Advertisement

ಚತುಷ್ಪಥ ರಸ್ತೆಗೆ ಭೂಸ್ವಾಧೀನದ್ದೇ ಸವಾಲು

05:29 PM Mar 26, 2021 | Team Udayavani |

ಹುಬ್ಬಳ್ಳಿ: ಗದಗ ರಸ್ತೆಯಿಂದ-ಅಂಚಟಗೇರಿವರೆಗಿನ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಭೂಸ್ವಾ ಧೀನ ಹಾಗೂ ಅತಿಕ್ರಮಣ ತೆರವು ಜಿಲ್ಲಾಡಳಿತ ಹಾಗೂ ಸ್ಥಳೀಯ ಜನಪ್ರತಿನಿ ಧಿಗಳಿಗೆ ಸವಾಲಿನ ಕಾರ್ಯವಾಗಿದ್ದು, ನಗರ ವ್ಯಾಪ್ತಿಯಲ್ಲಿ ಕಾಮಗಾರಿಗೆ ದೊಡ್ಡ ಹಿನ್ನಡೆಯಾಗಿದೆ.

Advertisement

ಇದು ವಾಣಿಜ್ಯ ನಗರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಅಗಲೀಕರಣ ಮಾಡಬೇಕೆಂಬುದು ದಶಕಗಳ ಬೇಡಿಕೆಯಾಗಿತ್ತು. ಹೀಗಾಗಿ ಚತುಷ್ಪಥ ಕಾಂಕ್ರೀಟ್‌ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಯೋಜನೆ ಕೈಗೊಳ್ಳಲಾಯಿತು. ಸುಮಾರು 126 ಕೋಟಿ ವೆಚ್ಚ ಯೋಜನೆಗೆ 2018ರಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು. ಇನ್ನೇನು 2 ವರ್ಷದಲ್ಲಿ ಯೋಜನೆ ಪೂರ್ಣಗೊಂಡು ನಗರ ಪ್ರವೇಶ ರಸ್ತೆ ಮಾದರಿಯಾಗಲಿದೆ ಎಂದು ಜನಪ್ರತಿನಿಧಿಗಳು ಭರವಸೆ ನೀಡಿದ್ದರು. ಆದರೆ ಮೂಲಸೌಲಭ್ಯ ಸ್ಥಳಾಂತರ, ಮರಗಳ ಕಡಿತ ಸೇರಿ ವಿವಿಧ ಕಾರಣಕ್ಕಾಗಿ ಒಂದೂವರೆ ವರ್ಷ ಕಳೆದಿದ್ದಾರೆ.

ಆಗಿರುವುದಾದರೂ ಏನು?: ಕಾಮಗಾರಿ ವಿಳಂಬದಿಂದಬೇಸತ್ತ ಜನರು ಜನಪ್ರತಿನಿಧಿ ಗಳಿಗೆ, ಗುತ್ತಿಗೆದಾರರಿಗೆಹಿಡಿಶಾಪ ಹಾಕುತ್ತಿದ್ದಂತೆ ಕಾಮಗಾರಿ ಒಂದಿಷ್ಟು ವೇಗ ಪಡೆಯಿತು. ಮೂರು ವರ್ಷದ ಅವಧಿಯಲ್ಲಿಆಗಿರುವುದು 6 ಕಿಮೀ ಮಾತ್ರ. ಅಂಚಟಗೇರಿ ಬಳಿ ಬೈಪಾಸ್‌ ಸೇತುವೆಯಿಂದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸೇತುವೆ ಒಂದು ಭಾಗದಲ್ಲಿ ಕಾಂಕ್ರೀಟ್‌ ರಸ್ತೆ ಮಾಡಿದ್ದಾರೆ. ಇನ್ನೊಂದು ಭಾಗದಲ್ಲಿ ರಸ್ತೆ ಅಗೆದುಕೈಬಿಟ್ಟಿದ್ದಾರೆ. ಇನ್ನು ಗದಗ ರಸ್ತೆಯ ಸೇತುವೆಯಿಂದ ರೈಲ್ವೆನಿಲ್ದಾಣ ಬಳಿಯ ಮೇಲ್ಸೇತುವೆವರೆಗೆ ಒಂದು ಭಾಗದ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಯೋಜನೆಗೆ ಸವಾಲು :

