Advertisement

Land-For-Jobs Case: ಇಡಿ ಅಧಿಕಾರಿಗಳ ಮುಂದೆ ಹಾಜರಾದ ಲಾಲು ಪ್ರಸಾದ್ ಯಾದವ್

12:11 PM Jan 29, 2024 | Team Udayavani |

ಪಾಟ್ನಾ: ಉದ್ಯೋಗಕ್ಕಾಗಿ ಭೂ ಹಗರಣದ ವಿಚಾರಣೆಗಾಗಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಇಂದು ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

Advertisement

ಭೂ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಲಾಲು ಪ್ರಸಾದ್ ಮತ್ತು ಅವರ ಪುತ್ರ ತೇಜಸ್ವಿ ಯಾದವ್ ಅವರಿಗೆ ಪಾಟ್ನಾ ಕಚೇರಿಯಲ್ಲಿ ವಿಚಾರಣೆಗೆ ಇಡಿ ಸಮನ್ಸ್ ಜಾರಿ ಮಾಡಿತ್ತು. ಸಮನ್ಸ್ ಅಡಿಯಲ್ಲಿ, ಲಾಲು ಪ್ರಸಾದ್ ಅವರಿಗೆ ಇಂದು ಅಂದರೆ ಜನವರಿ 29 ರಂದು ಹಾಜರಾಗುವಂತೆ ತಿಳಿಸಲಾಗಿದೆ. ಜನವರಿ 30 ರಂದು ತೇಜಸ್ವಿ ಯಾದವ್ ಅವರನ್ನು ವಿಚಾರಣೆಗೆ ಸಮನ್ಸ್ ನೀಡಲಾಗಿದೆ.

ಇಡಿ ತಂಡವೊಂದು ಪ್ರಸಾದ್ ಅವರ ಪತ್ನಿ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ಪಾಟ್ನಾದಲ್ಲಿರುವ ಅಧಿಕೃತ ನಿವಾಸಕ್ಕೆ ಸಮನ್ಸ್ ನೀಡಲು ತೆರಳಿತ್ತು. ಪ್ರಸಾದ್ ಮತ್ತು ತೇಜಸ್ವಿ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಪಾಟ್ನಾದ ಬ್ಯಾಂಕ್ ರಸ್ತೆಯಲ್ಲಿರುವ ಇಡಿ ಕಚೇರಿಗೆ ಹಾಜರಾಗುವಂತೆ ತಿಳಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಕಳೆದ ವರ್ಷ ದೆಹಲಿಯಲ್ಲಿ ತೇಜಸ್ವಿ ಒಂದು ಭಾರಿ ಏಜೆನ್ಸಿಯ ಮುಂದೆ ಹಾಜರಾಗಿದ್ದರು. ಇಬ್ಬರೂ ತಮ್ಮ ರಾಜಕೀಯ ಮತ್ತು ಅಧಿಕೃತ ಕೆಲಸದಲ್ಲಿ ನಿರತರಾಗಿರುವ ಕಾರಣ ದೆಹಲಿಯಲ್ಲಿ ಹೇಳಿಕೆ ದಾಖಲಿಸಲು ಸಾಧ್ಯವಾಗುತ್ತಿಲ್ಲ ಎಂದು ಇಡಿಗೆ ತಿಳಿಸಿದ್ದಾರೆ.

ಕೇಂದ್ರದ ವಿರುದ್ಧ ಆರ್‌ಜೆಡಿ ಕಾರ್ಯಕರ್ತರಿಂದ ಪ್ರತಿಭಟನೆ:
ವಿಚಾರಣೆಗೆ ಕಚೇರಿ ಮುಂದೆ ಲಾಲೂ ಪ್ರಸಾದ್ ಯಾದವ್ ಹಾಜರಾಗುತ್ತಿದ್ದಂತೆ ಆರ್‌ಜೆಡಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರೀಯ ಸಂಸ್ಥೆಯ ಕಚೇರಿಯ ಮುಂದೆ ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

Advertisement

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 9 ರಂದು ವಿಚಾರಣೆಗೆ ಹಾಜರಾಗುವಂತೆ ದೆಹಲಿ ನ್ಯಾಯಾಲಯವು ಶನಿವಾರ ರಾಬ್ರಿ ದೇವಿ ಮತ್ತು ಪುತ್ರಿ ಹೇಮಾ ಯಾದವ್ ಮತ್ತು ಇತರರಿಗೆ ಸಮನ್ಸ್ ನೀಡಿದ್ದು, ಲಾಲು ಯಾದವ್ ಜೊತೆಗೆ ರಾಬ್ರಿ ದೇವಿ ಮತ್ತು ಮಿಸಾ ಪ್ರಕರಣದ ಆರೋಪಿಗಳಾಗಿದ್ದು, ಇದರ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಲಾಲೂ ಪ್ರಸಾದ್ ಯಾದವ್ ಅವರು 2004 ರಿಂದ 2009 ರ ಅವಧಿಯಲ್ಲಿ ಕೇಂದ್ರ ರೈಲ್ವೇ ಸಚಿವರಾಗಿದ್ದಾಗ ಅವರು ಮತ್ತು ಅವರ ಕುಟುಂಬ ಸದಸ್ಯರು ರೈಲ್ವೆಯಲ್ಲಿ ಕೆಲಸ ಕೊಡಿಸಲು ಆಸ್ತಿಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳುತ್ತಿದ್ದರು ಎಂಬ ಗಂಭೀರ ಆರೋಪ ಇರವ ಕುಟುಂಬದ ಮೇಲಿದೆ.

ಇದನ್ನೂ ಓದಿ: ಚುನಾವಣೆಗೂ ಮೊದಲೇ ಫಾರೂಕ್ ಅಬ್ದುಲ್ಲಾಗೆ ದೊಡ್ಡ ಹೊಡೆತ: ಬಿಜೆಪಿ ಸೇರಿದ ಉನ್ನತ ಮಟ್ಟದ ನಾಯಕರು

Advertisement

Udayavani is now on Telegram. Click here to join our channel and stay updated with the latest news.