Advertisement

ಲಾಮಾ ಉತ್ತರಾಧಿಕಾರಿ: ಭಾರತದ ಹಸ್ತಕ್ಷೇಪ ಸಲ್ಲ

12:39 AM Jul 15, 2019 | Sriram |

ಬೀಜಿಂಗ್‌: ಟಿಬೆಟಿಯನ್‌ ಧರ್ಮಗುರು ದಲೈ ಲಾಮಾ ಉತ್ತರಾಧಿಕಾರಿ ಯಾರೆಂಬ ನಿರ್ಧಾರವು ಚೀನದಲ್ಲೇ ಆಗಲಿದೆ.

Advertisement

ಈ ವಿಚಾರದಲ್ಲಿ ಭಾರತವು ಮೂಗು ತೂರಿಸಲು ಬಂದರೆ ದ್ವಿಪಕ್ಷೀಯ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಚೀನ ಎಚ್ಚರಿಸಿದೆ. ಇದೊಂದು ಸೂಕ್ಷ್ಮ ವಿಚಾರ. ದಲೈ ಲಾಮಾ ಅವರ ಉತ್ತರಾಧಿಕಾರಿ ಆಯ್ಕೆಗೆ ಚೀನ ಸರಕಾರದ ಒಪ್ಪಿಗೆ ಅತ್ಯಗತ್ಯ. ಅಲ್ಲದೆ, ಅವರ ಆಯ್ಕೆಯನ್ನೂ 200 ವರ್ಷಗಳಷ್ಟು ಪುರಾತನವಾದ ಪ್ರಕ್ರಿಯೆಯ ಮೂಲಕ ಚೀನದೊಳಗೇ ಮಾಡಲಾಗುತ್ತದೆ. ಇದು ಐತಿಹಾಸಿಕ, ಧಾರ್ಮಿಕ ಮತ್ತು ರಾಜಕೀಯ ವಿಚಾರ ಎಂದು ಟಿಬೆಟ್‌ನ ವೈಸ್‌ ಮಿನಿಸ್ಟರ್‌ ಹುದ್ದೆ ಮಟ್ಟದ ಅಧಿಕಾರಿ ವಾಂಗ್‌ ನೆಂಗ್‌ ಶೆಂಗ್‌ ಹೇಳಿದ್ದಾರೆ. ಅಷ್ಟೇ ಅಲ್ಲ, ಉತ್ತರಾಧಿಕಾರಿ ಆಯ್ಕೆಯ ಅಧಿಕಾರ ಸ್ವತಃ ದಲೈ ಲಾಮಾಗೇ ಇಲ್ಲ ಎಂದೂ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next