ನಗರ ಹೊರಭಾಗದಲ್ಲಿ ಯಾವುದೇ ಸಮಸ್ಯೆಯಿಲ್ಲದಿದ್ದರೂ ಒಂದು ರಸ್ತೆಯ ನಿರ್ಮಾಣಕ್ಕೆ ಮೂರು ವರ್ಷ ತೆಗೆದುಕೊಂಡಿದ್ದಾರೆ. ಇದೀಗ ನಗರದಲ್ಲಿ ಯೋಜನೆ ಅನುಷ್ಠಾನಕ್ಕೆ ಭೂಸ್ವಾ ಧೀನಅಗತ್ಯವಾಗಿದ್ದು, ಈ ಪ್ರಕ್ರಿಯೆ ಕೈಗೊಳ್ಳಲು ಯಾರೂ ಮುಂದಾಗುತ್ತಿಲ್ಲ. ಇಂಡಿ ಪಂಪ್‌ ವೃತ್ತ ಬಳಿ, ಹಳೇಬಸ್‌ ನಿಲ್ದಾಣ ಬಳಿ ಸೇರಿದಂತೆ ಸುಮಾರು 1.3 ಕಿಮೀ ಭೂಸ್ವಾಧೀನ ಆಗಬೇಕಿದೆ. ಚತುಷ್ಪಥ ರಸ್ತೆಗೆ ಭೂಸ್ವಾಧೀನ ಅಗತ್ಯವಾಗಿದೆ. ಇನ್ನು ಕೆಲವೆಡೆ ಅಕ್ರಮ ಒತ್ತುವರಿಗಳಿದ್ದು, ಅವುಗಳನ್ನು ತೆರವುಗೊಳಿಸುವುದು ಜಿಲ್ಲಾಡಳಿತ, ಮಹಾನಗರ ಪಾಲಿಕೆಗೆ ದೊಡ್ಡ ಸವಾಲಾಗಿದೆ. ಅರವಿಂದ ನಗರ, ಗಿರಿಣಿಚಾಳ ಬಳಿ ಅಲ್ಲಲ್ಲಿ ಒಂದಿಷ್ಟು ಗಟಾರು ನಿರ್ಮಾಣ ಬಿಟ್ಟರೆ ಮತ್ತಾವ ಪ್ರಗತಿಯೂ ಇಲ್ಲ.

Advertisement

ಸವಾರರ ನರಕಯಾತನೆ :

ಕಾಮಗಾರಿ ವಿಳಂಬ, ಸ್ಥಳೀಯ ಜನಪ್ರತಿನಿ ಧಿಗಳ ಮತ ಬ್ಯಾಂಕ್‌ನಿಂದ ಬೆಂಗಳೂರು ಹಾಗೂಕಾರವಾರ ಮಾರ್ಗವಾಗಿ ನಗರ ಪ್ರವೇಶಿಸುವರಸ್ತೆ, ಸುತ್ತಲಿನ ಪ್ರದೇಶ ತೀರಾ ದುಸ್ಥಿತಿಯಲ್ಲಿದೆ. ಬಂಕಾಪುರ ವೃತ್ತದ ಮಾರ್ಗದ ರಸ್ತೆ ಕಿರಿದಾಗಿದೆಎನ್ನುವ ಕಾರಣಕ್ಕೆ ನಗರ, ಗ್ರಾಮೀಣ ಬಸ್‌ಗಳನ್ನುಹೊರತುಪಡಿಸಿ ಉಳಿದ ಸುಮಾರು 2000ಕ್ಕೂಹೆಚ್ಚು ಸಾರಿಗೆ ಸಂಸ್ಥೆ ಬಸ್‌ಗಳು ಅರವಿಂದ ನಗರದಮಾರ್ಗವಾಗಿ ಸಂಚರಿಸುತ್ತಿವೆ. ಇದರೊಂದಿಗೆಹುಬ್ಬಳ್ಳಿ, ಗದಗ, ಬಾಗಲಕೋಟೆ, ವಿಜಯಪುರಕ್ಕೆತೆರಳುವ ಪ್ರತಿಯೊಂದು ವಾಹನಗಳು ಇಲ್ಲಿಂದಲೇ ಸಂಚರಿಸುತ್ತಿವೆ. ರಸ್ತೆ ಕಿರಿದಾಗಿಅಪಘಾತಗಳು ಆಗಾಗ ಸಂಭವಿಸುತ್ತಲೇ ಇವೆ.

