Advertisement

ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ

01:09 PM Feb 04, 2018 | Team Udayavani |

ಸುರತ್ಕಲ್‌ : ಭವಿಷ್ಯದ ರಾಷ್ಟ್ರ, ರಾಜ್ಯವನ್ನು ದೂರದೃಷ್ಟಿಯುಳ್ಳ ಮೂಲಸೌಕರ್ಯದೊಂದಿಗೆ ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಶಾಸಕ ಮೊಯಿದಿನ್‌ ಬಾವಾ ಹೇಳಿದರು.

Advertisement

ಸುರತ್ಕಲ್‌ನಲ್ಲಿ ರಸ್ತೆ ವಿಸ್ತರಣೆ ಕೈಗೆತ್ತಿಕೊಳ್ಳುವ ಪ್ರದೇಶವಾದ ಗುಡ್ಡೆಕೊಪ್ಲ ರಸ್ತೆ ಹಾಗೂ ಚೊಕ್ಕಬೆಟ್ಟು ಸುತ್ತಮುತ್ತ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡುವ ಸಲುವಾಗಿ ಉಪ ಪಾಲಿಕೆ ಕಚೇರಿಯಲ್ಲಿ ಶನಿವಾರ ಆಯೋಜಿಸಲಾದ ನಾಗರಿಕರ ಸಭೆಯಲ್ಲಿ ಮಾತನಾಡಿದರು.

ಅಭಿವೃದ್ಧಿ ಕೇವಲ ಶಾಸಕ ಮನೆ ಸುತ್ತ ಮುತ್ತ ಕೇಂದ್ರೀಕೃತವಾಗಿಲ್ಲ ಗ್ರಾಮಾಂತರ ಪ್ರದೇಶ ಸಹಿತ ಎಲ್ಲೆಡೆ ರಸ್ತೆ ವಿಸ್ತರಣೆ, ಕಾಂಕ್ರೀಟ್‌ ಕಾಮಗಾರಿ ಮೂಲಕ ಶಾಶ್ವತ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದೆ. ಸ್ವತಃ ನಾನು ಮತ್ತು ಕಾರ್ಪೊರೇಟರ್‌ ವಿಸ್ತರಣೆಗೆ ಭೂಮಿ ಬಿಟ್ಟು ಕೊಟ್ಟಿದ್ದೇವೆ ಎಂದರು.

ದಾರಿ ದೀಪದ ವ್ಯವಸ್ಥೆ
ಇದೀಗ ಗುಡ್ಡೆಕೊಪ್ಲ ಜನರ ಬಹುದಿನ ಕನಸು ನನಸಾಗಲಿದೆ. ಒಂದು ಕೋಟಿಗೂ ಮಿಕ್ಕಿ ವೆಚ್ಚದಲ್ಲಿ ರಸ್ತೆ ವಿಸ್ತರಣೆ, ಕಾಂಕ್ರೀಟ್‌ ಕಾಮಗಾರಿ ನಡೆಯಲಿದೆ. ಇದೇ ಸಂದರ್ಭ ಚೊಕ್ಕಬೆಟ್ಟು ರಸ್ತೆ ಬದಿಯಲ್ಲಿ ಫ‌ುಟ್‌ಪಾತ್‌, ಚರಂಡಿ ವ್ಯವಸ್ಥೆ, ವಾಕಿಂಗ್‌ ಮಾಡಲು ಇಕ್ಕೆಲಗಳಲ್ಲೂ ಹಸಿರು ಬೆಳೆಸುವ ಕಾರ್ಯ ನಡೆಯಲಿದೆ. ಇದರಿಂದ ಮುಂಜಾನೆ ವಾಕಿಂಗ್‌ ಹೋಗುವ ಜನರ ಅನುಕೂಲಕ್ಕಾಗಿ ದಾರಿ ದೀಪದ ವ್ಯವಸ್ಥೆ ನಡೆಯಲಿದೆ ಎಂದರು.

ಭೂಮಿ ಬಿಟ್ಟು ಕೊಡುವ ನಾಗರಿಕರನ್ನು ಶಾಸಕ ಮೊದಿನ್‌ ಬಾವಾ ಅಭಿ ನಂದಿಸಿದರು. ವಲಯಾಯುಕ್ತ ರವಿ ಶಂಕರ್‌, ಕಾರ್ಪೊರೇಟರ್‌ ಅಶೋಕ್‌ ಶೆಟ್ಟಿ, ಗುಣಶೇಖರ ಶೆಟ್ಟಿ , ಎಂಜಿನಿಯರ್‌ ಖಾದರ್‌ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next