Advertisement

ಲಾಲು ಪಾಕಪ್ರವೀಣ ರಾಜಕಾರಣಿ!- Youtuber ನ ಪ್ರಶ್ನೆಗೆ ರಾಹುಲ್‌ ಗಾಂಧಿ ಉತ್ತರ

07:35 PM Apr 23, 2023 | Team Udayavani |

ನವದೆಹಲಿ: “ದೇಶದ ಕೆಲವೇ ಕೆಲವು ರಾಜಕಾರಣಿಗಳು ಪಾಕಪ್ರವೀಣರಾಗಿದ್ದು, ಅಂಥವರ ಪೈಕಿ ಅತ್ಯುತ್ತಮವಾಗಿ, ಸ್ವಾದಿಷ್ಟವಾಗಿ ಅಡುಗೆ ಮಾಡಬಲ್ಲ ರಾಜಕಾರಣಿ ಎಂದರೆ ಅದು ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್‌ ಯಾದವ್‌” ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಸದಾ ರಾಜಕೀಯ ವಿಚಾರಗಳನ್ನು ಮಾತ್ರ ಹಂಚಿಕೊಳ್ಳುತ್ತಿದ್ದ ರಾಹುಲ್‌, ಇತ್ತೀಚೆಗೆ ಯೂಟ್ಯೂಬ್‌ ಚಾನೆಲ್‌ ಒಂದರ ಜತೆಗೆ ಅಡುಗೆ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. “ಮನೆಯಲ್ಲಿ ನನ್ನ ತಾಯಿ ಸೋನಿಯಾ ಗಾಂಧಿ ಅದ್ಭುತವಾಗಿ ಅಡುಗೆ ಮಾಡುತ್ತಾರೆ. ಆ ನಂತರದ ಸ್ಥಾನ ನನ್ನ ಸಹೋದರಿ ಪ್ರಿಯಾಂಕಾ ವಾದ್ರಾಳದ್ದು. ನಾನು ಈವರೆಗೆ ಕೈ ರುಚಿ ನೋಡಿದ ರಾಜಕಾರಣಿಗಳ ಪೈಕಿ ಮಾಜಿ ಸಿಎಂ ಲಾಲು ಅತ್ಯುತ್ತಮ ಶೆಫ್ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next