ಕಾಮಗಾರಿ ನಡೆಸಬೇಕೋ ಬೇಡವೋ..!? :

ಇದೀಗ ಚನ್ನಮ್ಮ ವೃತ್ತದಲ್ಲಿ ಫ್ಲೈಓವರ್‌ ನಿರ್ಮಾಣಕ್ಕೆ ಸಿದ್ಧತೆಗಳು ನಡೆಯತ್ತಿರುವ ಹಿನ್ನೆಲೆಯಲ್ಲಿ ಈ ವೃತ್ತದಿಂದ ಅಂಬೇಡ್ಕರ್‌ ವೃತ್ತದವರೆಗೆರಸ್ತೆ ಕಾಮಗಾರಿ ನಡೆಸಬೇಕೋ ಬೇಡವೋ ಎನ್ನುವ ಗೊಂದಲ ಅಧಿಕಾರಿಗಳಲ್ಲಿದೆ. ಫ್ಲೆ$çಓವರ್‌ ಪೂರ್ಣಗೊಂಡ ನಂತರವೇ ಕಾಮಗಾರಿಆರಂಭಿಸಬೇಕು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಮಹಾನಗರದ ವಿಳಂಬದ ಯೋಜನೆಗಳಿಗೆ ಇದೊಂದು ಸೇರ್ಪಡೆ ಯಾಗುವುದರಲ್ಲಿ ಅನುಮಾನವಿಲ.

ತಿಂಗಳಿಗೆ ಒಂದು ಕಿಮೀ; ಜುಲೈ ಅಂತ್ಯದ ಗುರಿ :

ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರ ತಿಂಗಳಿಗೆ ಒಂದು ಕಿಮೀ ರಸ್ತೆ ನಿರ್ಮಿಸುವ ಮೂಲಕ ಜುಲೈ ಅಂತ್ಯದೊಳಗೆ ಯೋಜನೆ ಪೂರ್ಣಗೊಳಿಸುವ ಗುರಿ ಹಾಕಿಕೊಂಡಿದೆ. ಆದರೆ ಕಾಮಗಾರಿ ವೇಗ, ಅಡೆತಡೆಗಳನ್ನು ನೋಡಿದರೆ ವರ್ಷವೇ ಬೇಕಾಗುತ್ತಿದೆ. ಮಹಾನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಯೋಜನೆಗಳಿಗೆ ವೇಗ ಹಾಗೂ ಸ್ಥಿತಿಗತಿ ಕುರಿತು ನಿಗಾ ವಹಿಸುವಹೊಣೆಯನ್ನು ಇತ್ತೀಚೆಗೆ ನಡೆದ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಜಿಲ್ಲಾಧಿಕಾರಿಗೆ ವಹಿಸಲಾಗಿತ್ತು.

ಈಗಾಗಲೇ ಕಿಮೀ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಕೆಲ ತಾಂತ್ರಿಕಕಾರಣದಿಂದ ಕಾಮಗಾರಿ ವಿಳಂಬವಾಗಿದೆ. ಆದರೆ ಮುಂದಿನ ನಾಲ್ಕೈದು ತಿಂಗಳಲ್ಲಿ ಕಾಮಗಾರಿಪೂರ್ಣಗೊಳಿಸಬೇಕೆನ್ನುವ ಗುರಿ ಹಾಕಿಕೊಂಡಿದ್ದೇವೆ.ಹೀಗಾಗಿ ಪ್ರತಿ ತಿಂಗಳು 1 ಕಿಮೀನಂತೆ ಕಾಮಗಾರಿ ಕೈಗೊಂಡು ಜುಲೆ„ ಅಂತ್ಯದೊಳಗೆ ಯೋಜನೆ ಪೂರ್ಣಗೊಳ್ಳಲಿದೆ.  –ಆರ್‌.ಕೆ. ಮಠದ, ಇಇ, ರಾಷ್ಟ್ರೀಯ ಹೆದ್ದಾರಿ (ಲೋಕೋಪಯೋಗಿ)

ಯೋಜನೆಗೆ ಮೀಸಲಿಟ್ಟಿದ್ದ ಅನುದಾನ ಬೇರೆಡೆ ವರ್ಗಾಯಿಸಿರಬೇಕು ಎನ್ನುವ ಅನುಮಾನವಿದೆ. ಕೆಲವೊಂದು ಕಡೆ ಭೂಸ್ವಾ ಧೀನ ಮಾಡಬೇಕಿದೆ. ಪ್ರಾಥಮಿಕಕೆಲಸಗಳನ್ನು ಬಾಕಿಯಿಟ್ಟುಕೊಂಡು ಕಾಮಗಾರಿಆರಂಭಿಸಿರುವುದು ಅವೈಜ್ಞಾನಿಕವಾಗಿದೆ.ಪ್ರತಿಯೊಂದು ಯೋಜನೆಯಲ್ಲೂ ದೂರದೃಷ್ಟಿ ಕೊರತೆ ಎದ್ದು ಕಾಣುತ್ತಿದೆ.  –ಸಂತೋಷ ನರಗುಂದ, ಜಿಲ್ಲಾಧ್ಯಕ್ಷ, ಆಮ್‌ ಆದ್ಮಿ ಪಕ್ಷ

 

­ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next