೇಟಿಯ ಬಳಿಕವಷ್ಟೇ ತಿಳಿಯಬೇಕಾಗಿದೆ.

ಕೆಲವು ದಿನಗಳ ಹಿಂದೆಯೇ ಇಲ್ಲಿ ಸಣ್ಣದಾಗಿ ಭೂಮಿ ಬಾಯಿ ಬಿಟ್ಟಿತ್ತು. ಆದರೆ ಮಂಗಳವಾರ ಅದರ ಗಾತ್ರ ವಿಸ್ತಾರವಾದ ಕಾರಣ ಸ್ಥಳೀಯರು ಅತಂಕಕ್ಕೆ ಒಳಗಾಗಿ¨ªಾರೆ.

ಮನೆ, ಬಾವಿಗೆ ಹಾನಿ
ಇಲ್ಲಿನ ಮನೆಯೊಂದರ ಗೋಡೆ, ಬಾವಿಯ ಕಟ್ಟೆ ಹಾಗೂ ಕಾಲನಿ ಸಂಪರ್ಕಿಸುವ ರಸ್ತೆಯಲ್ಲಿ ಕೂಡ ಬಿರುಕು ಕಾಣಿಸಿಕೊಂಡಿದೆ. ಬಿರುಕು ಸುಮಾರು 8 ಇಂಚು ಅಗಲವಿದ್ದು, ಮತ್ತಷ್ಟು ವಿಸ್ತರಿಸುವ ಆತಂಕವಿದೆ.

Advertisement

ಭೂಮಿಯ ಕೆಳಭಾಗದಲ್ಲಿರುವ ಜೇಡಿಮಣ್ಣು ಅಂತರ್ಜಲದ
ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗುತ್ತದೆ. ಆ ಸಂದರ್ಭ ಕುಸಿತ ಉಂಟಾಗಿರಬಹುದು. ಈ ವರ್ಷ ಅಂತರ್ಜಲ ಮಟ್ಟ ಕಡಿಮೆ ಇತ್ತು, ಬೇಸಗೆ ಬಿಸಿಲು ತೀವ್ರವಾಗಿತ್ತು. ಇದೇ ಕಾರಣಕ್ಕೆ ಮಳೆಗಾಲದ ಆರಂಭದಲ್ಲಿ ಬಹುತೇಕ ಕಡೆ ಭೂಕುಸಿತ ಸಂಭವಿಸುತ್ತದೆ.
– ಪ್ರೊ| ಉದಯಶಂಕರ್‌, ಭೂಗರ್ಭ ಶಾಸ್ತ್ರಜ್ಞರು, ಎಂಐಟಿ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next