Advertisement
ರೈತ ಕಾಂತಪ್ಪ ಬಡಿಗೇರ ಈ ಹಿಂದೆ ಗಂಗಾವತಿಯ ಕೆನರಾ ಬ್ಯಾಂಕಿನಲ್ಲಿ 4 ಲಕ್ಷ ರೂ. ಬೆಳೆಸಾಲ ಪಡೆದಿದ್ದರು. ಬೆಳೆ ಬಂದಾಗಲೆಲ್ಲಾ ಅಸಲು, ಬಡ್ಡಿ, ಸೇರಿ ಒಟ್ಟು 2.15 ಲಕ್ಷ ರೂ. ಬ್ಯಾಂಕಿಗೆ ಕಟ್ಟಿದ್ದಾರೆ. ಆದರೆ ಮೂರ್ನಾಲ್ಕು ವರ್ಷಗಳಿಂದ ಸರಿಯಾಗಿ ಮಳೆಯಾಗದೆ ಬೆಳೆ ಬಾರದಿದ್ದರಿಂದ ಬ್ಯಾಂಕಿಗೆ ಹಣ ಪಾವತಿಸಿಲ್ಲ. ಈಗ ಬ್ಯಾಂಕ್‌ನಲ್ಲಿ ಸಾಲ ಮತ್ತು ಬಡ್ಡಿ ಸೇರಿ 8 ಲಕ್ಷ ರೂ. ಬೆಳದಿದೆ. ಕಾಂತಪ್ಪ ಸ್ವಲ್ಪ ಕಾಲಾವಕಾಶ ಕೊಡಿ ಎಂದು ಬ್ಯಾಂಕಿನ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಡೀಸಿಗೆ ಮೊರೆ ಹೋಗುವ ನಿರ್ಧಾರ: ಕೆನರಾ ಬ್ಯಾಂಕಿನಿಂದ 4 ಲಕ್ಷ ಬೆಳೆ ಸಾಲ ಪಡೆದಿದ್ದೆ. ಬೆಳೆ ಬಂದಾಗ 2.15 ಲಕ್ಷ ರೂ. ಕಟ್ಟಿದ್ದೇನೆ. ಈಗ ಬ್ಯಾಂಕಿನವರು 8 ಲಕ್ಷ ರೂ. ಕಟ್ಟಬೇಕು. ಇಲ್ಲದಿದ್ದರೆ ಜಮೀನು ಹರಾಜು ಹಾಕುವುದಾಗಿ ನೋಟಿಸ್‌ನಲ್ಲಿ ಕಳುಹಿದ್ದಾರೆ. ಗ್ರಾಮದಲ್ಲಿ ನೋಟಿಸ್ ಅಂಟಿಸಿದ್ದಾರೆ. ಈ ಬಗ್ಗೆ ಕುಟುಂಬ ಸಮೇತರಾಗಿ ಜಿಲ್ಲಾಧಿ ಕಾರಿಗಳನ್ನು ಭೇಟಿಯಾಗಿ ನಮ್ಮ ಸಮಸ್ಯೆ ತಿಳಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ರೈತ ಕಾಂತಪ್ಪ ಬಡಿಗೇರ ತಿಳಿಸಿದರು.