ಹೊಸದಿಲ್ಲಿ : ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮೇವು ಹಗರಣದ ಕ್ರಿಮಿನಲ್ ಸಂಚಿನ ಆರೋಪದ ಎಲ್ಲ ನಾಲ್ಕು ಕೇಸುಗಳಲ್ಲಿ ವಿಚಾರಣೆಯನ್ನು ಎದುರಿಸಬೇಕು ಎಂದು ಸುಪ್ರೀಂ ಕೋರ್ಟ್ ಇಂದು ಸೋಮವಾರ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ತನ್ನ ವಿರುದ್ಧದ ಮೇವು ಹಗರಣದ ಆರೋಪಗಳನ್ನು ಕೈಬಿಡುವಂತೆ ಲಾಲು ಪ್ರಸಾದ್ ಯಾದವ್ ಸಲ್ಲಿಸಿದ್ದ ಅರ್ಜಿಯನ್ನು ವಿರೋಧಿಸಿ ಸಿಬಿಐ ಮಾಡಿಕೊಂಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ಪುರಸರRರಿಸಿ, “ಮೇವು ಹಗರಣದ ಎಲ್ಲ ಕೇಸುಗಳಲ್ಲಿ ಲಾಲು ವಿಚಾರಣೆ ಎದುರಿಸಬೇಕು’ ಎಂದು ಸ್ಪಷ್ಟಪಡಿಸಿತು. ಅಂತೆಯೇ ಸುಪ್ರೀಂ ಕೋರ್ಟಿನ ಈ ಆದೇಶ ಭಾರೀ ಲಾಲುಗೆ ಭಾರೀ ದೊಡ್ಡ ಹಿನ್ನಡೆ ಎನಿಸಿತು.
ಲಾಲು ವಿರುದ್ಧದ ಆರೋಪಗಳು ಪರಸ್ಪರ ವಿಭಿನ್ನ ಅಪರಾಧಗಳಿಗೆ ಸಂಬಂಧಿಸಿರುವುದರಿಂದ ಅವೆಲ್ಲವುಗಳನ್ನು ಒಂದಾಗಿ ಸೇರಿಸಲಾಗದು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ಹಾಗಾಗಿ ಲಾಲು ಯಾದವ್ ಅವರಿನ್ನು ವೇವು ಹಗರಣ ಸಂಬಂಧಿಸಿದ ಎಲ್ಲ ಕೇಸುಗಳಲ್ಲಿ ವಿಚಾರಣೆ ಎದುರಿಸುವುದು ಅನಿವಾರ್ಯವಾಗಿದೆ.
ಈ ಹಿಂದೆ ಜಾರ್ಖಂಡ್ ಹೈಕೋರ್ಟ್, ಆರ್‌ಜೆಡಿ ಮುಖ್ಯಸ್ಥ ಹಾಗೂ ಹಿರಿಯ ರಾಜಕಾರಣಿಯಾಗಿರುವ ಲಾಲು ಅವರ ವಿರುದ್ದದ ಮೇವು ಹಗರಣದ ಆರೋಪಗಳನ್ನು ಕೈಬಿಟ್ಟಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಿಬಿಐ, ಸುಪ್ರೀಂ ಕೋರ್ಟ್ ಮೆಟ್ಟಲೇರಿತ್ತು.
ಇದೇ ವೇಳೆ ಲಾಲು ಅವರು, ರಾಜಕಾರಣಿಯಾಗಿ ಪರಿವರ್ತಿತನಾಗಿರುವ ಡಾನ್ ಮೊಹಮ್ಮದ್ ಶಹಾಬುದ್ದೀನ್ ಜತೆಗೆ ನಡೆಸಿದ ಸಂಭಾಷಣೆಯ ಆಡಿಯೋ ಟೇಪ್ ಒಂದನ್ನು ಪ್ರಸಾರ ಮಾಡಿತ್ತು. ಈ ಆಡಿಯೋ ಟೇಪ್‌ನಲ್ಲಿ ಲಾಲು ಅವರು ಶಹಾಬುದ್ದೀನ್ ನಿಂದ ಕೆಲವೊಂದು ಸೂಚನೆಗಳನ್ನು ಪಡೆಯುತ್ತಿದ್ದುದು ಬಹಿರಂಗವಾಗಿತ್ತು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ನೇತೃತ್ವದ ವಿರೋಧ ಪಕ್ಷ ಒತ್ತಾಯಿಸಿದೆ.